Loading Events

« All Events

  • This event has passed.

ಪ್ರೊ. ಭಾಲಚಂದ್ರ ಜಯಶೆಟ್ಟಿ

November 22, 2023

೨೨-೧೧-೧೯೩೯ ಪ್ರಖ್ಯಾತ ಅನುವಾದಕ, ಸಂಶೋಧಕ, ಭಾಲಚಂದ್ರ ಜಯಶೆಟ್ಟಿಯವರು ಹುಟ್ಟಿದ್ದು ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲ್ಲೂಕಿನ ರಾಜೇಶ್ವರದಲ್ಲಿ. ತಂದೆ ಭೀಮಣ್ಣ, ತಾಯಿ ಜಯಮ್ಮ. ಪ್ರಾರಂಭಿಕ ಶಿಕ್ಷಣ ರಾಜೇಶ್ವರ, ಬಸವಕಲ್ಯಾಣ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಪಡೆದ ಪ್ರಭುತ್ವ. ಉದ್ಯೋಗಕ್ಕಾಗಿ ಸೇರಿದ್ದು ಶಿಕ್ಷಣ ಇಲಾಖೆ. ಸರಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿ, ಸರಕಾರಿ ಮಹಾವಿದ್ಯಾಲಯ ಗುಲಬರ್ಗಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೀದರ ಮುಂತಾದೆಡೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೧೯೯೭ರಲ್ಲಿ ನಿವೃತ್ತಿ. ಹಲವಾರು ಶಿಕ್ಷಣ ಸಂಸ್ಥೆಗಳ ಸದಸ್ಯರು. ಕರ್ನಾಟಕ ಸರಕಾರದ ಪದವಿ ಪೂರ್ವ ತರಗತಿಗಳಿಗೆ ಹಿಂದಿ ಪಠ್ಯಪುಸ್ತಕ ರಚನಾ ಸಮಿತಿ, ವಿಶ್ವವಿದ್ಯಾಲಯ ಶಿಕ್ಷಣ ಮಂಡಳಿ, ಸೆನೆಟ್, ವಿಶ್ವವಿದ್ಯಾಲಯ ಕಲಾ-ಸಂಕಾಯದ ವಿಶೇಷಜ್ಞ. ಆಥರ್ಸ್ ಗಿಲ್ಡ್ ಆಫ್ ಇಂಡಿಯಾ ದೆಹಲಿ, ಕರ್ನಾಟಕ ಲೇಖಕರ ಸಂಘ, ಅನುವಾದಕ ಪರಿಷತ್ ಹೊಸ ದೆಹಲಿ ಮುಂತಾದುವುಗಳಲ್ಲಿ ಸಲ್ಲಿಸಿದ ವಿಶೇಷ ಸೇವೆ. ಗುಲಬರ್ಗಾ, ಮಂಗಳೂರು, ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಕಾರ‍್ಯಕ್ರಮ, ರಾಷ್ಟ್ರೀಯ ಜಾಲದಲ್ಲಿ ಹಿಂದಿ ಕವಿಗೋಷ್ಠಿ, ಆಕಾಶವಾಣಿ ಗುಲಬರ್ಗಾದಿಂದ ವಿಶೇಷ ಕಾರ್ಯಕ್ರಮ ಪ್ರಸಾರ. ಹಲವಾರು ಕೃತಿಗಳ ರಚನೆ. ಕನ್ನಡ ವ್ಯಾಕರಣ ಕೈಪಿಡಿ, ಕೋಡ್ಗಲ್ಲಿನ ಕೂಗು, ಮಿರ್ಚಿ ಬಾಬಾ ಮತ್ತು ಇತರ ಕಥೆಗಳು, ಜ್ಞಾನಪೀಠ ಪ್ರಶಸ್ತಿ ವಿಜೇತ ವಿ.ಸ. ಖಾಂಡೇಕರ, ವಿಭೂತಿಯಾಂ, ಯುಗಾಂತ, ನಮ್ಮ ಮನೆ, ಚಿಂತನ-ಮಂಥನ, ಭಗತ್‌ಸಿಂಗ್, ಪ್ರಾಯೋಗಿನ ಕನ್ನಡ ವ್ಯಾಕರಣ, ಡಾ. ಸಿದ್ಧಲಿಂಗ ಸ್ವಾಮಿಗಳು ಮುಂತಾದುವು. ಕನ್ನಡದಿಂದ ಹಿಂದಿಗೆ-ಅನಂತ ಮೂರ್ತಿಯವರ ಭಾರತೀಪುರ, ಅವಸ್ಥೆ, ವೈಕುಂಟರಾಜುರವರ ಉದ್ಭವ, ಶ್ರೀಕೃಷ್ಣ ಆಲನಹಳ್ಳಿಯವರ ದುಃಖಭರಾ ರಾಗ, ಭೈರಪ್ಪನವರ ಛೋರಾ, ವೀಣಾಶಾಂತೇಶ್ವರರ ಮೋಡ್, ಹಿಂದಿಯಿಂದ ಕನ್ನಡಕ್ಕೆ-ಜೈನಾ ಪಾರಿಭಾಷಿಕ ಕೋಶ, ಕಾಗೆಗಳು ಮತ್ತು ಕಾಲಾಪಾನಿ. ವಿಭೂತಿಯಾಂ (ಹಿಂದಿ), ಮಿರ್ಚಿ ಬಾಬಾ ಮತ್ತು ಇತರ ಕಥೆಗಳು (ಕನ್ನಡ), ಭಾರತೀಯ ಕಾವ್ಯಮೀಮಾಂಸೆ (ಹಿಂದಿ), ಯುಗಾಂತ (ನಾಟಕ-ಕನ್ನಡ), ದುಃಖಭರಾ ರಾಗ (ಹಿಂದಿ) ಗುಲಬರ್ಗಾ ವಿ.ವಿ.ದ ಬಿ.ಎ, ಬಿ.ಎಸ್.ಸಿ, ಎಂ.ಎ. ಪದವಿ ತರಗತಿಗೆ ಪಠ್ಯಪುಸ್ತಕವಾಗಿ ಆಯ್ಕೆ. ಸಂದ ಪ್ರಶಸ್ತಿ ಗೌರವಗಳು: ಆಕಾಶವಾಣಿ ಗುಲಬರ್ಗಾದ ಕಾರ್ಯಕ್ರಮಗಳ ಅನುವಾದಕ್ಕಾಗಿ ಎರಡು ಬಾರಿ ರಾಷ್ಟ್ರೀಯ ಪುರಸ್ಕಾರ, ಉದಯೋನ್ಮುಖ ಬರಹಗಾರರ ಬಳಗ-ಗುಲಬರ್ಗಾದಿಂದ ಕಾರ್ಯ ಸಮ್ಮಾನ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಚುಳುಕಿ ಗೋವಿಂದ ವೆಂಕಟೇಶ – ೧೯೦೨ ಸೀತಮ್ಮ ನಂಜೇಗೌಡ – ೧೯೧೯ ಅಕ್ಕಮಹಾದೇವಿ – ೧೯೫೬

Details

Date:
November 22, 2023
Event Category: