ಪ್ರೊ. ಬಿ. ಚಂದ್ರಶೇಖರ್

Home/Birthday/ಪ್ರೊ. ಬಿ. ಚಂದ್ರಶೇಖರ್
Loading Events

೧೬..೧೯೧೬ ೧೩.೧೨.೨೦೦೦ ನಟ, ನಿರ್ದೇಶಕ, ನಾಟಕಕಾರ, ರಂಗತಜ್ಞ, ರಂಗ ಶಿಕ್ಷಕರಾಗಿದ್ದ ಚಂದ್ರಶೇಖರ್‌ ರವರು ಹುಟ್ಟಿದ್ದು ಹಾಸನದಲ್ಲಿ. ತಂದೆ ಪ್ರಸಿದ್ಧ ವಕೀಲರಾಗಿದ್ದ ಬೆಳವಾಡಿ ರಾಮಸ್ವಾಮಯ್ಯ, ತಾಯಿ ಗುಂಡಮ್ಮ. ಹಾಸನ, ಬೆಂಗಳೂರು, ಮೈಸೂರಿನಲ್ಲಿ ವಿದ್ಯಾಭ್ಯಾಸ. ಇಂಗ್ಲಿಷ್‌ನಲ್ಲಿ ಬಿ.ಎ. (ಆನರ್ಸ್), ಎಂ.ಎ. ಪದವಿ, ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿ ತುಮಕೂರು, ಮೈಸೂರು, ಬೆಂಗಳೂರಿನ ಸೆಂಟ್ರಲ್ ಕಾಲೇಜ್‌ಗಳಲ್ಲಿ ಸೇವೆ. ಬೆಂಗಳೂರು ವಿಶ್ವವಿದ್ಯಾಲಯ ಆರಂಭಿಸಿದ ನಾಟಕ, ನೃತ್ಯ, ಸಂಗೀತದ ವಿಷಯದಲ್ಲಿ ಕರ್ನಾಟಕಕ್ಕೆ ಅನ್ವಯವಾಗುವಂತಹ ರಂಗ ಶಿಕ್ಷಣದ ಪಠ್ಯಕ್ರಮವನ್ನು ರೂಪಿಸಿದ ಕೀರ್ತಿ ಬಿ.ಸಿ.ಯವರದು. ಬಾಲ್ಯದಿಂದಲೂ ನಾಟಕದತ್ತ ಒಲವು. ಹವ್ಯಾಸಿ ರಂಗಭೂಮಿಯ ಹಲವಾರು ಪ್ರಥಮಗಳನ್ನು ದಾಖಲಿಸಿದ ವ್ಯಕ್ತಿ. ಕನ್ನಡದ ಪ್ರಪ್ರಥಮ ಅಸಂಗತ ನಾಟಕ ’ಬೊಕ್ಕ ತಲೆಯ ನರ್ತಕಿ’, ತುಘಲಕ್, ಮೃಗಗಳಿಗಂಜಿದೊಡೆಂತಯ್ಯ, ಯಮಳ ಪ್ರಶ್ನೆ, ಅಪಕಾರಿ ಕಥೆ, ಚಿರಸ್ಮರಣೆ, ಮಣ್ಣಿನ ಬಂಡಿ (ಮೃಚ್ಛಕಟಿಕ) ಮುಂತಾದುವುಗಳನ್ನು ಮೊದಲ ಬಾರಿಗೆ ನಿರ್ದೇಶಿಸಿದ ಕೀರ್ತಿ. ಬೆಂಗಳೂರಿನ, ’ಲಿಟಲ್ ಥಿಯೇಟರ್ಸ್’ ಸ್ಥಾಪಕ ಸದಸ್ಯರಲ್ಲೊಬ್ಬರು. ಸಂಸ್ಥೆಗಾಗಿ ಪಾತ್ರಧಾರಿಯಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ ನಿರ್ವಹಿಸಿದ ಕಾರ್ಯಗಳು. ಬಿ.ಎಲ್.ಟಿ. ತಂಡದ ಪ್ರಥಮ ನಾಟಕ ’ದಿ ಪ್ರಾಡಿಜಿಯಸ್ ಸ್ನಾಬ್‌’ನಲ್ಲಿ ಮಾನ್ಸಾಯರ್‌ ಬೊಲ್ಡಾನ ಎಂಬ ಮುಖ್ಯಪಾತ್ರವಹಿಸಿ ತೋರಿದ ಅದ್ವಿತೀಯ ನಟನಾಕೌಶಲ. ನಂತರ ಅದೇ ತಂಡಕ್ಕೆ ಅನೇಕ ಇಂಗ್ಲಿಷ್ ನಾಟಕಗಳ ನಿರ್ದೇಶನ. ಕನ್ನಡದಲ್ಲಿ ಅಭಿನಯಿಸಿದ ನಾಟಕಗಳು ಕಟ್ಟೆ ಪುರಾಣ, ಸಂತೆ ಸುದ್ದಿಯಲ್ಲಿ, ಟೊಳ್ಳುಗಟ್ಟಿ, ನಂಕಪ್ನಿ ಮುಂತಾದ ೨೦ ಕ್ಕೂ ಹೆಚ್ಚು ನಾಟಕಗಳು. ಇಂಗ್ಲಿಷ್‌ನಲ್ಲು ಅಷ್ಟೇ ನಾಟಕಗಳಲ್ಲಿ ಅಭಿನಯ. ನಿರ್ದೇಶಿಸಿದ ನಾಟಕಗಳ ಸಂಖ್ಯೆಯೇ ಸುಮಾರು ಮೂವತ್ತಕ್ಕೂ ಹೆಚ್ಚು. ಆಕಾಶವಾಣಿಗಾಗಿ ನಟಿಸಿದ ನಾಟಕಗಳು-ಸತ್ತವನ ಸಂತಾಪ, ಸ್ಮಶಾನ ಕುರುಕ್ಷೇತ್ರ, ರಕ್ತಾಕ್ಷಿ, ಬಿರುಗಾಳಿ, ನಿರ್ದಶಿಸಿದ್ದು- ಸಾಗರಕ್ಕೆ ಸವಾರರು. ಅಭಿನಯಿಸಿದ ಸಿನಿಮಾಗಳು- ಲಂಕೇಶರ ಅನುರೂಪ, ಎನ್. ಲಕ್ಷ್ಮೀ ನಾರಾಯಣ್‌ರವರ ಮುಯ್ಯಿ, ವಿಜಯ ಗುಜ್ಜಾರರ ಕುರಿದೊಡ್ಡಿ ಕುರುಕ್ಷೇತ್ರ TUSK OF YOUNG FILMS CORPORATION OF PARIS ನಲ್ಲಿ ಪ್ರಮುಖ ಪತ್ರ. ಹಲವಾರು ನಾಟಕಗಳ ರಚನೆ. ಸಂಚಯನ, ಸಂಭವಾಯಿ ಯುಗೇ ಯುಗೇ ಸೇರಿದಂತೆ ಸುಮಾರು ೧೭ ನಾಟಕಗಳ ರಚನೆ. ಈ ಮಹಾನ್ ಕಲಾವಿದರಿಗೆ ಕರ್ನಾಟಕ ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕಾರ. ೧೯೯೧ ರಲ್ಲಿ ರಂಗಾಸಕ್ತರು ಅರ್ಪಿಸಿದ ಗೌರವ ಗ್ರಂಥ ’ಬಹುರೂಪಿ’.   ಇದೇ ದಿನ ಹುಟ್ಟಿದ ಕಲಾವಿದರು ರೆಡ್ಡಪ್ಪ ಎ.ಎಸ್ – ೧೯೫೬ ಆಶಾ – ೧೯೫೭ ರಂಗಶ್ರೀ – ೧೯೫೭.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top