Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಪ್ರೊ. ವಿ.ಎ. ಜೋಶಿ – ಕಣಜ

ಪ್ರೊ. ವಿ.ಎ. ಜೋಶಿ

Home/Birthday/ಪ್ರೊ. ವಿ.ಎ. ಜೋಶಿ
Loading Events

೩-೧೦-೧೯೪೦ ನಗೆಬರಹಗಾರರಾದ ಪ್ರೊ. ವಿ.ಎ. ಜೋಶಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿಯಲ್ಲಿ. ತಂದೆ ಆಬಾಜಿ, ತಾಯಿ ಇಂದಿರಾ. ಪ್ರಾರಂಭಿಕ ಶಿಕ್ಷಣ ಮುನವಳ್ಳಿ ರಾಮದುರ್ಗ. ಧಾರವಾಡದ ಜೆ.ಎಸ್.ಎಸ್. ಕಾಲೇಜಿನಿಂದ ಪದವಿ. ಸಾಂಗಲಿಯಲ್ಲಿ ಸ್ನಾತಕೋತ್ತರ ಶಿಕ್ಷಣ. ಪುಣೆ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ. ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭ (೧೯೬೬) ವಿಭಾಗದ ಮುಖ್ಯಸ್ಥರಾಗಿ, ೧೯೯೩ರಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೧೯೯೮ರಲ್ಲಿ ನಿವೃತ್ತಿ. ಕಾಲೇಜಿನ ದಿನಗಳಲ್ಲಿ ಎನ್.ಎಸ್.ಎಸ್. ಅಧಿಕಾರಿಯಾಗಿಯೂ ಕಾರ‍್ಯನಿರ್ವಹಣೆ. ಅಂಕೋಲದ ಲಯನ್ಸ್ ಕ್ಲಬ್ ಕಾರ‍್ಯದರ್ಶಿಯಾಗಿ, ಕರ್ನಾಟಕ ಸಂಘದ ಗೌರವ ಕಾರ‍್ಯದರ್ಶಿಯಾಗಿ ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಗೌರವ ಕಾರ‍್ಯದರ್ಶಿಯಾಗಿ ವಹಿಸಿದ ಇತರ ಜವಾಬ್ದಾರಿಗಳು. ನಗೆಬರಹ, ಜೀವನಚರಿತ್ರೆ ಶಿಶುಸಾಹಿತ್ಯದ ಜೊತೆಗೆ ಪತ್ರಿಕೆಗಳಿಗೆ, ನಿಯತಕಾಲಿಕೆಗಳಿಗೆ ಬರೆದ ಅಂಕಣ ಬರಹಗಳು. ಹಲವಾರು ಗ್ರಂಥಗಳ ಸಂಪಾದನೆ. ನಗೆಬರಹ ಸಂಕಲನಗಳು-ಲಘು ಹಾಸ್ಯ ಬರಹಗಳು, ಅದಲುಬದಲು, ಇಪ್ಪತ್ತು ನಗೆ ಬರಹಗಳು ಪ್ರಮುಖ ಸಂಕಲನಗಳು. ಜೀವನಚರಿತ್ರೆ- ಮದರ್ ತೆರೇಸಾ, ಬಾಬಾ ಅಮಟೆ. ಎಳೆಯರಿಗಾಗಿ-ಗೋಖಲೆ, ಗಾಂಜಿ, ನೆಹರೂ, ಶಾಸ್ತ್ರಿ, ಕಿತ್ತೂರು ಚೆನ್ನಮ್ಮ ಮುಂತಾದುವು. ಸಂಕೀರ್ಣ ಕೃತಿಗಳು-ಹರಿದಾಸರ ಕೀರ್ತನ ಮಂಜರಿ, ಅಂಕೋಲ ತಾಲ್ಲೂಕು ದರ್ಶನ. ಹರಿದಾಸರ ಕೀರ್ತನ ಮಂಜರಿಯು ಕರ್ನಾಟಕ ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯಪುಸ್ತಕವಾಗಿ ಆಯ್ಕೆ. ಸಂಪಾದಿತ-ದಿನಕರ ದೇಸಾಯಿಯವರ ಅಭಿನಂದನ ಗ್ರಂಥ ‘ದಿನಕರದರ್ಶನ.’ ೧೯೭೯ರಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾ ಸಂಪುಟ ‘ಕಡಲು.’ ಅಂಕೋಲದ ಸಾಪ್ತಾಹಿಕ ‘ಸಕಾಲಿಕ’ ಮತ್ತು ಈಗ ‘ನಗೆಮುಗುಳು’ ಮಾಸಿಕ ನಗೆ ಮಾಸಪತ್ರಿಕೆಯ ಅಂಕಣ ಬರಹಗಾರರು. ಹಲವಾರು ಹಾಸ್ಯಲೇಖನಗಳು ಆಕಾಶವಾಣಿಯಿಂದ ಪ್ರಸಾರ. ಸಂದ ಪ್ರಶಸ್ತಿ ಗೌರವಗಳು-ಜನಪದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಕೃತಿಗೆ ಕೇಂದ್ರ ಸರಕಾರದ ಪ್ರಶಸ್ತಿ, ಪ್ರಕಟಣೆ. ನವಸಾಕ್ಷರರ ಸಾಹಿತ್ಯ ಸ್ಪರ್ಧೆಯಲ್ಲಿ ಕೇಂದ್ರ ಸರಕಾರದ ಬಹುಮಾನ, ಮಣ್ಣಿನ ಮಕ್ಕಳ ಸಾಹಸ ಕಥೆಗಳು ಕೃತಿಗೆ ಸರಕಾರದ ಪ್ರಶಸ್ತಿ, ಸಂಕ್ರಮಣ, ಅಕ್ಷಯ ಪತ್ರಿಕೆಯ ಸ್ಪರ್ಧೆಗಳಲ್ಲಿ ಹಲವಾರು ಬಾರಿ ಬಹುಮಾನಿತರು. ಕರ್ನಾಟಕ ವಿ.ವಿ.ದ ಅತ್ಯುತ್ತಮ ಎನ್.ಎಸ್.ಎಸ್. ಅಧಿಕಾರಿ ಪ್ರಶಸ್ತಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಗಿರಿಬಾಲೆ – ೧೯೧೩ ಮಹದೇವ ಬಣಕಾರ – ೧೯೩೨-೧೭.೧೧.೦೧ ಡಿ.ಎನ್. ಅಕ್ಕಿ – ೧೯೪೮

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top