ಪ್ರೊ. ಟಿ.ಎಸ್. ವೆಂಕಣ್ಣಯ್ಯ

Home/Birthday/ಪ್ರೊ. ಟಿ.ಎಸ್. ವೆಂಕಣ್ಣಯ್ಯ
Loading Events

೧-೧೦-೧೮೮೫ ೨೪-೨-೧೯೩೯ ಕನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರೆಂದೇ ಖ್ಯಾತರಾಗಿದ್ದ ಪ್ರೊ. ಟಿ.ಎಸ್. ವೆಂಕಣ್ಣಯ್ಯನವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳೇಕೆರೆ ತಾಲ್ಲೂಕಿನ ತಳಕು ಗ್ರಾಮದಲ್ಲಿ. ತಂದೆ ಸುಬ್ಬಣ್ಣ, ತಾಯಿ ಲಕ್ಷ್ಮೀದೇವಮ್ಮ. ಮನೆಮಾತು ತೆಲುಗು. ಇವರ ಸಂಬಂಗಳಾದ ಚಂದ್ರಶೇಖರ ಶಾಸ್ತ್ರಿಗಳು ಪ್ರಸಿದ್ಧ ಲಾವಣಿಕಾರರು, ಇವರ ಮಕ್ಕಳೇ ನಾಟಕಕಾರರಾದ ಕ್ಷೀರಸಾಗರ, ಕವಯಿತ್ರಿಯರಾದ ಬೆಳಗೆರೆ ಜಾನಕಮ್ಮ, ಬೆಳಗೆರೆ ಪಾರ್ವತಮ್ಮ, ಬೆಳಗೆರೆ ಕೃಷ್ಣಶಾಸ್ತ್ರಿಗಳು. ಟಿ.ಎಸ್.ವೆಂ.ರವರ ಇನ್ನೊಬ್ಬ ತಮ್ಮಂದಿರಾದ ತ.ಸು. ಶಾಮರಾಯರು, ಸಹೋದರನ ಮಗ ತ.ರಾ.ಸು. ಹೀಗೆ ಸಾಹಿತ್ಯ ಗಣಿಯ ವಂಶಸ್ಥರು. ಪ್ರಾರಂಭಿಕ ಶಿಕ್ಷಣ ಚಳ್ಳೇಕೆರೆ, ಚಿತ್ರದುರ್ಗದಲ್ಲಿ ಮ್ಯಾಟ್ರಿಕ್, ಬಳ್ಳಾರಿಯಲ್ಲಿ ಎಫ್.ಎ, ಮೈಸೂರಿನಲ್ಲಿ ಬಿ.ಎ. ಪದವಿ. ಎಲ್.ಎಲ್.ಬಿ. ಓದಿದ್ದು ಮುಂಬಯಿಯಲ್ಲಿ. ಆದರೆ ವಿದ್ಯಾಭ್ಯಾಸ ಅಪೂರ್ಣ. ಉದ್ಯೋಗಕ್ಕೆ ಸೇರಿದ್ದು ಅಂಚೆ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಕಾಲ. ಮತ್ತೆ ಮೈಸೂರಿನಲ್ಲಿ ಕನ್ನಡ, ತೆಲುಗು ಸಾಹಿತ್ಯಾಧ್ಯಯನ ಮದರಾಸು ವಿಶ್ವವಿದ್ಯಾಲಯದಿಂದ ೧೯೧೪ರಲ್ಲಿ ಎಂ.ಎ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ. ಬೆಂಗಳೂರು ಸೇಂಟ್ ಜೋಸೆಫ್ ಕಾಲೇಜು, ದೊಡ್ಡಬಳ್ಳಾಪುರ ಮುಂತಾದೆಡೆ ಶಿಕ್ಷಕ ವೃತ್ತಿ. ೧೯೧೯ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕ. ಅಸಿಸ್ಟೆಂಟ್ ಪ್ರೊಫೆಸರಾಗಿ ಬಡ್ತಿ. ೧೯೨೭ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡದ ಪ್ರಥಮ ಪ್ರಾಧ್ಯಾಪಕರಾಗಿ ನೇಮಕ. ಬಹುಭಾಷಾ ವಿಶಾರದರು. ಕನ್ನಡ, ತೆಲುಗು, ತಮಿಳು, ಸಂಸ್ಕೃತ, ಬಂಗಾಳಿ ಭಾಷೆಗಳಲ್ಲಿ ಪಡೆದ ಪ್ರಾವೀಣ್ಯತೆ. ಹಲವಾರು ಕೃತಿಗಳ ರಚನೆ. ಭಾಷಾಂತರ-ಶ್ರೀ ರಾಮಕೃಷ್ಣ ಲೀಲಾ ಪ್ರಸಂಗದ ಭಾಗ, ರವೀಂದ್ರರ ಪ್ರಬಂಧಗಳನ್ನಾಧರಿಸಿ ಬರೆದ ‘ಪ್ರಾಚೀನ ಸಾಹಿತ್ಯ.’ ಎ.ಆರ್.ಕೃ.ರೊಡನೆ ರಾಮಕೃಷ್ಣ ಪರಮಹಂಸರ ಚರಿತ್ರೆ. ಸಂಪಾದಿತ-ಹರಿಹರನ ಬಸವರಾಜ ದೇವರ ರಗಳೆ, ಸಿದ್ಧರಾಮಪುರಾಣ (ಡಿ.ಎಲ್.ಎನ್.ರೊಡನೆ) ಕರ್ನಾಟಕ ಕಾದಂಬರಿ, ಪಂಪಭಾರತ, ಕುಮಾರವ್ಯಾಸ ಭಾರತ, ಹರಿಶ್ಚಂದ್ರ ಕಾವ್ಯ ಸಂಗ್ರಹ. ವ್ಯಾಕರಣ ಹಾಗೂ ಕನ್ನಡ ಭಾಷಾ ಇತಿಹಾಸದ ಕನ್ನಡ ಕೈಪಿಡಿ, ಕನ್ನಡ ಸಾಹಿತ್ಯ ಮತ್ತು ಇತರ ಲೇಖನಗಳು ಮುಂತಾದ ಕೃತಿಗಳು. ೧೯೧೮ರಲ್ಲಿ ಎ.ಆರ್.ಕೃ.ರೊಡನೆ ಸೇರಿ ಪ್ರಾರಂಭಿಸಿದ್ದು ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ. ಸಂಘದಿಂದ ಹಲವಾರು ಕೃತಿ ಪ್ರಕಟಣೆ. ಬಿ.ಎಂ.ಶ್ರೀ.ಯವರ ಇಂಗ್ಲಿಷ್ ಗೀತೆಗಳು, ಡಿ.ವಿ.ಜಿಯವರ ವಸಂತ ಕುಸುಮಾಂಜಲಿ, ನಿವೇದನ ಮುಂತಾದುವು. ಪ್ರಬುದ್ಧ ಕರ್ನಾಟಕ ಪತ್ರಿಕೆ ಹೊರತರಲು ಪಟ್ಟ ಶ್ರಮ. ದೇವರು, ಧರ್ಮದಲ್ಲಿ ಶ್ರದ್ಧೆ, ಬದುಕನ್ನು ವ್ರತದಂತೆ ಕಂಡ ಬದುಕು. ನಿಧನರಾದದ್ದು ೨೪.೨.೧೯೩೯ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ವಿ.ಎಂ. ಇನಾಂದಾರ್ – ೧೯೧೨-೨೬.೧.೧೯೮೬ ಗೌರಮ್ಮ. ಬಿ. – ೧೯೧೨ ಬಿ.ಆರ್. ನಾಗೇಶ್ – ೧೯೩೧ ಕುಂ.ವೀ. – ೧೯೫೩ ಮಲೆಯೂರು ಗುರುಸ್ವಾಮಿ – ೧೯೪೭

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top