
ಪ್ರೊ. ಡಿ. ಲಿಂಗಯ್ಯ
December 16
೧೬-೧೨-೧೯೩೯ ಪ್ರಾಧ್ಯಾಪಕ, ಜಾನಪದ ತಜ್ಞ, ಸಾಹಿತಿ ಡಿ. ಲಿಂಗಯ್ಯನವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪೀಹಳ್ಳಿ. ತಂದೆ ದೇವೇಗೌಡ, ತಾಯಿ ಸಿದ್ದಮ್ಮ. ಪ್ರಾರಂಭಿಕ ಶಿಕ್ಷಣ ಕೊತ್ತತ್ತಿ, ಮಂಡ್ಯ ಮೈ ಷುಗರ್ ಹೈಸ್ಕೂಲು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ೧೯೬೮ರಲ್ಲಿ ಉದ್ಯೋಗಕ್ಕಾಗಿ ಸೇರಿದ್ದು ಬೆಂಗಳೂರಿನ ವಿಶ್ವೇಶ್ವರಪುರಂ ಕಾಲೇಜು. ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಕಾಲೇಜಿನ ಪ್ರಾಚಾರ್ಯರಾಗಿ, ರಾಷ್ಟ್ರೀಯ ಸೇವಾ ಯೋಜನಾಕಾರಿಯಾಗಿ, ಬೆಂಗಳೂರು ವಿಶ್ವವಿದ್ಯಾಲಯ ಅಕೆಡಮಿಕ್ ಕೌನ್ಸಿಲ್, ಸ್ನಾತಕ ಅಧ್ಯಯನ ಮಂಡಲಿಯ ಸದಸ್ಯರಾಗಿ ಸಲ್ಲಿಸಿದ ಸೇವೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ‍್ಯದರ್ಶಿಯಾಗಿ, ಕರ್ನಾಟಕ ಲೇಖಕರ ಸಂಘದ ಅಧ್ಯಕ್ಷ ಪದವಿ, ಬಿ.ಎಂ.ಶ್ರೀ ಪ್ರತಿಷ್ಠಾನದ ವ್ಯವಸ್ಥಾಪಕ ಕಾರ‍್ಯದರ್ಶಿ, ಕೋಶಾಕಾರಿಯಾಗಿ, ಪರಿಷತ್ತಿನ ಗ್ರಂಥ ಪ್ರಕಟನಾ ಸಲಹಾ ಸಮಿತಿ ಸದಸ್ಯ, ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, ಸಂಘ ಸಂಸ್ಥೆಗಳೊಡನೆ ಒಡನಾಟ. ಹಲವಾರು ಗ್ರಂಥಗಳ ರಚನೆ-ಕಥಾಸಂಕಲನಗಳು-ಆಟಿಕೆ, ಕನಸಿನ ರಾಣಿ, ರಣಕಾಟಿಗಳು. ಕವನ ಸಂಗ್ರಹ-ಅಂತರಂಗದ ಹಾಡು, ವಿಕ್ಷಕ, ಕಲಬೆರಕೆ, ಭಗ್ನ ಪ್ರತಿಮೆ, ಮಹಾತ್ಮಗಾಂಜಿ, ವಚನ ರಚನ, ಚುಟುಕಾಂಜಲಿ, ವಚನ ದವನ, ಚೇತನ ಚಿಲುಮೆ, ಗಂಧವತಿ. ನಾಟಕ-ದಡ್ಡ ಶಿಖಾಮಣಿ, ಬಡತನದ ಬಾಳು, ಬ್ರಹ್ಮಚಾರಿ, ಬ್ರಹ್ಮ ಬರಹ. ವಿಮರ್ಶೆ-ಕಾವ್ಯಾಸ್ವಾದನ, ಕಾವ್ಯಚಿಂತನ, ಕಾವ್ಯಾನುಭವ, ವ್ಯಕ್ತಿಚಿತ್ರ-ಕನ್ನಡ ರಥಿಕರು, ದೊಡ್ಡವರು. ಪ್ರಬಂಧ-ಶಿಲಾಪದ್ಮ, ಶಿಕ್ಷಣದಲ್ಲಿ ಕನ್ನಡ, ಚಿಂತನ ಸಿಂಧು, ಕಣ್ಣಳತೆ. ಜಾನಪದ-ಕೊಂತಿ ಪೂಜೆ, ಮಣ್ಣಿನ ಮಿಡಿತ, ಪಡಿನೆರಳು, ಬಯಲು ಸೀಮೆಯ ಜನಪದ ಗೀತೆಗಳು ಮೊದಲ್ಗೊಂಡು ೬೫ಕ್ಕೂ ಹೆಚ್ಚು ಕೃತಿ ಪ್ರಕಟಿತ. ಸಂದ ಪ್ರಶಸ್ತಿ ಗೌರವಗಳು. ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ಕರ್ನಾಟಕ ರಾಜ್ಯ ಪ್ರಶಸ್ತಿ, ಚುಟುಕ ಭೂಷಣ ಪ್ರಶಸ್ತಿ, ಡಾ. ಸಿಂಪಿಲಿಂಗಣ್ಣ ಪ್ರಶಸ್ತಿ, ಡಾ. ಜೀಶಂಪ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಜಾನಪದ ರತ್ನ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ ಮುಖ್ಯವಾದುವುಗಳು. ಇದೇ ದಿನ ಹುಟ್ಟಿದ ಸಾಹಿತಿಗಳು : ಸಂಗಮ್ಮ ಕರವೀರ ಶೆಟ್ಟರ – ೧೯೧೩ ಜಿ. ಸುಬ್ಬರಾವ್ – ೧೯೩೩ ಎಚ್.ಎಂ. ಅನ್ನಪೂರ್ಣ – ೧೯೪೦