ಬಸವಲಿಂಗಶಾಸ್ತ್ರಿ ಬಾಳೀಮಠ

Home/Birthday/ಬಸವಲಿಂಗಶಾಸ್ತ್ರಿ ಬಾಳೀಮಠ
Loading Events
This event has passed.

೧೭.೦೪.೧೯೧೭ ಹಿರಿಯ ರಂಗ ಕಲಾವಿದರಾದ ಬ. ಶಿ. ಬಾಳೀಮಠ ರವರು ಹುಟ್ಟಿದ್ದು ಹಾವೇರಿ ತಾಲ್ಲೂಕಿನ ದೇವಗಿರಿಯಲ್ಲಿ. ತಂದೆ ಪುಟ್ಟಯ್ಯ ಚ.ಹಿರೇಮಠ. ತಾಯಿ ಪಾರ್ವತಮ್ಮ. ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ನಾಟಕಗಳತ್ತ ಒಲವು. ಶಾಲೆಯ ವಿಶೇಷ ಕಾರ್ಯಕ್ರಮಗಳಿಗೆಲ್ಲಾ ಚಿಕ್ಕ ಚಿಕ್ಕ ಏಕಾಂಕ ನಾಟಕಗಳನ್ನು ಬರೆದು ರಂಗದ ಮೇಲೆ ತಂದು ನಟರಾಗಿಯೂ ಗಳಿಸಿದ ಯಶಸ್ಸು. ’ದಾರಿ ದೀಪ’ ಎಂಬ ಕೈ ಬರಹದ ಪತ್ರಿಕೆಯ ಸಂಪಾದಕರಾಗಿ, ಹಲವಾರು ಸಹ ವಿದ್ಯಾರ್ಥಿಗಳಿಂದ ಬರೆಸಿ, ಬರೆದು ಪ್ರಕಟಿಸಿದ ಸಾಹಸಿ ವಿದ್ಯಾರ್ಥಿ. ಶಾಲೆಯ ಪಾಠಕ್ಕಿಂತ ಪುರಾಣ ಪ್ರವಚನಗಳನ್ನು ಕೇಳುವ, ನಾಟಕ ದೊಡ್ಡಾಟಗಳನ್ನು ನೋಡುವ ಚಟ. ಸದಾ ಪುಸ್ತಕಗಳನ್ನು ಓದುವ ಗೀಳು, ಯಾವುದೇ ಪುಸ್ತಕ ಸಿಕ್ಕರೂ ಓದಿ ಮುಗಿಸುವವರೆವಿಗೂ ತೃಪ್ತಿ ಸಿಗದು. ಗ್ರಂಥಗಳೇ ಗೆಳೆಯರಾಗಿ ಮನೆ ತುಂಬಾ ತುಂಬಿದ್ದು ಪುಸ್ತಕಗಳಿಂದ. ವಿಶೇಷ ಸಂದರ್ಭಕ್ಕಾಗಿ ಬರೆದ ಎರಡು ಏಕಾಂಕ ನಾಟಕಗಳು. ’ದೀಪಾವಳಿ’ ಮತ್ತು ’ಲಕ್ಚರಿನ ಹುಚ್ಚು’. ಬೆಂಗಳೂರಿನಿಂದ ಹೊರಡುತ್ತಿದ್ದ ಸಮಾಜ ಎಂಬ ಮಾಸ ಪತ್ರಿಕೆಯಲ್ಲಿ ಸಂಪಾದಕರಾಗಿದ್ದ ಎಸ್.ಎನ್. ಲೋಕನಾಥ ರಿಂದ ಎರಡು ನಾಟಕಗಳ ಪ್ರಕಟಣೆ. ಮೊದಲ ದೀರ್ಘ ನಾಟಕ ’ಸಮಾಜ ಸಮಾಧಿ’ ಹವ್ಯಾಸ ಕಲಾವಿದರಿಂದ ಅಭಿನಯಿಸಲ್ಪಟ್ಟು ಜನ ಮೆಚ್ಚುಗೆ ಪಡೆದ ನಾಟಕ. ಹಿಂದೂ ಮುಸ್ಲಿಮ್ ರಹಸ್ಯ ಎರಡನೆಯ ನಾಟಕ. ಶಿಕ್ಷಕ ವರ್ಗದವರಿಂದ ಅಭಿನಯಿಸಲ್ಪಟ್ಟಾಗ ಉದ್ಘಾಟನೆಗಾಗಿ ಹಾವೇರಿ ನ್ಯಾಯಾಧೀಶರು ಆಗಮಿಸಿ ಪ್ರಶಂಸಿಸಿದ್ದಲ್ಲದೆ ನೀಡಿದ ‘ನಾಟಕ ಧುರೀಣ’ ಪ್ರಶಸ್ತಿಯ ಜೊತೆಗೆ ಬೆಳ್ಳಿಯ ಪದಕ. ರೇಣುಕಾ ಮಹಾತ್ಮೆ ಇವರಿಗೆ ಪ್ರಸಿದ್ಧಿ ತಂದ ನಾಟಕ. ೨೬ ಬಾರಿ ಮುದ್ರಣಗೊಂಡು ಉತ್ತರ ಕರ್ನಾಟಕದಲ್ಲಿ ಮನೆಮಾತಾದ ನಾಟಕ. ಟಿಪ್ಪುಸುಲ್ತಾನ, ಕುರುಕ್ಷೇತ್ರ, ರಕ್ತರಾತ್ರಿ, ಹೇಮರೆಡ್ಡಿ ಮಲ್ಲಮ್ಮ, ಚಿತ್ರಾಂಗದ, ಬಸವೇಶ್ವರ, ದೇವದಾಸಿ ಮೊದಲಾದ ನಾಟಕಗಳಲ್ಲಿ ಮುಖ್ಯನಟ. ಧಾರವಾಡ, ಹುಬ್ಬಳ್ಳಿ, ದಾವಣಗೆರೆ, ಹರಿಹರ, ಚಿತ್ರದುರ್ಗ ಮುಂತಾದೆಡೆ ಕಂಡ ಪ್ರದರ್ಶನಗಳು.  ನರೇಗಲ್ಲಿನ ಷಣ್ಮುಖ ವಿಜಯ ಸಾಟ್ಯ ಸಂಘ, ಹಲಗೇರಿಯ ಶ್ರೀ ಹಾಲಸಿದ್ದೇಶ್ವರ ನಾಟ್ಯ ಸಂಘ, ದೊಡ್ಡವಾಡದ ಕಲಾವಿಕಾಸ ನಾಟ್ಯ ಸಂಘ, ಶ್ರೀಮಲ್ಲಿಕಾರ್ಜುನ ನಾಟ್ಯ ಸಂಘ, ಮೊದಲಾದ ವೃತ್ತಿ ನಾಟಕ ಸಂಸ್ಥೆಗಳಲ್ಲಿ ನಾಟಕ ನಿರ್ದೇಶಕ. ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಬಿಟ್ಟರೆ ಮತ್ತಾವ ಪ್ರಶಸ್ತಿಯೂ ಇವರತ್ತ ಮುಖ ಮಾಡಿರದಿದ್ದರೂ, ಶಿಷ್ಯರಿಗೆಲ್ಲಾ ಗುಬ್ಬಿ ವೀರಣ್ಣ ಪ್ರಶಸ್ತಿ ದೊರೆತಾಗ ಸಂತಸವಾದರೂ ತಮಗೆ ದೊರೆಯದ ನೋವು ಎದೆಯಾಳದಲ್ಲಿ ತುಂಬಿಕೊಂಡಿದ್ದಾರೆ.   ಇದೇದಿನಹುಟ್ಟಿದಕಲಾವಿದರು: ಅನಂತರಾಮಯ್ಯ ಬಿ.ಆರ್‌. – ೧೯೨೨ ರಾಧಾಕೃಷ್ಣ.ಟಿ. – ೧೯೫೪ ಪ್ರವೀಣ್-ವಿ. – ೧೯೬೨

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top