Loading Events

« All Events

ಪಳಕಳ ಸೀತಾರಾಮಭಟ್ಟ

July 5

..೧೯೩೦ ಸ್ವಾತಂತ್ರ್ಯಪೂರ್ವದಲ್ಲಿ ಪ್ರಾರಂಭವಾಗಿದ್ದ ಪತ್ರಿಕೆಗಳಾದ ಕಥಾವಳಿ, ಬಾಲಚಂದ್ರ, ಸುವಾಸಿನಿ, ಪಾಪಚ್ಚಿ, ತುತ್ತೂರಿ ಮುಂತಾದ ಪತ್ರಿಕೆಗಳಿಂದ ಹಿಡಿದು ಇಂದು ಪ್ರಕಟಗೊಳ್ಳುತ್ತಿರುವ ವಾರಪತ್ರಿಕೆಗಳಾದ ಸುಧಾ, ತರಂಗ, ಕರ್ಮವೀರ, ಮುಂತಾದವುಗಳ ಜೊತೆಗೆ ಉದಯವಾಣಿ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಮುಂತಾದ ದಿನ ಪತ್ರಿಕೆಗಳಲ್ಲೂ ಮಕ್ಕಳ ಕತೆ, ಪದ್ಯಗಳ ಮುಖಾಂತರ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಲೇಖಕರ ಹೆಸರೆಂದರೆ ಸೀತಾರಾಮಭಟ್ಟರದು. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಹತ್ತಿರದ ಪಳಕಳದಲ್ಲಿ ೧೯೩೦ ರ ಜುಲೈ ೫ ರಂದು. ತಂದೆ ಈಶ್ವರ ಭಟ್ಟರು, ತಾಯಿ ಲಕ್ಷ್ಮೀ ಅಮ್ಮ. ಪ್ರಾರಂಭಿಕ ಶಿಕ್ಷಣ ಸ್ಥಳೀಯ ಶಾಲೆಯಲ್ಲಿ, ಪ್ರೌಢಶಾಲಾ ಶಿಕ್ಷಣ ಮೂಡಬಿದಿರೆ, ಖಾಸಗಿಯಾಗಿ ಪಡೆದದ್ದು ಎಂ.ಎ, ಬಿ.ಎಡ್‌. ಪದವಿಗಳು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಉದ್ಯೋಗವನ್ನಾರಂಭಿಸಿ ಮೂಡಬಿದಿರೆಯ ಜೈನ್‌ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ ೧೯೮೮ ರಲ್ಲಿ ನಿವೃತ್ತಿ. ಶಾಲಾಬಾಲಕನಾಗಿದ್ದಾಗ ಸೋದರತ್ತೆ ಚೆನ್ನಕ್ಕ ಹೇಳುತ್ತಿದ್ದ ಕಥೆಗಳು, ಪಂಜೆಯವರ ಡೊಂಬರ ಚೆನ್ನೆ, ನಾಗಣ್ಣನ ಕನ್ನಡಕ, ಉದಯರಾಗ, ತೆಂಕಣಗಾಳಿಯಾಟ ಮೊದಲಾದ ಪದ್ಯಗಳು; ಮೂರು ಕರಡಿಗಳು, ಇಲಿಗಳ ಥಕಥೈ, ಗುಡುಗುಡು ಗುಮ್ಮಟ ದೇವರು ಮೊದಲಾದ ಕಥೆಗಳನ್ನೂ ಓದಿ ಪ್ರಭಾವಿತರಾಗಿ ಹೈಸ್ಕೂಲಿಗೆ ಬರುತ್ತಿದ್ದಂತೆ ತಾವು ಕಥೆ, ಕವನಗಳನ್ನೂ ರಚಿಸತೊಡಗಿದರು. ಗುರುಗಳಾದ ರಘುಚಂದ್ರಶೆಟ್ಟಿ, ಶ್ರೀಕಾಂತ ರೈ ಮತ್ತು ಸಾಹಿತಿ ರಾ.ಮೊ. ವಿಶ್ವಾಮಿತ್ರ ಇವರುಗಳ ಒತ್ತಾಸೆಯಿಂದ ಬರೆದ ಹಲವಾರು ಕತೆಗಳು ಅಂದಿನ ಪತ್ರಿಕೆಗಳಾದ ಕಥಾವಳಿ, ಬಾಲಚಂದ್ರ, ಸುವಾಸಿನಿ, ಪಾಪಚ್ಚಿ, ತುತ್ತೂರಿ ಮುಂತಾದವುಗಳಲ್ಲಿ ಪ್ರಕಟವಾಗತೊಡಗಿದವು. ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರದಲ್ಲಿಯೂ ಕೃತಿರಚಿಸಿರುವ ಪಳಕಳರವರು ಚಿಣ್ಣರ ಹಾಡುಗಳು, ಕಿರಿಯರ ಕಿನ್ನರಿ, ತಿಮ್ಮನ ತುತ್ತೂರಿ, ಮುಂತಾದ ೩೫ ಕ್ಕೂ ಹೆಚ್ಚು ಪದ್ಯ ಸಂಕಲನಗಳು, ಗಡಿಬಿಡಿಗುಂಡ, ಕುಂಟುಂ ಕುಟುಂ ಕಪ್ಪೆಯಣ್ಣ ಮುಂತಾದ ೧೦೦ ಕ್ಕೂ ಹೆಚ್ಚು ಮಕ್ಕಳ ಕಥಾ ಸಂಕಲನಗಳು; ಏಕಲವ್ಯ, ಭಕ್ತಧ್ರುವ, ಮಾದನೂ ಹುಲಿಯೂ, ಅವಿವೇಕಿರಾಜ ಅರೆಹುಚ್ಚು ಮಂತ್ರಿ ಮೊದಲಾದ ೧೫ ಕ್ಕೂ ಹೆಚ್ಚು ನಾಟಕ, ಪ್ರಹಸನಗಳು,  ಈಶ್ವರ ಚಂದ್ರ ವಿದ್ಯಾಸಾಗರ್, ಭಾರತ ರತ್ನ, ಮಕ್ಕಳ ಮಿತ್ರ ಮುಂತಾದ ಮಕ್ಕಳ ಪ್ರಬಂಧ, ಕಾದಂಬರಿಗಳು; ಪ್ರೌಢರಿಗಾಗಿ ಚುಟುಕು ಚೂರು ಜಿನುಗು ಜೇನು, ಪಂಚಾಮೃತ ಮುಂತಾದವು ಸೇರಿ ರಚಿಸಿದ ಒಟ್ಟು ಸಾಹಿತ್ಯ ಕೃತಿಗಳ ಸಂಖ್ಯೆ ಸುಮಾರು ೧೫೦ ಕ್ಕೂ ಹೆಚ್ಚು. ಮಕ್ಕಳ ಸಾಹಿತ್ಯಕ್ಕೆ ಪಳಕಳ ರವರ ಕೊಡುಗೆ ದೊಡ್ಡದೆ. ಮಕ್ಕಳ ಬೌದ್ಧಿಕ ಬೆಳವಣಿಗೆಯ ಕಡೆ ಗಮನ ಹರಿಸಿ, ಆ ವಯಸ್ಸಿನ ಮಕ್ಕಳ ಕೈಕಾಲು ಚಲನೆ, ಆಟಪಾಟಗಳ ಲಯಕ್ಕೆ ತಕ್ಕಂತಹ ಪದ್ಯಗಳನ್ನು  ಬರೆದು ಪಂಜೆ, ಎಂ.ಎನ್‌. ಕಾಮತ್‌, ಮತ್ತು ಜಿ.ಪಿ. ರಾ%B

Details

Date:
July 5
Event Category: