ಪ.ಸು. ಭಟ್ಟ

Home/Birthday/ಪ.ಸು. ಭಟ್ಟ
Loading Events
This event has passed.

೩-೬-೧೯೩೧ ೨೪-೬-೧೯೮೧ ಪತ್ರಿಕೋದ್ಯಮಿ, ಸಾಹಿತಿ, ಪರಮೇಶ್ವರ ಸುಬ್ರಾಯ ಭಟ್ಟರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲ್ಲೂಕಿನ ಹೊಲನಗದ್ದೆ. ತಂದೆ ಸುಬ್ಬರಾಯಭಟ್ಟರು, ತಾಯಿ ಸರಸ್ವತಿ. ಪ್ರಾಥಮಿಕ ವಿದ್ಯಾಭ್ಯಾಸ ಶಿರಸಿ, ಶೀವಮೊಗ್ಗೆಯಲ್ಲಿ ಕಾಲೇಜು ವ್ಯಾಸಂಗ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಎಳೆವೆಯಿಂದಲೇ ಸಾಹಿತ್ಯದಲ್ಲಿ ಆಸಕ್ತಿ. ತಾಯಿ ಹೇಳುತ್ತಿದ್ದ ಗೋವಿನ ಹಾಡು, ಕಥೆ, ಯಕ್ಷಗಾನ ಪ್ರಸಂಗಗಳು, ಜನಪದ ಕಥೆಗಳು ಬೀರಿದ ಪ್ರಭಾವ. ಜೊತೆಗೆ ಹಾ.ಮಾ.ನಾ. ಅನಂತಮೂರ್ತಿ, ಇವರುಗಳ ಸಾಹಚರ‍್ಯೆ, ಎಸ್.ವಿ. ಪರಮೇಶ್ವರ ಭಟ್ಟರ ಮಾರ್ಗದರ್ಶನ. ಹದಿನೇಳನೆಯ ವಯಸ್ಸಿಗೆ ‘ಪಡುವಣ’ ಎಂಬ ಕಥಾ ಸಂಕಲನ ಪ್ರಕಟಿತ. ಹೀಗೆ ಪ್ರಾರಂಭಿಸಿದ ಸಾಹಿತ್ಯದ ಕೃತಿ ಬದುಕಿನುದ್ದಕ್ಕೂ ಬೆಳೆಯಿತು. ಎರಡನೆಯ ಕಥಾ ಸಂಕಲನ ‘ಅಂಗೇಲಾ’. ಮೊದಲ ಕಾದಂಬರಿ ಜಾರುಬಂಡೆ. ವೇಶ್ಯೆಯೊಬ್ಬಳ ಜೀವನಕ್ಕೆ ಸಂಬಂಸಿದ ಕಥಾವಸ್ತು. ಸಂಕ್ರಮಣ ಪತ್ರಿಕೆಯಲ್ಲಿ ಪ್ರಕಟಗೊಂಡದ್ದು ೧೯೭೦ರ ಸುಮಾರಿನಲ್ಲಿ. ಭಗತ್‌ಸಿಂಗರ ಆತ್ಮಾರ್ಪಣೆ ವಸ್ತುವುಳ್ಳ ಕಾದಂಬರಿ ‘ಆತ್ಮಾರ್ಪಣೆ’ ಪ್ರಕಟಿತ ಕಿಷನ್‌ಚಂದ್‌ರವರ ‘ಏಕ್ ಔರತ್ ಔರ್ ಹಜಾರ್ ದಿವಾನೆ’ ಎಂಬ ಕಾದಂಬರಿಯ ಅನುವಾದ. ಸಾವಿರ ಪ್ರಣಯಿಗಳು ಪ್ರಕಟಿತ. ಗಾಂಜಿಯವರನ್ನು ಕುರಿತು ಕನ್ನಡ ಕವಿಗಳು ಬರೆದ ಕವಿತೆಗಳನ್ನು ಸಂಗ್ರಹಿಸಿದ ಕೃತಿ ‘ಅಮರನಾದೈ ತಂದೆ’ ಮತ್ತು ‘ಸೌಭಾಗ್ಯ’ ಸಂಪಾದಿಸಿದ ಕೃತಿಗಳು. ಜೀವನ ಚರಿತ್ರೆ-ಜಾನ್ ಕೆನಡಿ ಪ್ರಕಟಿತ. ವೀಣೆ ನುಡಿಯಿತು (ನೀಳ್ಗತೆ), ಮಾತನಾಡಿದ ಗಿಣಿ (ಮಕ್ಕಳ ಕಥೆ), ಸಹಕಾರ ಚಳವಳಿ ಮತ್ತು ಸಹಕಾರೀ ಗೃಹ ನಿರ್ಮಾಣ ಸಂಘಗಳು (ಪ್ರಬಂಧ ಸಂಕಲನ) ಹೀಗೆ ಹಲವಾರು ಕೃತಿ ಪ್ರಕಟಿತ. ಸುಮಾರು ೫೦೦ಕ್ಕೂ ಹೆಚ್ಚು ಲೇಖನಗಳು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳಬೇಕಿದೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ. ಜ್ಞಾನಗಂಗೋತ್ರಿ (ಕಿರಿಯರ ವಿಶ್ವಕೋಶದ) ವ್ಯವಸ್ಥಾಪಕ ಸಂಪಾದಕರು. ಶಿರಸಿಯ ಸಮಾಚಾರ ವಾರಪತ್ರಿಕೆ ಸಂಸ್ಥಾಪಕರು. ಸಮನ್ವಯ ಸಾಪ್ತಾಹಿಕವನ್ನು, ಸೌರಭ ಮಾಸ ಪತ್ರಿಕೆಯನ್ನು ಹಲವಾರು ವರ್ಷ ಸ್ವತಂತ್ರವಾಗಿ ನಡೆಸಿದರು. ಕಸ್ತೂರಿ, ಸಂಯುಕ್ತ ಕರ್ನಾಟಕ, ಪ್ರಜಾಪ್ರಭುತ್ವ ಪತ್ರಿಕೆಗಳ ಸಂಪಾದಕರ ಜವಾಬ್ದಾರಿ ಹಲವಾರು ವರ್ಷ. ಕರ್ನಾಟಕ ಸಾಹಿತ್ಯ ಅಕಾಡಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ‍್ಯಕಾರಿ ಸಮಿತಿ ಸದಸ್ಯರಾಗಿ, ಪಿ.ಯು.ಸಿ. ಮಂಡಳಿ, ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ವಯಸ್ಕರ ಶಿಕ್ಷಣ ಸಮಿತಿಯ ಉಪಾಧ್ಯಕ್ಷರಾಗಿ, ಬ್ಯಾಂಕುಗಳ ನಿರ್ದೇಶಕರಾಗಿ, ಬ್ಯಾಂಕಿಂಗ್ ಕ್ಷೇತ್ರದ ವಿವಿಧ ಸಹಕಾರಿ ಸಂಸ್ಥೆಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಇವರು ಚಿತ್ರದುರ್ಗದ ಬಳಿ ಬಸ್ ಅಪಘಾತಕ್ಕೀಡಾದ್ದು ಜೂನ್ ೨೪ರ ೧೯೮೧ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಕೃಷ್ಣಗಿರಿ ಕೃಷ್ಣರಾಯರು – ೧೮೯೩-೬.೯.೬೬ ವಸಂತೀ ಚಂದ್ರ – ೧೯೪೩ ಪ್ರಹ್ಲಾದ ಅಗಸನ ಕಟ್ಟೆ – ೧೯೫೬ ಟಿ.ಸಿ. ಪೂರ್ಣಿಮ – ೧೯೬೩

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top