ಬಸವರಾಜ ರಾಜಗುರು

Home/Birthday/ಬಸವರಾಜ ರಾಜಗುರು
Loading Events

೨೪..೧೯೨೦ ೨೨..೧೯೯೧ ‘ಸುರ್ ಕಾ ಬಾದಶಾಹ’ ಎಂದೇ ಖ್ಯಾತರಾಗಿದ್ದ ಬಸವರಾಜ ರಾಜ ಗುರುಗಳು ಹುಟ್ಟಿದ್ದು ಕುಂದಗೋಳ ತಾಲ್ಲೂಕಿನ ಎಲಿವಾಳ ಗ್ರಾಮದಲ್ಲಿ. ತಂದೆ ಮಹಾಂತಸ್ವಾಮಿ, ತಾಯಿ ರಾಚವ್ವ. ತಾಯಿಯ ಪ್ರೀತಿಯಿಂದ ವಂಚಿತರಾಗಿ ತಂದೆಯಿಂದಲೇ ಸಂಗೀತ ಪಾಠ ಪ್ರಾರಂಭ, ಜೊತೆಗೆ ಹತ್ತಿದ ನಾಟಕದ ಹುಚ್ಚು. ವಾಮನರಾವ ಮಾಸ್ತರರ ‘ವಿಶ್ವಗುಣಾದರ್ಶ ನಾಟಕಮಂಡಲಿ’ಯಲ್ಲಿ ಬಾಲನಟನಾಗಿ ಗಳಿಸಿದ ಖ್ಯಾತಿ. ನಾಟಕ ಕಂಪನಿ ಬಿಟ್ಟು ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಸಂಸ್ಕೃತಾಭ್ಯಾಸ. ಪಂಚಾಕ್ಷರಿ ಗವಾಯಿಗಳ ಕಣ್ಣಿಗೆ ಬಿದ್ದು ಶಿಷ್ಯನಾಗಿ ಸ್ವೀಕಾರ. ಹನ್ನೊಂದು ವರ್ಷ ಕರ್ನಾಟಕ, ಹಿಂದೂಸ್ತಾನಿ ಸಂಗೀತಗಳೆರಡರಲ್ಲೂ ಸಂಗೀತ ಶಿಕ್ಷಣ. ೧೯೩೬ ರಲ್ಲಿ ಹಂಪೆಯ ವಿಜಯನಗರ ಷಡ್‌ಶತಮಾನೋತ್ಸವವದಲ್ಲಿ ಕೊಟ್ಟ ಪ್ರಥಮ ಸಂಗೀತ ಕಚೇರಿ. ೧೯೩೮ ರಲ್ಲಿ ಮುಂಬಯಿ ಆಕಾಶವಾಣಿಯಲ್ಲಿ ಪ್ರಥಮ ಕಾರ್ಯಕ್ರಮ. ಪರಚಿಂತೆ ನಮಗೆ ಏಕೆ ಅಯ್ಯ, ವಚನದಲ್ಲಿ ನಾಮಾಮೃತವ ತುಂಬಿ ಮುಂತಾದುವುಗಳ ಗಾಯನದಿಂದ ಜನಪ್ರಿಯಗೊಳಿಸಿದ ವಚನಗಳು. ಮುಂಬಯಿಯ ಸವಾಯಿ ಗಂಧರ್ವ, ಲಾಹೋರಿನಲ್ಲಿ ಅಬ್ದುಲ್‌ ವಹೀದ್‌ ಖಾನ್‌, ಕರಾಚಿಯಲ್ಲಿ ರಾಜಗುರು ಲತೀಫ್‌ ಖಾನರಲ್ಲಿ ತಣಿಸಿಕೊಂಡ ಸಂಗೀತ ಜ್ಞಾನ, ವೈವಿಧ್ಯಮಯ ಹಾಡುಗಾರಿಕೆ. ಧ್ರುಪದ್‌, ಧಮಾರ್, ಖ್ಯಾಲ್, ಠುಮರಿ, ಗಝಲ್‌, ವಚನಗಳು, ಕನ್ನಡ ಮತ್ತು ಮರಾಠಿ ರಂಗಗೀತೆಗಳು, ಭಾವಗೀತೆಗಳು, ದಾಸರಪದಗಳು, ಕೀರ್ತನೆಗಳು, ಬಯಲಾಟದ ಹಾಡುಗಳು ಒಂದೇ, ಎರಡೇ … ದೇಶಾದ್ಯಂತ ನಡೆಸಿಕೊಟ್ಟ ಕಾರ್ಯಕ್ರಮಗಳು. ಸಂದ ಪ್ರಶಸ್ತಿ ಗೌರವಗಳು ಹಲವಾರು. ಗಾನ ಕೋಗಿಲೆ, ಸಂಗೀತ ಸುಧಾಕರ, ಗಾನಗಂಧರ್ವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಮುಂಬಯಿಯ ಸೂರ ಸಿಂಗಾರ್, ಸಂಸದ್‌ನ ಸ್ವರವಿಲಾಸ, ಪದ್ಮಭೂಷಣ, ಕರ್ನಾಟಕ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್‌ ಮುಂತಾದ ಪ್ರಶಸ್ತಿ ಗೌರವಗಳು.   ಇದೇ ದಿನ ಹುಟ್ಟಿದ ಕಲಾವಿದರು ಟಿ.ಎಸ್‌. ರತ್ನಮ್ಮ – ೧೯೧೬ ಕೆ.ಜಿ. ಶಾಂತಪ್ಪ – ೧೯೧೬ ಕಮಲ ಪುರಂದರೆ – ೧೯೪೦ ಭರತ್‌ ಕುಮಾರ್ ಪೊಲಿಪು – ೧೯೫೯ ನಟರಾಜ ಹೊನ್ನವಳ್ಳಿ – ೧೯೬೧

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top