ಪ್ರೊ. ಎಚ್. ತಿಪ್ಪೆರುದ್ರ ಸ್ವಾಮಿ

Home/Birthday/ಪ್ರೊ. ಎಚ್. ತಿಪ್ಪೆರುದ್ರ ಸ್ವಾಮಿ
Loading Events
This event has passed.

೩-೨-೧೯೨೮ ೨೮.೧೦.೧೯೯೪ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯ ಬಡಕುಟುಂಬದಲ್ಲಿ. ಮೂರು ತಿಂಗಳ ಮಗುವಾಗಿದ್ದಾಗಲೇ ತಾಯಿಯ ಪ್ರೀತಿಯಿಂದ ವಂಚಿತರು. ಚೆನ್ನಜ್ಜಿಯ ಲಾಲನೆ ಪಾಲನೆಯಲ್ಲಿ ಬೆಳೆದ ಹುಡುಗ. ಅಜ್ಜಿಯ ಬಾಯಿಂದ ಹೊರಡುತ್ತಿದ್ದ ಶರಣ ಧರ‍್ಮದ ಹಾಡುಗಳಿಂದ ಪ್ರೇರಿತ. ಆಗಲೇ ಅನುಭಾವ ಪ್ರಪಂಚಕ್ಕೆ ಪ್ರವೇಶ. ಹೊನ್ನಾಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ. ಪ್ರೌಢಶಾಲೆಗೆ ಬಂದಾಗ ಗಾಂಧೀ ಹುಚ್ಚು ಹತ್ತಿ ಚಳವಳಿಗೆ ಇಳಿದದ್ದು. ‘ಗಾಂತಾತನ ರೈಲು ಟಿಕೆಟ್ ಕೊಳ್ಳಬೇಡಿ !’ ಎಂದು ಘೋಷಿಸಿದ ಧೈರ‍್ಯಶಾಲಿ ಹುಡುಗ. ಹುಡುಗನೆಂದು ಪೊಲೀಸರ ಅಲಕ್ಷ್ಯ. ಮುಂದೆ ಚಳವಳಿಯ ಕಾವಿಗೆ ಸಿಕ್ಕಿಕೊಂಡು ಖಾದಿ ವ್ರತ ಧರಿಸಿದರು. ತಂದೆಗೆ, ಮಗ ವೈದ್ಯನಾಗಬೇಕೆಂಬ ಆಸೆ. ತಿಪ್ಪೇಸ್ವಾಮಿಯವರು ಆರಿಸಿಕೊಂಡದ್ದು ಕನ್ನಡ ಆನರ್ಸ್‌. ಗಿಟ್ಟಿಸಿದ್ದು ಮೊದಲ ಸ್ಥಾನ-ಚಿನ್ನದ ಪದಕ. ಎಂ.ಎ.ನಲ್ಲೂ ಇದೇ ಪುನರಾವರ್ತನೆ. ಹಲವಾರು ಕಾಲೇಜುಗಳಲ್ಲಿ ಬೋಸಿ ಮಾನಸ ಗಂಗೋತ್ರಿಗೆ ಬರುವ ವೇಳೆಗೆ ಡಾಕ್ಟರ್ ತಿಪ್ಪೇರುದ್ರಸ್ವಾಮಿ. ಮಾಡಿದ್ದು  ಶರಣರ ಅನುಭಾವ ಸಾಹಿತ್ಯ ಕುರಿತ ಅಧ್ಯಯನ ಸಂಶೋಧನೆ. ಎರಡು ವರ್ಷ ಅಂಚೆ ಮತ್ತು ತೆರಪಿನ ಶಿಕ್ಷಣದ ನಿರ್ದೇಶಕರ ಹೊಣೆ. ನಂತರ ಶಿವಮೊಗ್ಗ  ಬಿ.ಆರ್. ಪ್ರಾಜೆಕ್ಟ್  ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ವರ್ಗ. ಪ್ರಾಧ್ಯಾಪಕರಾಗಿ ಹತ್ತು ವರ್ಷ. ಮತ್ತೆ ಗಂಗೋತ್ರಿಗೆ-ಅಧ್ಯಯನ ಸಂಸ್ಥೆಯ ನಿರ್ದೇಶಕರ ಹೊಣೆಗಾರಿಕೆ. ರಚಿಸಿದ ಸಾಹಿತ್ಯ ಮೂರು ಬಗೆ-ಶರಣರ ಅನುಭಾವ ಸಾಹಿತ್ಯ, ಶರಣರ ಬದುಕಿನ ಕಾದಂಬರಿ, ಕರ್ನಾಟಕ ಸಂಸ್ಕೃತಿಯ ಆಳವಾದ ಅಧ್ಯಯನ. ವಚನಗಳಲ್ಲಿ ವೀರಶೈವಧರ‍್ಮ, ಪರಿಪೂರ್ಣದೆಡೆಗೆ, ಕದಳಿ ಕರ್ಪೂರ, ಜ್ಯೋತಿ ಬೆಳಗುತಿದೆ, ಕರ್ತಾರನ ಕಮ್ಮಟ, ಶೂನ್ಯ ತತ್ತ್ವ ವಿಕಾಸ ಮತ್ತು ಸಂಪಾದನೆ. ನಿಜಗುಣಶಿವಯೋಗಿ, ಶರಣರ ಮೂರು ನಾಟಕಗಳು-ಜೊತೆಗೆ ಹಲವಾರು ಕಾದಂಬರಿ, ಕಥೆಗಳ ಕರ್ತೃ. ಸಂದ ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಹಿತೈಷಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ಶಿವಚಿಂತನ’. ನಿಧನರಾದದ್ದು ೨೮.೧೦.೧೯೯೪ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಕೆ. ರಾಘವೇಂದ್ರರಾವ್ – ೧೯೨೮ ಆರ್.ಸಿ. ಮುದ್ದೇಬಿಹಾಳ – ೧೯೩೩ ಎಚ್.ಎಸ್. ಪಾರ್ವತಿ – ೧೯೩೪ ನೀಲಗಂಗ ಚರಂತಿಮಠ – ೧೯೪೬ ಡಾ. ಸಿದ್ಧಲಿಂಗಯ್ಯ – ೧೯೫೪ ಲೋಕೇಶ ಒಡೆಯರ್ – ೧೯೫೨

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top