ಪು.ತಿ. ನರಸಿಂಹಾಚಾರ್

Home/Birthday/ಪು.ತಿ. ನರಸಿಂಹಾಚಾರ್
Loading Events
This event has passed.

೧೭.೩.೧೯೦೫ ೧೩.೧೦.೧೯೯೮ ಕೃಷ್ಣಪ್ರಜ್ಞೆಯ ಚಿಂತನಶೀಲ ಕವಿ, ನಾಡಿನ ಸಂಸ್ಕೃತಿಯನ್ನೇ ಕಾವ್ಯಾಧಾರವಾಗಿಟ್ಟುಕೊಂಡು ಸಾಹಿತ್ಯ ಸೃಷ್ಟಿ ಮಾಡಿದವರು. ಹುಟ್ಟಿದ್ದು ಮೇಲುಕೋಟೆಯಲ್ಲಿ. ತಂದೆ ತಿರುನಾರಾಯಣ ಅಯ್ಯಂಗಾರ‍್ಯರು, ತಾಯಿ ಶ್ರೀರಂಗಮ್ಮ. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಮೇಲುಕೋಟೆಯಲ್ಲಿಯೇ, ಕಾಲೇಜಿನ ವ್ಯಾಸಂಗಕ್ಕಾಗಿ ಬಂದುದು ಮೈಸೂರಿಗೆ. ೧೯೨೬ರಲ್ಲಿ ಪಡೆದ ಬಿ.ಎ. ಪದವಿ. ತಂದೆಯಿಂದಲೇ ಶಾಸ್ತ್ರೀಯ ಸಂಸ್ಕೃತ ವ್ಯಾಸಂಗ. ಉದ್ಯೋಗಕ್ಕಾಗಿ ಸೇರಿದ್ದು ಸೈನ್ಯದ ಮುಖ್ಯಾಕಾರಿಗಳ ಕಚೇರಿಯಲ್ಲಿ ಗುಮಾಸ್ತರಾಗಿ. ನಿವೃತ್ತಿಯ ಹತ್ತಿರದಲ್ಲಿ ಶಾಸನ ಸಭಾ ಕಚೇರಿಯಲ್ಲಿ ಸಂಪಾದಕರಾಗಿ ನಿವೃತ್ತಿ. ನಂತರ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶಕ್ಕಾಗಿ ಮತ್ತು ಇಂಗ್ಲಿಷ್-ಕನ್ನಡ ನಿಘಂಟುವಿನ ಸಂಪಾದಕರಾಗಿ ಸಲ್ಲಿಸಿದ ಸೇವೆ. ಮೊದಲ ಕವನ ‘ನನ್ನ ನಾಯಿ’ ಎಂಬುದು ಮೈಸೂರು ಮಹಾರಾಜ ಕಾಲೇಜಿನ ಕನ್ನಡ ಸಂಘದ ‘ಕಿರಿಯರ ಕಾಣಿಕೆ’ ಎಂಬ ಸಂಗ್ರಹದಲ್ಲಿ ಪ್ರಕಟಗೊಂಡ ನಂತರ ಸೂರ್ತಿ ಪಡೆದು ಬರೆದದ್ದು ಹಲವಾರು ಕವನಗಳು. ‘ಹಣತೆ’ ಇವರ ಮೊದಲ ಕವನ ಪ್ರಕಟವಾದದ್ದು ೧೯೩೩ರಲ್ಲಿ ನಂತರ ಮಾಂದಳಿರು, ಶಾರದಯಾಮಿನಿ, ಗಣೇಶ ದರ್ಶನ, ರಸ ಸರಸ್ವತಿ ಮುಂತಾದ ಹತ್ತು ಕವನ ಸಂಕಲನಗಳು ; ಅಹಲ್ಯೆ, ಶಬರಿ, ಹಂಸದಮಯಂತಿ ಮುಂತಾದ ೧೬ ಗೀತ ರೂಪಕಗಳು ; ರಾಮಾಚಾರಿಯ ನೆನಪು, ಈಚಲು ಮರದ ಕೆಳಗೆ, ಧೇನುಕ ಪುರಾಣ ಮುಂತಾದ ೧೦ ಗದ್ಯಚಿತ್ರಗಳು ; ಕಾವ್ಯಮೀಮಾಂಸೆ ಕೃತಿಗಳು ; ೧೯೮೯ರಲ್ಲಿ ಸಮಗ್ರ ಕಾವ್ಯ ; ೧೯೮೧ರಲ್ಲಿ ‘ಯದುಗಿರಿ’ ಅಭಿನಂದನ ಗ್ರಂಥ, ೨೦೦೨ರಲ್ಲಿ ಸಮಗ್ರ ಗದ್ಯ ಸಂಪುಟ ; ೨೦೦೫ರಲ್ಲಿ ‘ಪು.ತಿ.ನ. ನೂರರ ನೆನಪು’ ಪ್ರಕಟಿತ ಕೃತಿಗಳು. ಸಂದ ಪ್ರಶಸ್ತಿಗಳು ಹಲವಾರು. ೧೯೮೧ರ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕ.ಸಾ.ಪ. ಗೌರವ ಸದಸ್ಯತ್ವ, ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮೈಸೂರು ವಿ.ವಿ. ಡಾಕ್ಟರೇಟ್, ಭಾರತ ಸರಕಾರದ ಪದ್ಮಶ್ರೀ, ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top