ಫಯಾಜ್ ಖಾನ್

Home/Birthday/ಫಯಾಜ್ ಖಾನ್
Loading Events
This event has passed.

೧೭.೦೨.೧೯೬೮ ಸಾರಂಗಿ ವಾದನ, ತಬಲ ಹಾಗೂ ಗಾಯನ ಕಲೆ ಮೂರು ಪ್ರಕಾರಗಳಲ್ಲೂ ಪ್ರಭುತ್ವ ಪಡೆದಿರುವ ಫಯಾಜ್ ಖಾನ್‌ರವರು ಹುಟ್ಟಿದ್ದು ಧಾರವಾಡ. ತಂದೆ ಉಸ್ತಾದ್ ಅಬ್ದುಲ್ ಖಾದರ್ ಖಾನ್, ತಾಯಿ ಜೈತುನ್‌ಬಿ. ತಂದೆಯೇ ಮೊದಲ ಗುರು. ಸಾರಂಗಿ ವಾದನ ಕಲೆಯನ್ನು ಜೀವಂತವಾಗಿ ಉಳಿಸಿಕೊಳ್ಳಲು ಹೆಣಗುತ್ತಿರುವವರಲ್ಲಿ ಫಯಾಜ್ ಖಾನ್ ಪ್ರಮುಖರು. ಸಾರಂಗಿವಾದನ, ಸಂಗೀತದ ಎಲ್ಲ ಪ್ರಕಾರಗಳಲ್ಲೂ ಅಷ್ಟೇನು ಬಳಕೆಗೆ ಬಾರದ ಪ್ರಕಾರವಾದರೂ ತಮ್ಮೆಲ್ಲ ಶಕ್ತಿಯನ್ನು ಕ್ರಯಿಸಿ ಕಾಪಾಡಲು ಮುಂದಾಗಿದ್ದಾರೆ. ಪದ್ಮಭೂಷಣ ಖ್ಯಾತಿಯ ಸಾರಂಗಿ ವಾದಕ ಪಂ. ರಾಮನಾರಾಯಣರಿಂದ ಸಾರಂಗಿ ವಾದನ ಕಲಿಕೆ. ಹದಿನೈದು ವರ್ಷಗಳ ಹಿಂದೆ ಮೈಸೂರಿನ ಸಪ್ತಸ್ವರ ಬಳಗದಿಂದ ಉಸ್ತಾದ್ ಬಾಲೇ ಖಾನ್ ಮತ್ತು ಪಂ. ಕಬಾಡಿಯವರ ಸಿತಾರ್ ಜುಗಲಬಂದಿ ಕಾರ್ಯಕ್ರಮ. ತಬಲ ಸಾಥ್‌ಕೊಟ್ಟವ ೧೮ರ ಹರೆಯದವ. ಪ್ರೇಕ್ಷಕರಿಗೆ ಕುತೂಹಲ, ಹುಡುಗ ಏನು ನುಡಿಸಿಯಾನೆಂದು ಅದೆಂತಹ ಕಳೆಕಟ್ಟಿದ ತಬಲ ವಾದನದ ಜುಗಲಬಂದಿ. ಕೇಳಿದವರು ಇಂದಿಗೂ ನೆನೆಪಿಸಿಕೊಳ್ಳುವ ಕಾರ್ಯಕ್ರಮ. ಇವರ ತಾತ ಉಸ್ತಾದ್ ಷೇಕ್ ಅಬ್ದುಲ್ಲ ಹೈದರಾಬಾದಿನ ನವಾಬರ ಆಸ್ಥಾನದಲ್ಲಿ ಸಾರಂಗಿ ವಾದಕರು.ಹಾಡುಗಾರಿಕೆ, ತಬಲ ಶ್ರಮಪಟ್ಟ ಕಲಿಕೆ. ಧಾರವಾಡದ ತಬಲ ವಾದಕರಾದ ಪಂ. ಬಸವರಾಜ ಬೆಂಡಿಗೇರಿಯವರಲ್ಲಿ ಕಲಿತದ್ದು ತಬಲ. ಹಾಡುಗಾರಿಕೆಯಲ್ಲೂ ಪಡೆದ ಪ್ರಭುತ್ವ. ಸಾರಂಗಿವಾದನ ಕೆಲವು ಸಾರೆ ಗಾಯಕನ ಧ್ವನಿಗೆ ಸರಿಸಮಾನವಾಗಿ ಕೇಳಿಬರುವ ವಾದ್ಯ ಸಂಗೀತ. ದಕ್ಷಿಣ ಭಾರತದಲ್ಲಿ ಗಾಯಕರು ಅಷ್ಟಾಗಿ ಅಪೇಕ್ಷಿಸದಿದ್ದರೂ ಛಲಬಿಡದೆ ರೂಢಿಸಿಕೊಂಡು ಸಾರಂಗಿ ವಾದನಕ್ಕೆ ಮೆಹನತ್ತು ತರಲು ಪಡುತ್ತಿರುವ ಶ್ರಮ. ಫಯಾಜ್ ಖಾನರ ಸಾರಂಗಿ, ಪ್ರಕಾಶ್ ಸೊಂಟಕ್ಕಿಯವರ ಗಿಟಾರ್ ಜುಗಲಬಂದಿ ಆ ಸಂಗೀತದ ಪರಾಕಾಷ್ಠತೆಯನ್ನು ಅನುಭವಿಸಿದವರಿಗೇ ಗೊತ್ತು. ಸಂದ ಪ್ರಶಸ್ತಿ ಗೌರವಗಳು ಹಲವಾರು. ಎ.ಐ.ಆರ್.ನಿಂದ ರಾಷ್ಟ್ರೀಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗದಗ್‌ನ ಪುಟ್ಟರಾಜ ಕೃಪಾ ಭೂಷಣ ಪ್ರಶಸ್ತಿ ಮುಂತಾದುವು. ಟಿ.ಎನ್. ಸೀತಾರಾಂ ರವರ ಮುಕ್ತ ಧಾರವಾಹಿಯ ಪ್ರಾರಂಭಿಕ ಹಾಡಿನ ಮಧ್ಯೆ ಉಚ್ಚಸ್ವರದ ಆಲಾಪ್ ಕೇಳಿಬರುತ್ತದೆ. ಜ್ಞಾಪಕಕ್ಕೆ ಬರಲ್ಲಿಲ್ಲವಾ? ತ್ರಿವೇಣಿ ಸಂಗಮ ಧಾರಾವಾಹಿಯ ಪ್ರಾರಂಭಿಕ ಗೀತೆ ಗಮನಿಸಿ ಅದುವೇ ಸಿರಿಕಂಠದ ಫಯಾಜ್ ಖಾನರ ಧ್ವನಿ.   ಇದೇ ದಿನ ಹುಟ್ಟಿದ ಕಲಾವಿದ : ಸುಬ್ರಾಯ ಜೆ.ಸಿ. – ೧೯೪೭

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top