Loading Events

« All Events

  • This event has passed.

ಪುತ್ತೂರು ನರಸಿಂಹನಾಯಕ್

November 28, 2023

೧೯೫೮ ದಾಸವಾಣಿ-ಭಕ್ತಿ ಗೀತೆಗಳ ವಿಶಿಷ್ಟ ಗಾಯಕರೆನಿಸಿರುವ ನರಸಿಂಹನಾಯಕ್ ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು. ತಂದೆ ಹರಿಹರ ನಾಯಕ್, ತಾಯಿ ವರಲಕ್ಷ್ಮೀನಾಯಕ್. ದೇವದಾಸ ನಾಯಕರ ಮಾರ್ಗದರ್ಶನದಲ್ಲಿ ಪಡೆದ ಸಂಗೀತ ಶಿಕ್ಷಣ. ರಾಷ್ಟ್ರಾದ್ಯಂತ ನೀಡಿದ ಸುಗಮ ಸಂಗೀತ ಕಚೇರಿಗಳು. ದಾಸವಾಣಿಯ ಭಕ್ತಿ ಗೀತೆಗಳ ಗಾಯನದಲ್ಲಿ ಪಡೆದ ಪರಿಶ್ರಮ. ನೂರು ಸಂಪುಟಗಳಲ್ಲಿ ದಾಸರ ಪದಗಳ ಧ್ವನಿಮುದ್ರಿಕೆ, ಸಿಡಿ ಬಿಡುಗಡೆ. ಸುಮಾರು ೧೫೦ಕ್ಕು ಹೆಚ್ಚು ಸಿಡಿಗಳ ಹಾಡುಗಳಿಗೆ ಇವರು ನೀಡಿದ ಸಂಗೀತ ನಿರ್ದೇಶನದಲ್ಲಿ ಅನೂಪ್ ಜಲೋಟ್, ಸಾಧನ ಸರಗಮ್, ರೂಪಕುಮಾರ್ ರಾಥೋಡ್, ಸಿ. ಅಶ್ವತ್ಥ್, ವಾಣಿ ಜಯರಾಂ ಮುಂತಾದ ಪ್ರಖ್ಯಾತ ಗಾಯಕರ ಹಾಡುಗಾರಿಕೆ. ತುಳು, ಕೊಂಕಣಿ, ತೆಲುಗು, ತಮಿಳು, ಮರಾಠಿ, ಹಿಂದಿ ಭಾಷೆಗಳ ಆಲ್ಬಮ್‌ಗಳಿಗೆ ಹಾಡುಗಾರಿಕೆ. ಹತ್ತು ಸಾವಿರಕ್ಕು ಹೆಚ್ಚು ಹಾಡುಗಳ ಅತ್ಯಧಿಕ ಆಲ್ಬಮ್ ತಂದಿರುವ ಗಾಯಕರೆಂಬ ಹೆಗ್ಗಳಿಕೆ, ಜಿ.ಕೆ. ವೆಂಕಟೇಶ್, ಎಂ. ರಂಗರಾವ್, ಸತ್ಯಮ್, ವಿಜಯಭಾಸ್ಕರ್, ರಾಜನ್‌ ನಾಗೇಂದ್ರ, ಟಿ.ಜಿ. ಲಿಂಗಪ್ಪ, ಹಂಸಲೇಖ ಮುಂತಾದವರ ನಿರ್ದೇಶನದಲ್ಲಿ ೩೦ಕ್ಕು ಹೆಚ್ಚು ಚಲನಚಿತ್ರದ ಹಿನ್ನೆಲೆ ಗಾಯಕರು, ದೂರದರ್ಶನದ “ಈಶ್ವರ ಅಲ್ಲಾ ನೀನೇ ಎಲ್ಲಾ” ಧಾರವಾಹಿಗಾಗಿ ಶಿಶುನಾಳ ಷರೀಫರ ೬೦ ಹಾಡುಗಳ ಗಾಯನ. ಮೂರು ಬಾರಿ ಅಮೆರಿಕಾದಲ್ಲಿ, ಕೆನಡ, ಯು.ಎ.ಇ., ಬೆಹರೇನ್ ಮುಂತಾದೆಡೆ ನಡೆಸಿಕೊಟ್ಟ ಕಾರ್ಯಕ್ರಮಗಳು. ಕೆಂಡದ ಮಳೆ, ಗೌರಿಗಣೇಶ ಚಿತ್ರದ ಉತ್ತಮ ಹಿನ್ನೆಲೆಗಾಯನಕ್ಕೆ ರಾಜ್ಯ ಸರಕಾರದ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕರಾವಳಿ ರತ್ನ ಪ್ರಶಸ್ತಿ, ವಾಷಿಂಗ್‌ಟನ್ ಡಿ.ಸಿ. ವಿಶ್ವಮಾಧ್ವ ಸಂಘದಿಂದ ಪ್ರಶಸ್ತಿ, ಮಂತ್ರಾಲಯ ಸಂಸ್ಥಾನದಿಂದ ವಿಜಯ ದುಂದುಬಿ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದರು : ರಾಮು ಎಸ್. – ೧೯೪೯ ವೀರಯ್ಯಸ್ವಾಮಿ – ೧೯೪೯ ಚಂದ್ರಿಕಾ ಆರ್. – ೧೯೫೮ ಸುನಂದ ಕಂದಗಲ್ – ೧೯೪೯ ಪ್ರಕಾಶ್ ಆರ್.ಎನ್. – ೧೯೬೫

* * *

Details

Date:
November 28, 2023
Event Category: