೨೦-೨-೧೯೩೧ ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ ಹುಟ್ಟಿದರು. ತಂದೆ ಶ್ರೀಕಂಠಯ್ಯ, ತಾಯಿ ಸಂಗಮ್ಮ. ವ್ಯಾಪಾರ ವೃತ್ತಿಯ ಶ್ರೀಕಂಠಯ್ಯನವರು ನಷ್ಟ ಅನುಭವಿಸಿದ ನಂತರ ತುಮಕೂರಿನಲ್ಲಿ ವ್ಯಾಪಾರ ಪ್ರಾರಂಭಿಸಿದರು. ಪ್ರಾಥಮಿಕ ಶಾಲೆಯಲ್ಲಿ ಗುರುಗಳಾಗಿದ್ದ ಜಗ್ಗು ಶಿಂಗ್ರಯ್ಯಂಗಾರ್, ಮಾಧ್ಯಮಿಕ ಶಾಲೆಯಲ್ಲಿ ಅರೇಬಿಯನ್ ನೈಟ್ಸ್ ಕತೆ ಬಣ್ಣಿಸುತ್ತಿದ್ದ ವೆಂಕಟರಾಮಯ್ಯ, ಪ್ರೌಢಶಾಲೆಯಲ್ಲಿ ಎ.ರಾಮಚಂದ್ರ ರಾಯರ ಮಾರ್ಗದರ್ಶನದಿಂದ ಹಿಡಿದ ಸಾಹಿತ್ಯದ ಗೀಳು. ಇಂಟರ್ ಮೀಡಿಯೆಟ್ ಸೇರುವ ವೇಳೆಗೆ ಸಾಹಿತ್ಯ ಕೋಶವನ್ನು ತಲೆಗೆ ತುಂಬಿಕೊಂಡಿದ್ದರು. ಒಂದು ಸಾಲು ಹೇಳಿದರೆ ಇಂಥವರದ್ದೆ ಕವನ ಎಂದು ಹೇಳುವ ಪ್ರಾವೀಣ್ಯತೆ. ಸಾಹಿತ್ಯಕೃಷಿ ಪ್ರಾರಂಭ. ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟ. ಬಿ.ಎ. ಆನರ್ಸ್ ಓದಲು ಸೇರಿದ್ದು ಮೈಸೂರು ಮಹಾರಾಜ ಕಾಲೇಜು, ಶ್ರೀ ಎಸ್.ವಿ. ರಂಗಣ್ಣ, ಯಾಮುನಾಚಾರ್ಯ, ಗೋಪಾಲರಾವ್ ಮುಂತಾದ ಗುರುಗಳ ಮಾರ್ಗದರ್ಶನ. ಕನ್ನಡ, ಇಂಗ್ಲಿಷ್, ಸಂಸ್ಕೃತ, ಗ್ರೀಕ್ ಸಾಹಿತ್ಯದ ಆಳವಾದ ಅಭ್ಯಾಸ. ಎಂ.ಎ. ತರಗತಿಯಲ್ಲಿ ಪ್ರಥಮ ದರ್ಜೆ. ದಾವಣಗೆರೆಯ ಡಿ.ಆರ್.ಎಂ. ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭ. ತುಮಕೂರು, ಶಿವಮೊಗ್ಗ ಕಾಲೇಜುಗಳಲ್ಲಿ ಕಾರ್ಯ ನಿರ್ವಹಣೆ. ಪಿ.ಎಸ್.ಸಿ. ಆಯ್ಕೆಯಾಗಿ ಬೆಂಗಳೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ರೀಡರ್ ಹುದ್ದೆ. ಮಹಾರಾಣಿ ಕಾಲೇಜಿಗೆ ಪ್ರೊಫೆಸರಾಗಿ ಬಡ್ತಿ. ಆರ್.ಸಿ. ಕಾಲೇಜಿನ ಪ್ರಾಂಶುಪಾಲರಾಗಿ ಕೆಲವರ್ಷ. ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತಿ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಚಟುವಟಿಕೆಗಳನ್ನು ತಾಲ್ಲೂಕು ಮಟ್ಟದವರೆಗೂ ಕೊಂಡೊಯ್ದರು. ಪರಿಷತ್ತಿನ ಸಿಬ್ಬಂದಿಗೆ ಭವಿಷ್ಯನಿ ಸೌಲಭ್ಯ, ಆಜೀವ ಸದಸ್ಯತ್ವದ ಹೆಚ್ಚಳ, ಪರಿಷತ್ತಿನ ಹಣದ ಅಪವ್ಯಯದ ಬಗ್ಗೆ ಕೈಗೊಂಡ ನಿರ್ಣಯಗಳು ಮುಖ್ಯವಾದವುಗಳು. ರಸಗಂಗೆ, ಉತ್ತರ, ಚಿತ್ರ-ವಿಚಿತ್ರ, ಐವತ್ತರ ನೆರಳು, ಋಷ್ಯಶೃಂಗ, ಹೇಮಕೂಟ-ಕವನ ಸಂಕಲನಗಳು. ಕವಿ ಲಕ್ಷ್ಮೀಶ, ಹೊಸಗನ್ನಡ ಕಾವ್ಯ, ರತ್ನಾಕರವರ್ಣಿ, ಪಂಚಮುಖಿ, ವಚನ ಸಾಹಿತ್ಯ ಒಂದು ಇಣುಕು ನೋಟ-ಕೆಲವು ವಿಮರ್ಶಾ ಕೃತಿಗಳು. ಮಹಾನುಭಾವ ಬುದ್ಧ, ಬಸವಣ್ಣ, ವಿರತಿಯ ಸಿರಿ ಸಣ್ಣಪ್ಪನವರು, ಕಾವ್ಯಾನಂದ-ಜೀವನ ಚಿತ್ರಣಗಳು. ಪ್ರಾಗ್ಜೀವಶಾಸ್ತ್ರ-ಇತರ ಶಾಸ್ತ್ರಕ್ಕೆ ಸಂಬಂಸಿದ ಕೃತಿ. ಇದಲ್ಲದೆ ಇತರರೊಡಗೂಡಿ ಹಲವಾರು ಗ್ರಂಥಗಳನ್ನು ಸಂಪಾದಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದುದೆಂದರೆ ‘ಸಾಲು ದೀಪಗಳು’-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಕಟಣೆ. ಗೌರವ ಪ್ರಶಸ್ತಿಗಳು-ಮೈಸೂರಿನ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ, ಕೊಪ್ಪಳದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ, ರಾಜ್ಯಸಾಹಿತ್ಯ ಅಕಾಡಮಿ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ, ಡಾ. ಸಾ.ಶಿ. ಮರುಳಯ್ಯ ಪ್ರಶಸ್ತಿ ಮುಂತಾದುವು. ಇದೇ ದಿನ ಹುಟ್ಟಿದ ಸಾಹಿತಿಗಳು : ಎನ್. ಬಸವಾರಾಧ್ಯ – ೧೯೨೬ ಆನಂದಿ ಸದಾಶಿವರಾವ್ – ೧೯೨೯ ಹಾಜಿಮುಲ್ಲಾ – ೧೯೩೮ ಡಿ.ಆರ್. ನಾಗರಾಜ್ – ೧೯೫೪-೧೨.೮.೯೮ ಕೆ.ವಿ. ಸುಬ್ಬಣ್ಣ – ೧೯೩೨-೧೬.೭.೨೦೦೫

