Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಪ್ರೊ. ಅ.ರಾ. ಮಿತ್ರ – ಕಣಜ

ಪ್ರೊ. ಅ.ರಾ. ಮಿತ್ರ

Home/Birthday/ಪ್ರೊ. ಅ.ರಾ. ಮಿತ್ರ
Loading Events
This event has passed.

೨೫-೨-೧೯೩೫ ಹೆಸರೇ ಮಿತ್ರ, ಶತ್ರುಗಳಾಗುವಂತೆಯೇ ಇಲ್ಲ. ಮಾತಿನ ಮೋಡಿಗಾರರಾದ, ಪರಿಶುದ್ಧ ಹಾಸ್ಯಪ್ರಿಯರಾದ ಅ.ರಾ.ಮಿತ್ರರವರು ಹುಟ್ಟಿದ್ದು  ಬೇಲೂರಿನಲ್ಲಿ. ವಂಶಸ್ಥರೆಲ್ಲಾ ಅಕ್ಕಿ ಹೆಬ್ಬಾಳಿನವರಾದ್ದರಿಂದ ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರರೆಂದೇ ಪ್ರಸಿದ್ಧಿ. ತಾಲ್ಲೂಕು ಆಫೀಸಿನಲ್ಲಿ ಹೆಡ್ ಗುಮಾಸ್ತರಾಗಿ ಕಾರ‍್ಯ ನಿರ್ವಹಿಸುತ್ತಿದ್ದ ರಾಮಣ್ಣನವರು ಇವರ ತಂದೆ, ತಾಯಿ ಜಯಲಕ್ಷ್ಮಮ್ಮ. ಸೂರ‍್ಯನ ಬಗ್ಗೆ ತಂದೆಗೆ ಅಪಾರ ಪ್ರೀತಿ-ಭಕ್ತಿ. ಮಗನಿಗೂ ಇಟ್ಟಿದ್ದು ಸೂರ‍್ಯ. ಆದರೆ ಅವರು ಮಿತ್ರರಾದರು. (ಮಿತ್ರ ಎಂದರೆ ಸೂರ‍್ಯ ಎಂದೂ ಅರ್ಥ). ಮುಳಬಾಗಿಲಿನಲ್ಲಿ ಹೈಸ್ಕೂಲು ಓದಿದ್ದು. ಓದಿನಲ್ಲಿ ಆಸಕ್ತಿ ಅಷ್ಟಕ್ಕಷ್ಟೆ. ಎಸ್.ಎಸ್.ಎಲ್.ಸಿ. ಪಾಸಾದ ನಂತರ ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಕೋಲಾರದ ಕಾಲೇಜು. ಅಧ್ಯಾಪಕರಾಗಿ ದೊರೆತವರು ಪ್ರಭುಶಂಕರ್‌ರವರು. ಓದಿನಲ್ಲಿ ಇವರಿಗೆ ಆಸಕ್ತಿ ಮೂಡುವಂತೆ ಮಾಡಿದ್ದಲ್ಲದೆ ಹಾಸ್ಯಪ್ರಜ್ಞೆ ಬೆಳೆಸಿಕೊಳ್ಳಲು ಕಾರಣರಾದರು. ಜನಪ್ರಗತಿಯ ಕಲ್ಲೇ ಶಿವೋತ್ತಮರಾವ್ ಮತ್ತು ನಾಡಿಗೇರರಿಂದ ಹಾಸ್ಯಲೇಖನ ಬರೆಯಲು ಪ್ರೇರಣೆ. ಇದರ ಫಲವೇ ವೃತ್ತಿ ಭಾಷೆ ಬಳಸಿಕೊಂಡು ಬರೆದ ‘ಪಂಡಿತನ ಸಂಕಟ’ ಪ್ರಬಂಧ, ಮುಂದೆ ಲಲಿತ ಪ್ರಬಂಧಗಳ ಪ್ರವಾಹ. ಸೇಯಿಂಟ್ ಜೋಸೆಫ್ ಕಾಲೇಜಿನಿಂದ ಅಧ್ಯಾಪಕವೃತ್ತಿ ಆರಂಭ. ನಂತರ ಮಡಿಕೇರಿ, ತುಮಕೂರು, ಬೆಂಗಳೂರು ಸರಕಾರಿ ಕಾಲೇಜುಗಳಲ್ಲಿ, ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಛಂದಸ್ಸಿನ ಲಕ್ಷಣಗಳನ್ನು ಉದಾಹರಣಾರ್ಥವಾಗಿ ಲಘುಹಾಸ್ಯದ ಮೂಲಕ ಬರೆದ ಕೃತಿ ಛಂದೋಮಿತ್ರ. ವಚನಕಾರರು ಮತ್ತು ಶಬ್ದಕಲ್ಪ, ಒಳನೋಟಗಳು-ವಿಮರ್ಶಾಕೃತಿಗಳು. ಜರ್ಮನ್ ಸಂಪ್ರದಾಯ ದರ್ಪಣ, ಶಿಕ್ಷಣ ಚಿಂತನ, ಕಾಲಿಗುಲ ಮತ್ತು ತಪ್ಪಿದ ಎಳೆ ಇತರರೊಡನೆ ಕೂಡಿ ಮಾಡಿದ ಅನುವಾದ. ಅಜಿತ ಪುರಾಣ ಸಂಗ್ರಹ, ಪಂಪಭಾರತ ಸಂಗ್ರಹ, ಪುರಂದರ ಸಾಹಿತ್ಯ ದರ್ಶನ ಸಂಪಾದಿಸಿದ ಕೃತಿಗಳು. ವಚನ ವ್ಯಾಖ್ಯಾನ, ಕುಮಾರವ್ಯಾಸ ದರ್ಶನ-ಉಪನ್ಯಾಸ ಮಾಲಿಕೆಗಳು, ವ್ಯಾಖ್ಯಾನದ ಕ್ಯಾಸೆಟ್ಟುಗಳು ಬಿಡುಗಡೆಗೊಂಡಿವೆ. ನಾನೇಕೆ ಕೊರೆಯುತ್ತೇನೆ. ಆರತಕ್ಷತೆ ಇವರ ಸಮಗ್ರ ಪ್ರಬಂಧದ ಎರಡು ಸಂಪುಟಗಳು. ಜಗತ್ತಿನ ಪ್ರಣಯ ಕಥೆಗಳ ಸಂಪುಟ ಪ್ರೇಮನದಿಯ ದಡಗಳಲ್ಲಿ  ಮತ್ತು ‘ಕುಮಾರವ್ಯಾಸ ಭಾರತ ಕಥಾಮಿತ್ರ’ ಇತ್ತೀಚಿನ ಬೃಹತ್ ಗದ್ಯಕೃತಿ ಪ್ರಕಟಿತ. ಸಂದ ಪ್ರಶಸ್ತಿಗಳು-ನವರತ್ನರಾಂ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಗೊರೂರು ಸಾಹಿತ್ಯ ಪ್ರಶಸ್ತಿ, ಧರ್ಮಶ್ರೀ ನಗೆರಾಜ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಆದ್ಯ ಅನಂತಾಚಾರ್ಯ – ೧೮೮೪ ಎಸ್.ಕೆ. ರಮಾದೇವಮ್ಮ – ೧೯೩೦ ದೇಶ ಕುಲಕರ್ಣಿ – ೧೯೩೮ ಎಡನಾಡು ಗೋಪಾಲಕೃಷ್ಣ ಭಟ್ – ೧೯೩೫

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top