Loading Events

« All Events

  • This event has passed.

ಬಳ್ಳಾರಿ ರಾಘವ

August 2, 2023

..೧೮೮೦ ೧೬..೧೯೪೬ ಸುಪ್ರಸಿದ್ಧ ನಟ, ನಾಟಕಕಾರ ರಾಘವ ರವರು ಹುಟ್ಟಿದ್ದು ಬಳ್ಳಾರಿಯಲ್ಲಿ. ತಂದೆ ನರಸಿಂಹಾಚಾರ್ಯರು, ತಾಯಿ ಶೇಷಮ್ಮ. ಬಳ್ಳಾರಿಯಲ್ಲಿ ಎಫ್‌.ಎ ಮತ್ತು ಮದರಾಸಿನಲ್ಲಿ ಪಡೆದ ಬಿ.ಎ, ಬಿ.ಎಲ್‌  ಪದವಿ. ಧರ್ಮಾವರಂ  ರಾಮಕೃಷ್ಣಾಚಾರ್ಯರ ಬಳಿ ವಕೀಲಿ ವೃತ್ತಿ ತರಬೇತಿ. ೧೯೦೬ ರಲ್ಲಿ ಸ್ವತಂತ್ರ ವಕೀಲರಾಗಿ ಗಳಿಸಿದ ಪ್ರಸಿದ್ಧಿ. ಮದರಾಸಿನಲ್ಲಿದ್ದಾಗಲೇ ಪಾರಸಿ ಥಿಯೆಟ್ರಿಕಲ್ ಕಂಪನಿಯ ನಾಟಕಗಳನ್ನು ನೋಡುವ ಅಭ್ಯಾಸ. ನಟ ದಾದಾಬಾಯಿ ಮಿಸ್ತ್ರಿಯವರ ಅಭಿನಯ ಬೀರಿದ ಪ್ರಭಾವ. ಮೊದಲು ಅಭಿನಯಿಸಿದ ನಾಟಕ ಡಾಕ್ಟರ್ ಅಂಡ್‌ ಎಪಾಥಿಕರಿ (APOTHECARY) ಬಳ್ಳಾರಿಯಲ್ಲಿ ಶಾಮರಾವ್‌ವಟ್ಟಂ ಸೋದರರ ನೆರವಿನಿಂದ ಸ್ಥಾಪಿಸಿದ ಶೇಕ್ಸ್‌ಪಿಯರ್ ಕ್ಲಬ್‌. ಹಲವಾರು ಇಂಗ್ಲಿಷ್‌ ನಾಟಕಗಳಲ್ಲಿ ಅಭಿನಯ. ಧರ್ಮಾವರಂ ರಾಮಕೃಷ್ಣಾಚಾರ್ಯ, ಕೋಲಾಚಲಂ ಶ್ರೀನಿವಾಸರಾಯರು ಬರೆದು ನಿರ್ದೇಶಿಸುತ್ತಿದ್ದ ಸರಸ ವಿನೋದಿನಿ, ಸುಮನೋರಮ ಸಭಾ ಸಂಸ್ಥೆಗಳಲ್ಲಿ ಪಾತ್ರಧಾರಿ. ವಿಜಯನಗರದ ಪತನ ನಾಟಕದಲ್ಲಿ ಪಠಾನ್‌  ರುಸ್ತುಮ್ ಪಾತ್ರದಿಂದ ದೊರೆತ ಜನ ಮೆಚ್ಚುಗೆ. ಬೆಂಗಳೂರಿನ ಅಮಚೂರ್ ಡ್ರಮ್ಯಾಟಿಕ್‌ ಅಸೋಸಿಯೇಷನ್‌ ಸಂಸ್ಥೆಯ ನೇತಾರರಾಗಿ ಮುಂಬಯಿ, ಕೋಲ್ಕತ್ತಾ, ಸಿಮ್ಲಾಗಳಲ್ಲಿ ಪ್ರದರ್ಶಿಸಿದ ನಾಟಕಗಳು. ಹರಿಶ್ಚಂದ್ರ, ದಶರಥ, ರಾವಣ, ಮುಂತಾದ ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿದ ಅಭಿನಯ. ೧೯೨೮ ರಲ್ಲಿ ಇಂಗ್ಲೆಂಡಿಗೆ ಹೋಗಿ ರಂಗಭೂಮಿ ಚಟುವಟಿಕೆಗಳ ಅಧ್ಯಯನ. ಬರ್ನಾಡ್‌ ಷಾ ರವರ ಮುಂದೆಯೇ ಶೇಕ್ಸ್‌ಪಿಯರನ ನಾಟಕಗಳನ್ನು ಅಭಿನಯಿಸಿ ಪಡೆದ ಪ್ರಶಂಸೆ. ಸ್ತ್ರೀಪಾತ್ರಗಳನ್ನು ಪುರುಷರೇ ಅಭಿನಯಿಸುತ್ತಿದ್ದ ಕಾಲದಲ್ಲಿ ಸ್ತ್ರೀಯರೇ ಅಭಿನಯಿಸುವಂತೆ ಮಾಡಿದ ಕೀರ್ತಿ. ಬೆಂಗಳೂರಿನಲ್ಲಿ ಮಹಾತ್ಮ ಗಾಂಧೀಜಿಯವರ ಮುಂದೆ ದೀನ ಬಂಧು ಕಬೀರ್ ನಾಟಕವನ್ನು ಪ್ರದರ್ಶಿಸಿ ಪಡೆದ ಮೆಚ್ಚುಗೆ. ದ್ರೌಪದಿ ಮಾನ ಸಂರಕ್ಷಣ, ರೈತ ಬಿಡ್ಡು, ಚಂಡಿಕಾ, ಮುಂತಾದ ಚಲನಚಿತ್ರಗಳಲ್ಲೂ ಅಭಿನಯ. ಆಂಧ್ರನಾಟಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ, ಭಾರತ ಸರ್ಕಾರದಿಂದ ದೊರೆತ ರಾವ್‌ ಬಹದ್ದೂರ್ ಪ್ರಶಸ್ತಿ.   ಇದೇ ದಿನ ಹುಟ್ಟಿದ ಕಲಾವಿದರು: ಮುರಳೀಧರರಾವ್‌ ಕೆ. – ೧೯೨೪ ರುದ್ರಪ್ಪ ಕಲ್ಲಪ್ಪ ಮತ್ತಿಗಟ್ಟೀ – ೧೯೨೪ ಡಾ. ಗೌರಿಕುಪ್ಪುಸ್ವಾಮಿ – ೧೯೩೧ ನಾಗಲಾಂಬಕಮ್ಮಣ್ಣಾ – ೧೯೪೧ ಮುಕುಂದ ಪೈ. ಬಿ – ೧೯೬೯

* * *

Details

Date:
August 2, 2023
Event Category: