Loading Events

« All Events

  • This event has passed.

ಪಿ.ಜಿ.ಲಕ್ಷ್ಮೀನಾರಾಯಣ

September 7, 2023

೦೭.೦೯.೧೯೩೬ ಮೃದಂಗ, ಮೋರ್ಚಿಂಗ್ ವಾದ್ಯಗಳ ಪ್ರಸಿದ್ಧ ವಾದಕರಾದ ಲಕ್ಷ್ಮೀನಾರಾಯಣ ಹುಟ್ಟಿದ್ದು ಮೈಸೂರು. ವಿದ್ವಾನ್ ಎಂ.ಆರ್. ರಾಜಪ್ಪನವರಲ್ಲಿ ಮೃದಂಗ ಶಿಕ್ಷಣ, ವಿದ್ವತ್‌ ಪರೀಕ್ಷೆಯಲ್ಲಿ ಪಡೆದ ದ್ವಿತೀಯ ರ‍್ಯಾಂಕ್, ಎಂ.ಎಲ್. ಶಿವಯ್ಯ ಹಾಗೂ ಟಿ. ಪುಟ್ಟಸ್ವಾಮಯ್ಯನವರಲ್ಲಿ ಪಡೆದ ಗಾಯನ ಶಿಕ್ಷಣ. ಮೋರ್ಚಿಂಗ್‌ ವಾದನದಲ್ಲಿ ಪಡೆದ ವಿಶೇಷ ಪರಿಣತಿ. ದೇಶದ ಉದ್ದಗಲಕ್ಕೂ ಸಂಚರಿಸಿ ನೀಡಿದ ಕಾರ್ಯಕ್ರಮ. ಕರ್ನಾಟಕದ ಎಲ್ಲೆಡೆ, ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳ ಪ್ರಮುಖ ಸಭೆ, ಸಂಗೀತ ಸಮಾರಂಭಗಳಲ್ಲಿ ಹಿರಿ-ಕಿರಿಯ ಕಲಾವಿದರೆನ್ನದೆ ನೀಡಿದ ಮೃದಂಗವಾದನದ ಸಹಕಾರ. ಕೆಲವು ಕಚೇರಿಗಳಲ್ಲಿ ನಡೆಸಿಕೊಟ್ಟ ಮೋರ್ಚಿಂಗ್‌ ವಾದನದ ಪೂರ್ಣಾವಧಿ ಕಾರ್ಯಕ್ರಮ. ದಸರಾ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿ ನಡೆದ ದರ್ಬಾರ್‌ ಸಭಾಂಗಣದಲ್ಲಿ ಅನೇಕ ಸಂಗೀತ ದಿಗ್ಗಜರಿಗೆ ನೀಡಿದ ಪಕ್ಕವಾದ್ಯ. ಬೆಂಗಳೂರು ಆಕಾಶವಾಣಿಯ ನಿಲಯದ ಕಲಾವಿದರಾಗಿ, ಮೃದಂಗ ವಾದನವು ಆಕಾಶವಾಣಿಯಿಂದ ಪ್ರಸಾರ. ಮಲೇಷಿಯಾ,ಥೈಲ್ಯಾಂಡ್‌, ಪೂರ್ವಏಷ್ಯ, ಸಿಲೋನ್, ಸಿಂಗಾಪೂರ್‌, ಮನಿಲಾ ಮುಂತಾದೆಡೆ ನಡೆಸಿಕೊಟ್ಟ ಕಾರ್ಯಕ್ರಮಗಳು. ಬೆಂಗಳೂರಿನ ಗಾಯನಸಮಾಜ, ಶ್ರೀಕೃಷ್ಣ ಸಂಗೀತ ಸಭಾ, ಕರ್ನಾಟಕ ಗಾನ ಕಲಾಪರಿಷತ್ತು, ಮಲ್ಲೇಶ್ವರಂ ಸಂಗೀತ ಸಭಾ ಮುಂತಾದೆಡೆ ನೀಡಿದ ಪ್ರಮುಖ ಕಾರ್ಯಕ್ರಮಗಳು. ಮೈಸೂರಿನ ವರಲಕ್ಷ್ಮೀ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌‌ನಿಂದ ತಾಳವಾದ್ಯ ಪ್ರವೀಣ, ಹನುಮಜಯಂತಿ ಉತ್ಸವ, ಸಂದರ್ಭದ ಸಂಗೀತೋತ್ಸವದಲ್ಲಿ ಮೃದಂಗವಾದ್ಯ ಪ್ರವೀಣ ಬಿರುದು, ಹಲವಾರು ಸಂಘ – ಸಂಸ್ಥೆಗಳಿಂದ ಸನ್ಮಾನ.   ಇದೇ ದಿನ ಹುಟ್ಟಿದ ಕಲಾವಿದರು ಚನ್ನಕೇಶವನ್‌ ಎಂ.ಕೆ. -೧೯೫೨.

* * *

Details

Date:
September 7, 2023
Event Category: