
ಬಸವರಾಜ ಹಳಿಜೋಳ
December 13
೧೩-೧೨-೧೯೩೪ ೧೪-೧-೧೯೮೨ ಚಿತ್ರಕಲೆಯ ಎಲ್ಲ ಪ್ರಕಾರಗಳಲ್ಲೂ ಪ್ರಖ್ಯಾತರೆನಿಸಿದ್ದ ಬಸವರಾಜ ಹಳಿಜೋಳರವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ದೇಶನೂರ ಗ್ರಾಮದಲ್ಲಿ. ತಂದೆ ಮಡಿವಾಳಪ್ಪ, ತಾಯಿ ಭಾಗೀರಥಿ. ಶಾಲೆಯಲ್ಲಿ ಸ್ನೇಹಿತರ ಪುಸ್ತಕದ ಮೇಲೆಲ್ಲಾ ಪ್ರಾಣಿ, ಪಕ್ಷಿ, ನಿಸರ್ಗ ದೃಶ್ಯ ರಚಿಸಿ ಸೆಳೆದ ಗಮನ. ಮುಂಬಯಿಯ ಜೆ.ಜೆ. ಕಲಾಶಾಲೆಯಿಂದ ಪಡೆದ ಡಿಪ್ಲೊಮ. ಡಾ. ಮಿಣಜಿಗಿಯವರ ಕಲಾಮಂದಿರದಲ್ಲಿ (ಹುಬ್ಬಳ್ಳಿ) ಉಪನ್ಯಾಸಕರಾಗಿ ಉದ್ಯೋಗ ಪ್ರಾರಂಭ. ಮಿಣಜಿಗಿಯವರ ನಿವೃತ್ತಿಯ ನಂತರ ಪ್ರಾಚಾರ್ಯರಾಗಿ ವಹಿಸಿಕೊಂಡ ಜವಾಬ್ದಾರಿ ಇದನ್ನು ವಿಜಯ ಮಹಾಂತೇಶ ಮಹಾವಿದ್ಯಾಲಯವಾಗಿ ಮಾರ್ಪಡಿಸಲು ಪಟ್ಟ ಶ್ರಮ. ಒಂದು ಸಾವಿರದ ಐನೂರಕ್ಕೂ ಹೆಚ್ಚು ಚಿತ್ರಗಳ ರಚನೆ. ಹಂಪಿ, ಬಾದಾಮಿ, ಬಿಜಾಪುರ, ಲಕ್ಕುಂಡಿ ಮುಂತಾದ ಐತಿಹಾಸಿಕ ಸ್ಥಳಗಳ ಜಲವರ್ಣ ಕೃತಿ ರಚನೆ. ಭಾವಚಿತ್ರ ರಚನೆಯಲ್ಲೂ ಸಿದ್ಧಹಸ್ತರೆನಿಸಿ ವಿ.ಕೃ. ಗೋಕಾಕ್, ಅ.ನ. ಸುಬ್ಬರಾವ್, ಡಾ. ಎಂ.ವಿ. ಮಿಣಜಿಗಿ, ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು, ಡಿ.ವಿ. ಹಾಲಭಾವಿ, ಡಾ. ಡಿ.ಎಸ್. ಕರ್ಕಿ, ಎಸ್.ಆರ್. ಕಂಠಿ, ಬೀಚಿ ಮುಂತಾದ ಗಣ್ಯರ ತೈಲಚಿತ್ರಗಳ ರಚನೆ. ಕಾರವಾರದ ೪೫ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಡೆಗೋಡ್ಲು ಶಂಕರಭಟ್ಟರಿಂದ, ೫೫ನೇ ಸಾಹಿತ್ಯ ಸಮ್ಮೇಳನದಲ್ಲಿ ಗೊರೂರಿರಿಂದ, ಹುಬ್ಬಳ್ಳಿಯ ಕಲಾಮಂದಿರದ ವತಿಯಿಂದ ಇಂದಿರಾ ಗಾಜಿನ ಮನೆಯಲ್ಲಿ, ಬೆಂಗಳೂರಿನ ವೆಂಕಟಪ್ಪ ಚಿತ್ರಕಲಾ ಶಾಲೆಯಲ್ಲಿ ದೊರೆತ ಪ್ರಶಸ್ತಿ, ಪುರಸ್ಕಾರಗಳು, ಕರ್ನಾಟಕ ಲಲಿತಕಲಾ ಅಕಾಡಮಿ ಮರಣೋತ್ತರವಾಗಿ ೧೯೯೧ರಲ್ಲಿ ನೀಡಿದ ಪ್ರಶಸ್ತಿ. ಇದೇ ದಿನ ಹುಟ್ಟಿದ ಕಲಾವಿದರು : ಪ್ರಕಾಶ್ ಎ.ಎಂ. – ೧೯೬೦
* * *