ಪ್ರೊ. ಸಿ.ಕೆ.ಎನ್. ರಾಜ

Home/Birthday/ಪ್ರೊ. ಸಿ.ಕೆ.ಎನ್. ರಾಜ
Loading Events
This event has passed.

೧೯-೨-೧೯೩೨ ಸಿ.ಕೆ.ಎನ್. ರಾಜರವರು ಹುಟ್ಟಿದ್ದು ನಂಜನಗೂಡಿನಲ್ಲಿ. ತಂದೆ ಸಿ.ಕೆ. ನಾಗಪ್ಪ, ತಾಯಿ ಸೀತಾಲಕ್ಷ್ಮಮ್ಮ. ಪ್ರೌಢಶಾಲೆಯವರೆವಿಗೂ ನಂಜನಗೂಡಿನಲ್ಲೇ ವಿದ್ಯಾಭ್ಯಾಸ. ಉತ್ತಮವಾಗ್ಮಿ ಎಂಬ ಖ್ಯಾತಿ. ಶಾಲೆಗೆ ತಂದ ಷೀಲ್ಡ್ ನೋಡಿದ ಮುಖ್ಯೋಪಾಧ್ಯಾಯರಾದ ಶೆಲ್ಪ ಪುಳ್ಳೆ ಅಯ್ಯಂಗಾರ‍್ಯರು ಇವರಿಗಿದ್ದ  ಸಿ.ಎನ್. ಕೇಶವಮೂರ್ತಿ ಎಂಬ ಹೆಸರು ಬದಲಿಸಿ ಸಿ.ಕೆ.ಎನ್. ರಾಜ ಎಂದು ಕರೆದರು. ಅದೇ ಶಾಶ್ವತವಾಯಿತು. ಇಂಟರ್ ಮೀಡಿಯೆಟ್ ಓದಿದ್ದು ಮೈಸೂರಿನ ಯುವರಾಜ ಕಾಲೇಜು. ಸೇಂಟ್ ಫಿಲೋಮಿನ ಕಾಲೇಜಿನಲ್ಲಿ ಬಿಎಸ್ಸಿ. ಲಾ ಓದಿದ್ದು ಬೆಂಗಳೂರಿನ ಸರಕಾರಿ ಕಾಲೇಜು. ಅಂದಿನ ಪ್ರಾಂಶುಪಾಲರು ಎಮ್. ನಾರಾಯಣರಾಯರು. (ಭಾರತದ ಸರ್ವೋಚ್ಛನ್ಯಾಯಾಲಯದ ನ್ಯಾಯಾಧಿಶರಾಗಿದ್ದ ಎಂ.ಎನ್. ವೆಂಕಟಾಚಲಯ್ಯನವರ ತಂದೆ) ಕಾನೂನು ವಿದ್ಯಾಭ್ಯಾಸದ ನಂತರ ವಕೀಲಿವೃತ್ತಿ. ನಂತರ ಮೈಸೂರು ಶಾರದಾ ವಿಲಾಸ್ ಕಾನೂನು ಕಾಲೇಜಿನಲ್ಲಿ ಅಧ್ಯಾಪಕರ ಹುದ್ದೆ. ೧೯೬೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಲಾ ಕಾಲೇಜಿನಲ್ಲಿ ರೀಡರ್ ಆಗಿ ನೇಮಕ. ಧಾರವಾಡದ ವಿದ್ಯಾವರ್ಧಕ ಸಂಘದ ಚಟುವಟಿಕೆಗಳಲ್ಲಿ ಭಾಗಿ. ದೊರೆತ ಸ್ನೇಹಿತರೆಂದರೆ ಶ್ರೀ ಚೆನ್ನವೀರಕಣವಿ, ಬಸವರಾಜ ಕಟ್ಟೀಮನಿ, ಸಿದ್ದಲಿಂಗ ಪಟ್ಟಣಶೆಟ್ಟಿ, ಚಂದ್ರಶೇಖರ ಪಾಟೀಲ, ಬೆಟಗೇರಿ ಕೃಷ್ಣಶರ್ಮ, ಶಂಬಾ ಜೋಶಿ, ದೇವೇಂದ್ರಕುಮಾರ ಹಕಾರಿ, ಎಂ.ಎಂ. ಕಲಬುರ್ಗಿ ಮುಂತಾದವರೊಡನಾಟ. ಸಾಹಿತ್ಯದತ್ತ ಒಲವು. ಮಾತಾಮಹರ ಕಡೆಯಿಂದ ಬಂದ ಹಾಸ್ಯಪ್ರಜ್ಞೆ. ಬರೆದದ್ದು ಹಾಸ್ಯಲೇಖನ. ಕೊರವಂಜಿಗೆ ರವಾನೆ. ರಾಶಿಯವರಿಂದ ಬಂದ ಉತ್ತರ-ಲೇಖನ ತಲುಪಿದೆ-ಕ.ಬು.ನಲ್ಲಿ ಭದ್ರವಾಗಿದೆ. ಹುಡುಗುಬುದ್ಧಿ, ಓ ! ಭದ್ರಪಡಿಸಿದ್ದರೆಂಬ ನಂಬಿಕೆ. ಅರ್ಥ ತಿಳಿದಾಗ ಕಂಗಾಲು. ಹಟತೊಟ್ಟು ಬರೆದ ಲೇಖನ. ‘ಪಂಡಿತ್‌ಜೀಗೆ ಸೈನೊಸೈಟಿಸ್’ ರಾಜಕೀಯ ವಿಡಂಬನೆ. ಈಗ ರಾಶಿಯವರು ಬೆನ್ನು ತಟ್ಟಿ ಪ್ರಕಟಿಸಿ ೨ ರೂ ಸಂಭಾವನೆ ಕಳುಹಿಸಿ, ಶೀಘ್ರ ಹಣ ಹಿಂದಿರುಗಿಸಿದರೆ ಮುಂದಿನ ಸಂಚಿಕೆ ಪ್ರಕಟಣೆಯ ವಾಗ್ದಾನ. ನಂತರ ಬರೆದದ್ದು ಸುಮಾರು ೨೦೦೦ಕ್ಕೂ ಮಿಕ್ಕ ವಿಡಂಬನೆಗಳು ಪ್ರಕಟ. ಯಾವುದನ್ನೂ ಸಂಗ್ರಹಿಸಿಟ್ಟುಕೊಳ್ಳದ ಉದಾರವಾದಿ. ಎರಡು ಕಾದಂಬರಿ ಪ್ರಕಟಣೆ. ‘ಪುನರುತ್ಥಾನ’-ಕನ್ನಡಪ್ರಭದಲ್ಲಿ, ರಾಯರ ವಠಾರ-ಸುಧಾ ಪತ್ರಿಕೆಯಲ್ಲಿ. ಕಾನೂನು ವಿಭಾಗದಲ್ಲಿ ಪಿಎಚ್.ಡಿ.-ನಕ್ಕು ನಗಿಸಲು ಒಂದೆಡೆ ಸಾವಿರಾರು ಭಾಷಣಗಳು ಮತ್ತೊಂದೆಡೆ ಸಾಮಾನ್ಯರಿಗೂ ಸಂವಿಧಾನದ ತಿಳುವಳಿಕೆಗಾಗಿ ಭಾಷಣ. CONSTITUTIONAL LITERACY COMPAIGN ಮೂಲಕ, ಶಿರಸಿ, ಸಿದ್ಧಾಪುರ, ಕುಮಟಾ, ಕಾರವಾರ, ಅಂಕೋಲ ಮುಂತಾದೆಡೆ ಮನೆಮನೆ ಹೋಗಿ ಸಂವಿಧಾನದ ಬಗ್ಗೆ ತಿಳುವಳಿಕೆ-ಏಕವ್ಯಕ್ತಿ ಸಾಧನೆ. ಪುನಃ ಮೈಸೂರಿಗೆ. ಮೈಸೂರು ವಿ.ವಿ. ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರು. ೧೯೯೨ರಲ್ಲಿ ನಿವೃತ್ತಿ. ಮಹಾಜನ ಲಾ ಕಾಲೇಜಿನ ಪ್ರಾಂಶುಪಾಲರಾಗಿ, ನಿರ್ದೇಶಕರಾಗಿ ಸೇವೆ. ಹೈದರಾಬಾದಿನ ವಲ್ಲಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡಮಿ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆ, ಪೊಲೀಸ್ ಅಕಾಡಮಿ, ಅಕಾಡಮಿ ಆಫ್ ಸ್ಟಾಫ್ ಕಾಲೇಜುಗಳಲ್ಲಿ ಇಂದಿಗೂ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ.   ಇದೇ ದಿನ ಹುಟ್ಟಿದ ಸಾಹಿತಿ : ವಸಂತ ಕಲಬಾಗಲ್ – ೧೯೬೦

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top