ಪ್ರೊ. ಹಿರಿಯಣ್ಣ. ಎಂ.

Home/Birthday/ಪ್ರೊ. ಹಿರಿಯಣ್ಣ. ಎಂ.
Loading Events

೭-೫-೧೮೭೧ ೧೯-೯-೧೯೫೦ ಸುಪ್ರಸಿದ್ಧ ವಿದ್ವಾಂಸರು, ತತ್ತ್ವಜ್ಞಾನಿಗಳೂ ಆದ ಹಿರಿಯಣ್ಣನವರು ಜನಿಸಿದ್ದು ಮೈಸೂರಿನಲ್ಲಿ, ಪ್ರಾಥಮಿಕ ವಿದ್ಯಾಭ್ಯಾಸ ಮೈಸೂರಿನಲ್ಲಿ. ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ.ಎ. ಮತ್ತು ಎಂ.ಎ. ಪದವಿ. ಪದವಿ ಗಳಿಸಿದ ನಂತರ ಉದ್ಯೋಗ ಪ್ರಾರಂಭಿಸಿದ್ದು ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟಿನ ಲೈಬ್ರರಿಯನ್ ಆಗಿ. ಕೆಲಕಾಲ ಸರ್ಕಾರಿ ಕಚೇರಿಯಲ್ಲಿ ಗುಮಾಸ್ತೆ ಕೆಲಸ. ಮುಂದೆ ಮದರಾಸಿನ ಸೈದಾ ಪೇಟೆಯ ಟೀಚರ್ಸ್ ಕಾಲೇಜಿನಲ್ಲಿ ಎಲ್.ಟಿ. ಪದವಿ ಪಡೆದು ಮೈಸೂರಿನ ಗೌರ‍್ನಮೆಂಟ್ ನಾರ್ಮಲ್ ಸ್ಕೂಲಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿ ಮುಖ್ಯೋಪಾಧ್ಯಾಯರಾಗಿ ಸೇವೆ. ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರಾಗಿ, ಉಪಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಕನ್ನಡದ ಪ್ರಚಾರ, ಅಭಿವೃದ್ಧಿಗಳಿಗಾಗಿ ಶ್ರಮಿಸುತ್ತಿದ್ದ. ಪ್ರಮುಖರಲ್ಲಿ ಒಬ್ಬರು. ಕನ್ನಡ ಶಿಕ್ಷಣ ಬೋಧನೆಯ ಬಗೆಗೆ ಗ್ರಂಥವೊಂದರ ರಚನೆ. ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ಸಂಸ್ಕೃತ ಭಾಷಾ ಸಾಹಿತ್ಯವನ್ನಲ್ಲದೆ, ಭಾರತೀಯ ತತ್ತ್ವಶಾಸ್ತ್ರದ ಬೋಧನೆ. ಭಾರತೀಯ ತತ್ತ್ವಶಾಸ್ತ್ರದ ಬಗ್ಗೆ ಆಳವಾದ ಪಾಂಡಿತ್ಯ- ಅಕಾರಯುಕ್ತ ವ್ಯಾಖ್ಯಾನಕಾರರೂ ಆಗಿದ್ದರು. ಡಾ. ರಾಧಾಕೃಷ್ಣನ್ ಮುಂತಾದ ಮಹಾನ್ ವ್ಯಕ್ತಿಗಳೊಡನೆ ನಿಕಟ ಸಂಪರ್ಕ, ತತ್ತ್ವಶಾಸ್ತ್ರದ ಜಿಜ್ಞಾಸೆ. ತತ್ತ್ವಶಾಸ್ತ್ರದ ಆಧಾರದ ಮೇಲೆ ಹಲವಾರು ಗ್ರಂಥಗಳ ರಚನೆ. ಔಟ್‌ಲೈನ್ಸ್ ಆಫ್ ಇಂಡಿಯನ್ ಫಿಲಾಸಫಿ, ದಿ ಎಸೆನ್‌ಷಿಯಲ್ಸ್ ಆಫ್ ಇಂಡಿಯನ್ ಫಿಲಾಸಫಿ, ಪಾಪ್ಯುಲರ್ ಎಸ್ಸೇಸ್ ಇನ್ ಇಂಡಿಯನ್ ಫಿಲಾಸಫಿ, ದಿ ಕ್ವೆಸ್ಟ್ ಆಫ್ಟ್‌ರ್ ಫರ್‌ಫೆಕ್ಷನ್, ಆರ್ಟ್ ಎಕ್ಸ್‌ಪೀರಿಯನ್ಸ್, ಸಂಸ್ಕೃತ ಸ್ಟಡೀಸ್, ಇಂಡಿಯನ್ ಫಿಲಾಸಫಿಕಲ್ ಸ್ಟಡೀಸ್, ದಿ ಮಿಷನ್ ಆಫ್ ಫಿಲಾಸಫಿ…ಈ ಗ್ರಂಥಗಳಲ್ಲಿ ಭಾರತೀಯ ತತ್ತ್ವಶಾಸ್ತ್ರದ ಬೆಳವಣಿಗೆ, ಸಿದ್ಧಾಂತಗಳ ವಿವರಣೆಯ ಹೃದಯಂಗಮ ನಿರೂಪಣೆ. ಇದಲ್ಲದೆ ಈಶಾವ್ಯಾಸೋಪನಿಷತ್, ಕೇನೋಪನಿಷದ್, ಕಾಠಕೋಪನಿಷದ್, ಬೃಹದಾರಣ್ಯಕೋಪನಿಷದ್ ಇಂಗ್ಲಿಷ್‌ಗೆ ಅನುವಾದಿತ ಗ್ರಂಥಗಳು. ನೈಷ್ಕರ್ಮ ಸಿದ್ಧಿ (ಸುರೇಶಾಚಾರ್ಯ), ವೇದಾಂತಸಾರ (ಸದಾನಂದ) ಇಷ್ಟಸಿದ್ಧಿ ಇವು ಸಂಪಾದಿತ ಗ್ರಂಥಗಳು. ಇವಲ್ಲದೆ ಏಷಿಯಾಟಿಕ್ ಸೊಸೈಟಿ (ಲಂಡನ್), ಮಿಥಿಕ್ ಸೊಸೈಟಿ ಬೆಂಗಳೂರು, ಮದರಾಸಿನ ಫಿಲಸಾಫಿಕಲ್ ಮ್ಯಾಗಜಿನ್ ಮುಂತಾದ ಪತ್ರಿಕೆಗಳಿಗೆ ಬರೆದ ನೂರಾರು ಲೇಖನಗಳು. ಲೇಖನದ ಪ್ರಮುಖ ಅಂಶ-ಭಾರತೀಯ ತತ್ತ್ವಜ್ಞಾನದ ಅಧ್ಯಯನ, ಅನುಷ್ಠಾನ, ಪರಿಶೀಲನೆ, ಪ್ರತಿಪಾದನೆಗಳು ಇವರ ವಿಶಿಷ್ಟ ಕೊಡುಗೆ. ಹಲವಾರು ವಿದ್ವಾಂಸರ ಪರಿಷತ್ತು, ಸಮ್ಮೇಳನಗಳು ಅಧ್ಯಕ್ಷ ಪದವಿಯ ಗೌರವ ತೋರಿ ಸನ್ಮಾನಿಸಿವೆ. ಸಂಸ್ಕೃತ ಅಕಾಡಮಿಯಿಂದ ‘ಸಂಸ್ಕೃತ ಸೇವಾಧುರೀಣ’ ಎಂಬ ಪ್ರಶಂಸೆ ದೊರೆತಿದೆ. ನಿಧನಾನಂತರ ಅಭಿಮಾನಿಗಳು ಶತಮಾನೋತ್ಸವ ಕಮೆಮೊರೇಷನ್ ವಾಲ್ಯೂಮ್ ಗ್ರಂಥ ೧೯೭೨ರಲ್ಲಿ ಪ್ರಕಟಿಸಿ ತೋರಿದ ಗೌರವ.   ಇದೇ ದಿನ ಹುಟ್ಟಿದ ಸಾಹಿತಿಗಳು : ಹೊಯ್ಸಳ – ೧೮೯೩ ಶಿವೇಶ್ವರ ದೊಡ್ಡಮನಿ – ೧೯೧೫-೨೬.೩.೧೯೫೦ ಮಿಸ್. ಸಂಪತ್ – ೧೯೨೮ ಎಸ್.ಎನ್. ಗಾಯತ್ರಿ – ೧೯೫೨

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top