ಪಾ. ವೆಂ. ಆಚಾರ‍್ಯ

Home/Birthday/ಪಾ. ವೆಂ. ಆಚಾರ‍್ಯ
Loading Events
This event has passed.

೬-೨-೧೯೧೫ ೪.೫.೧೯೯೨ ಪಾ.ವೆಂ. ಆಚಾರ‍್ಯರು ಹುಟ್ಟಿದ್ದು ಉಡುಪಿಯಲ್ಲಿ. ತಂದೆ ಲಕ್ಷ್ಮೀನಾರಾಯಣ ಆಚಾರ‍್ಯ, ತಾಯಿ ಸೀತಮ್ಮ. ಉಡುಪಿಯ ಬಳಿಯ ಅನಂತೇಶ್ವರದಲ್ಲಿ ಎಸ್.ಎಸ್.ಎಲ್.ಸಿ.ವರೆಗೆ. ನಂತರ ಹಿಂದಿರಾಷ್ಟ್ರ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣ. ಕೆಲಕಾಲ ಅಂಗಡಿ ಗುಮಾಸ್ತರಾಗಿ, ಕಂಪನಿಯ ಕಾರ‍್ಯದರ್ಶಿಯಾಗಿ, ಶಿಕ್ಷಕರಾಗಿಯೂ ದುಡಿದರು. ನಂತರ ಸೇರಿದ್ದು ಪತ್ರಿಕೋದ್ಯಮ. ಪಾಡಿಗಾರು ವೆಂಕಟರಮಣ ಆಚಾರ‍್ಯರದು ಪ್ರಗತಿಪರ ಧೋರಣೆ. ಲೋಕ ಶಿಕ್ಷಣ ಟ್ರಸ್ಟ್ ಸೇರಿ, ಕರ್ಮವೀರ ಉಪಸಂಪಾದಕರಾಗಿ ಕಸ್ತೂರಿಯ ಸಂಪಾದಕರಾಗಿ ನಿವೃತ್ತಿ ಹೊಂದಿದರು. ಪಾ.ವೆಂ. ಆಚಾರ‍್ಯರಿಗೆ ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಶ್ರೇಷ್ಠ ಸಾಧನೆಗಾಗಿ ಗೋಯಂಕ ಪ್ರಶಸ್ತಿ ದೊರೆತದ್ದು ವಿಶೇಷ. ಇದುವರೆಗೆ ಈ ಪ್ರಶಸ್ತಿ ಪಡೆದವರಲ್ಲಿ ದೈನಂದಿನ ಪತ್ರಿಕೆಗೆ ಸಂಬಂಸಿದವರೇ ಹೆಚ್ಚು. ಕಸ್ತೂರಿಯಂತಹ ಮಾಸ ಪತ್ರಿಕೆ ಸಂಪಾದಕರಿಗೆ ಸಂದಿತೆಂದರೆ ಕಸ್ತೂರಿ ಪತ್ರಿಕೆಯ ಘನತೆಯ ದ್ಯೋತಕ. ಆದರೆ ದುರ್ವಿ ಎಂದರೆ ಪ್ರಶಸ್ತಿ ಸ್ವೀಕರಿಸುವ ಮೊದಲೇ ಜೀವನರಂಗದಿಂದ ನಿರ್ಗಮಿಸಿದ್ದರು. (೪.೫.೧೯೯೨) ಕಿಶೋರಾವಸ್ಥೆಯಿಂದಲೇ ಕಾವ್ಯರಚನೆ ಪ್ರಾರಂಭ. ಹರಟೆ, ವ್ಯಂಗ್ಯ, ವಿಡಂಬನಾತ್ಮಕ ಪ್ರಬಂಧ, ತುಳುಭಾಷೆಯಲ್ಲೂ ಸಾಹಿತ್ಯ ನಿರ್ಮಾಣ. ಒಂದುವರೆ ಸಾವಿರಕ್ಕೂ ಹೆಚ್ಚು ಹಾಸ್ಯ ಲೇಖನ ಬರೆದ ದಾಖಲೆ. ಪಾವೆಂ, ಆಚಾರ‍್ಯ, ಲಾಂಗೂಲಾಚಾರ‍್ಯ, ಮುಂತಾದ ನಾಮಧೇಯದಿಂದ ಸಾಹಿತ್ಯ ರಚನೆ. ಪ್ರಹಾರ, ಲೋಕದ ಡೊಂಕು, ವಿಪರೀತ, ವಕ್ರದೃಷ್ಟಿ ಅವರ ಪ್ರಮುಖ ಪ್ರಬಂಧ ಸಂಕಲನಗಳು. ಕವನ ಸಂಕಲನ ‘ಕೆಲವು ಪದ್ಯಗಳು’ ; ಬಯ್ಯಮಲ್ಲಿಗೆ-ತುಳು ಕವನಗಳು ; ಪದಾರ್ಥ ಚಿಂತಾಮಣಿಯಂತೂ ಪದದ ಮೂಲ ಶೋಸಿ ಅವರು ನೀಡುತ್ತಿದ್ದ ಅರ್ಥವನ್ನು ಓದಿದವರು ಬೆರಗಾಗುವಂತೆ ಮಾಡುತ್ತಿದ್ದರು. ಅವರ ‘ಮಂಜೂಷಾ’ ಪುಸ್ತಕ ಬಿಡುಗಡೆ ಮಾಡಿದ ಕೆಲವು ದಿವಸ ಬದುಕಿದ್ದರು. ಅವರಿಗೆ ಸಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ-ಮುಂಬಯಿ ಸರಕಾರದ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ, ಪಿ.ಆರ್.ರಾಮಯ್ಯ ಪ್ರಶಸ್ತಿ ಮುಂತಾದವು. ಇದೇ ದಿನ ಹುಟ್ಟಿದ ಸಾಹಿತಿಗಳು : ಆ. ನೇ. ಉಪಾಧ್ಯೆ – ೧೯೦೬-೮.೧೦.೧೯೭೫ ಮಧುರಾ ಬಾಯಿ ಎಂ. – ೧೯೪೫ ದಾಶರಥಿ ದೀಕ್ಷಿತ್ – ೧೯೨೧-೨೮.೮.೧೯೮೫ ಪ್ರಭಾಕರ ಜೋಶಿ – ೧೯೪೬ ವೆಂಕಟರಮಣ ಭಟ್ ಮಿತ್ತೂರು – ೧೯೨೮ ಮಾಲ. ಜಿ. ರಾವ್ – ೧೯೪೮

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top