Loading Events

« All Events

ಪ್ರೊ. ಅಬ್ದುಲ್ ಮಜೀದ್‌ಖಾನ್

December 13

೧೩-೧೨-೧೯೩೫ ಪ್ರಾಧ್ಯಾಪಕ, ಸಾಹಿತಿ, ಅಬ್ದುಲ್ ಮಜೀದ್‌ಖಾನ್ ರವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ. ತಂದೆ ಮಹಮದ್ ಯಾಕೂಬ್‌ಖಾನ್, ತಾಯಿ ಹಾಜಿರಾಬಿ. ಪ್ರಾರಂಭಿಕ ಶಿಕ್ಷಣ ಸಾಗರ. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಂ.ಎ. (ಇಂಗ್ಲಿಷ್) ಪದವಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ. ಪದವಿ. ಹಿಂದಿ ಭಾಷೆಯಲ್ಲಿ ವಿಶಾರದ. ಉದ್ಯೋಗಕ್ಕಾಗಿ ಸೇರಿದ್ದು ಇಂಗ್ಲಿಷ್ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಬಡ್ತಿ ಪಡೆದು ನಂತರ ಪಡೆದ ಸ್ವಯಂ ನಿವೃತ್ತಿ. ಘಾಲಿಬ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ‍್ಯದರ್ಶಿ ಮತ್ತು ಜಿ.ಇ.ಎಸ್. ಹಗಲು ಮತ್ತು ಸಂಜೆ ಪದವಿಪೂರ್ವ ಕಾಲೇಜುಗಳ ಗೌರವ ಪ್ರಾಂಶುಪಾಲರು. ಆಕಾಶವಾಣಿ ಬೆಂಗಳೂರು ಕಾರ‍್ಯಕ್ರಮ ಸಲಹಾ ಸಮಿತಿ ಮತ್ತು ಕರ್ನಾಟಕ ಉರ್ದು ಅಕಾಡಮಿ ಸದಸ್ಯರಾಗಿ ಹೊತ್ತ ಜವಾಬ್ದಾರಿಗಳು. ವಿದ್ಯಾರ್ಥಿ ದೆಸೆಯಲ್ಲಿಯೇ ರಚಿಸಿದ ಇಂಗ್ಲಿಷ್, ಕನ್ನಡ, ಉರ್ದು ಕತೆ, ಕವನಗಳು. ವಿವಿಧ ಪತ್ರಿಕೆಗಳಲ್ಲಿ ಪ್ರಕಟಿತ. ಹಲವಾರು ಕೃತಿಗಳ ಪ್ರಕಟಣೆ. ಕವನ ಸಂಕಲನ-ದಾರಿ, ಗುರುತು, ಉತ್ತರಗಳು, ಮನ್ವಂತರ. ಕಥಾಸಂಕಲನ-ಆಳು, ಕೊಡುಗೆ. ಕಾದಂಬರಿಗಳು-ಅಂಧೇರಿನಗರಿ, ದಿಗಂತ. ಚಿಂತನ-ಚಿಂತನ ಚಯನ. ಅನುವಾದ-ತಲೆಯಿಲ್ಲದ ಗೌತಮ, ನೆರಳುಗಳು, ಕೆಂಪು ಜಾವ, ಸೃಷ್ಟಿ. ಮಿರ್ಜಾ ಘಾಲಿಬ್, ಜಲಾಲುದ್ದೀನ್ ರೂಮಿ (ಜೀವನಚರಿತ್ರೆ). ಕಿತಾಬ್-ಎ-ನೌರಸ್, ಪರಿಸರ ವಿಜ್ಞಾನ, ನಗಾರಿ ಗೃಹದಲ್ಲಿ. ಇಂಗ್ಲಿಷ್ ಕೃತಿಗಳು-ಫೀನಿಕ್ಸ್ ಅಂಡ್ ದಿ ಫ್ಲೇಮ್, ದಿಸ್ ವೀಕ್ ಫರ್ ಯೂ, ಆನ್ ಎಲಿಜಿ ಅಂಡ್ ಅದರ್ ಪೊಯಮ್ಸ್, ಅವರ್ ಸ್ವೀಟೆಸ್ಟ್ ಸಾಂಗ್ಸ್, ಅಂಧೇರಿನಗರಿ, ಫಾರ್ ಎ ಗುಡ್‌ಟರ್ನ್, ದಿ ಹೋಲಿ ಖುರಾನ್. ಹಲವಾರು ಕವಿ ಕಾವ್ಯ, ಜೀವನ ಚಿತ್ರಣ, ಸ್ಥಳ ಪುರಾಣ ಆಕಾಶವಾಣಿಯಲ್ಲಿ ಪ್ರಸಾರ. ನಾಲ್ಕು ದಶಕಕ್ಕೂ ಮೀರಿದ ಸಾಹಿತ್ಯ ಸೇವೆ. ಸಂದ ಪ್ರಶಸ್ತಿ ಗೌರವಗಳು. ಗುರುತು ಕವನ ಸಂಕಲನಕ್ಕೆ ಕೇಂದ್ರ ಹಿಂದಿ ನಿರ್ದೇಶನಾಲಯದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಬೆಳಗಾಂ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಸಿರಸಿ, ಹುಬ್ಬಳ್ಳಿ, ಸಾಗರ, ಭಟ್ಕಳದಲ್ಲಿ ನಡೆದ ಸಾಹಿತ್ಯ ಗೋಷ್ಠಿಗಳಲ್ಲಿ ಭಾಗಿ. ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ “ಸಾಹಿತ್ಯದಲ್ಲಿ ವೈಜ್ಞಾನಿಕ ಮನೋಧರ‍್ಮ” ಗೋಷ್ಠಿಯ ಅಧ್ಯಕ್ಷತೆ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಅಪರಂಜಿ ಶಿವು – ೧೯೪೦ ಕೃಷ್ಣ ಸುಬ್ಬರಾವ್ – ೧೯೪೯

Details

Date:
December 13
Event Category: