ಪಿ. ಲಂಕೇಶ್

Home/Birthday/ಪಿ. ಲಂಕೇಶ್
Loading Events
This event has passed.

೮.೩.೧೯೩೫ ೨೫.೧.೨೦೦೦ ಸಾಹಿತ್ಯ, ಚಲನಚಿತ್ರ, ಕೃಷಿಕರಾಗಿ ಪ್ರಮುಖ ಸ್ಥಾನ ಗಳಿಸಿದ ಪಿ. ಲಂಕೇಶ್‌ರವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕೊನಗನಹಳ್ಳಿ. ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಕೊನಗನಹಳ್ಳಿ. ಶಿವಮೊಗ್ಗೆಯಲ್ಲಿ  ಪ್ರೌಢಶಾಲೆ ಮತ್ತು ಇಂಟರ್ ಮೀಡಿಯೆಟ್. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. (ಆನರ್ಸ್), ಮೈಸೂರಿನಲ್ಲಿ ಎಂ.ಎ. (ಇಂಗ್ಲಿಷ್) ಪದವಿ. ೧೯೫೯ರಿಂದ ೬೨ರವರೆಗೆ ತಾವು ಓದಿದ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ (ಸಹ್ಯಾದ್ರಿ ಕಾಲೇಜ್) ಅಧ್ಯಾಪಕ ವೃತ್ತಿ ಆರಂಭ. ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನಲ್ಲಿ ೧೯೬೨-೬೫ರವರೆಗೆ. ಸರ್ಕಾರಿ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಒಂದು ವರ್ಷ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ  ೧೯೬೬-೭೮ರವರೆಗೆ ಅಧ್ಯಾಪಕ ವೃತ್ತಿ. ೧೯೭೮ರಲ್ಲಿ ರಾಜೀನಾಮೆ. ಸ್ವಯಂ ನಿವೃತ್ತಿಯ ನಂತರ ಆಯ್ದುಕೊಂಡದ್ದು ಪತ್ರಿಕೋದ್ಯಮ. ‘ಲಂಕೇಶ್ ಪತ್ರಿಕೆ’ ಪ್ರಾರಂಭ. ಹರಿತ ಬರವಣಿಗೆಯಿಂದ ಕನ್ನಡ ಜಾಣ-ಜಾಣೆಯರ ಮನ ಗೆದ್ದ ಪತ್ರಿಕೆ. ಇವರು ಬರೆದ ಮೊದಲ ಕಥೆ ‘ವಾಮನ’ (೧೯೫೮) ವಿಮರ್ಶಕರ ಗಮನ ಸೆಳೆಯಿತು. ಮತ್ತೊಂದು ಮಹತ್ವದ ಕಥೆ ‘ರೊಟ್ಟಿ’. ಮನುಷ್ಯನ ಸೂಕ್ಷ್ಮ ಸಂವೇದನೆಗಳನ್ನು ಪ್ರತಿಬಿಂಬಿಸುವ ಕಥೆ. ಹಲವಾರು ಕೃತಿಗಳ ರಚನೆ-ಕೆರೆಯ ನೀರನು ಕೆರೆಗೆ ಚೆಲ್ಲಿ, ನಾನಲ್ಲ, ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ, ಕಲ್ಲು ಕರಗುವ ಸಮಯ, ಉಲ್ಲಂಘನೆ ಮುಂತಾದ ಕಥಾ ಸಂಕಲನಗಳು.  ತಲೆಮಾರು, ಕವನ ಸಂಕಲನ. ಬಿರುಕು, ಅಕ್ಕ, ಮುಸ್ಸಂಜೆಯ ಕಥಾಪ್ರಸಂಗ ಮೊದಲಾದ ಕಾದಂಬರಿಗಳು. ತೆರೆಗಳು, ಟಿ. ಪ್ರಸನ್ನನ ಗೃಹಸ್ಥಾಶ್ರಮ, ಸಂಕ್ರಾಂತಿ, ಗುಣಮುಖ ಮೊದಲಾದ ನಾಟಕಗಳು. ಪಾಪದ ಹೂಗಳು, ಈಡಿಪಸ್, ಅಂತಿಗೊನೆ ಮೊದಲಾದ ಅನುವಾದಗಳು. ಚಲನಚಿತ್ರದಲ್ಲಿ ಪಾತ್ರ ವಹಿಸಿದ್ದಲ್ಲದೆ ಅನುರೂಪ, ಎಲ್ಲಿಂದಲೋ ಬಂದವರು, ಅವರು ನಿರ್ದೇಶಿಸಿದ ಚಿತ್ರಗಳು. ಪಲ್ಲವಿ ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿ (೧೯೭೭) ಗಳಿಸಿತು. ಸಂದ ಪ್ರಶಸ್ತಿಗಳು ಇನ್ನೂ ಹಲವಾರು. ಕೇಂದ್ರ ಸಾಹಿತ್ಯ ಅಕಾಡಮಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಪೇಜಾವರ ಸದಾಶಿವರಾಯರು – ೧೯೧೩ ಸಿ.ಎನ್. ಜಯಲಕ್ಷ್ಮೀದೇವಿ – ೧೯೨೬ ಅನ್ನದಾನಯ್ಯ ಪುರಾಣಿಕ – ೧೯೨೮ ಯಮುನಾ ಮೂರ್ತಿ – ೧೯೩೩ ಜಯಶ್ರೀ ದಂಡೆ – ೧೯೫೮ ಆರ್.ಪಿ. ಚೇತನ – ೧೯೭೩

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top