Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಬಿ.ಎಸ್‌. ಸಣ್ಣಯ್ಯ – ಕಣಜ

ಬಿ.ಎಸ್‌. ಸಣ್ಣಯ್ಯ

Home/Birthday/ಬಿ.ಎಸ್‌. ಸಣ್ಣಯ್ಯ
Loading Events

೧೮..೧೯೨೬ ಸಂಶೋಧನೆ ಮತ್ತು ಹಸ್ತಪ್ರತಿ ಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಪಡೆದಿರುವ ಸಣ್ಣಯ್ಯನವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ ತಾಲ್ಲೂಕಿನ ಭೋಗನಹಳ್ಳಿಯಲ್ಲಿ. ತಂದೆ ಸಣ್ಣೇಗೌಡ, ತಾಯಿ ಬೋರಮ್ಮ. ಪ್ರಾರಂಭಿಕ ಶಿಕ್ಷಣ ರಾವಂದೂರಿನಲ್ಲಿ. ಪ್ರೌಢಶಾಲಾ ಶಿಕ್ಷಣ ಕೃಷ್ಣರಾಜನಗರ. ಮೈಸೂರು ವಿ.ವಿ. ದಿಂದ ಬಿ.ಎ. ಆನರ್ಸ, ಎಂ.ಎ., ಬಿ.ಲಿಬ್ ಪದವಿಗಳ ಜೊತೆಗೆ. ಡಿಪ್ಲೊಮ ಇನ್‌ ಆರ್ಕೈವ್ಸ್‌. ಮೈಸೂರು ವಿ.ವಿ.ದ ಪ್ರಾಚ್ಯ ಸಂಶೋಧನಾಲಯದಲ್ಲಿ ತಮ್ಮ ವೃತ್ತಿಯನ್ನಾರಂಭಿಸಿದ್ದು ೧೯೫೬ ರಲ್ಲಿ. ನಂತರ ಕನ್ನಡ ಅಧ್ಯಯನ ಸಂಸ್ಥೆಯ ಗ್ರಂಥ ಸಂಪಾದನಾ ವಿಭಾಗದ ನಿರ್ದೇಶಕರಾಗಿ ದುಡಿದು ನಿವೃತ್ತರು. ನಿವೃತ್ತಿಯ ನಂತರವೂ ಹಲವಾರು ಯೋಜನೆಗಳಲ್ಲಿ ತೊಡಗಿಸಿ ಕೊಂಡಿದ್ದು ಶ್ರವಣಬೆಳಗೊಳದ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯಲ್ಲಿ ಮುಖ್ಯಸ್ಥರಾಗಿ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಯ ‘ಗೋಮ್ಮಟಸಾರ’ ಕೃತಿಗೆ ಕನ್ನಡ ವ್ಯಾಖ್ಯಾನ ಬರೆದಿರುವ ಕೇಶವಣ್ಣನ ‘ಗೊಮ್ಮಟ ಸಾರ’ ಕೃತಿಯ ಪರಿಷ್ಕರಣೆಯಂತಹ ಬೃಹತ್‌ ಯೋಜನೆಯನ್ನೂ ಕಾರ್ಯರೂಪಕ್ಕೆ ತರುವಲ್ಲಿ ಹೊತ್ತ ಜವಾಬ್ದಾರಿ. ಗ್ರಾಮೀಣ ಪರಿಸರದಿಂದ ಬೆಳೆದು ಬಂದ ಇವರ ಸಾತ್ವಿಕ ಜೀವನಕ್ಕೆ ಮಾರ್ಗದರ್ಶಕ ಮಹನೀಯರಾಗಿದ್ದವರು ಪರಮಹಂಸ, ಸ್ವಾಮಿ ವಿವೇಕಾನಂದ, ಗಾಂಧೀಜಿ ಮುಂತಾದವರುಗಳ ಪ್ರಭಾವಕ್ಕೆ ಒಳಗಾಗಿ ತಮ್ಮ ವ್ಯಕ್ತಿತ್ವವನ್ನೂ ರೂಪಿಸಿಕೊಂಡವರು. ಕುವೆಂಪು, ಡಿ.ಎಲ್‌.ಎನ್‌., ಎಸ್‌.ವಿ. ಪರಮೇಶ್ವರಭಟ್ಟರು, ತ.ಸು.ಶಾಮರಾಯರಂತಹ ಘನ ವಿದ್ವಾಂಸರ ಶಿಷ್ಯರಾಗಿದ್ದರ ಜೊತೆಗೆ  ಡಿ.ಎ‌ಲ್‌.ಎನ್‌ ರವರು ಬೋಧಿಸುತ್ತಿದ್ದ ಪ್ರಾಚೀನ ಕಾವ್ಯಗಳ ಪಾಠಕ್ಕೆ ಮನಸೋತು ಹಸ್ತಪ್ರತಿ ಶಾಸ್ತ್ರದ ಕಡೆ ಅಧ್ಯಯನವನ್ನಾರಂಭಿಸಿದರು. ನಾಡಿನಾದ್ಯಂತ ಸಂಚರಿಸಿ ಹಸ್ತಪ್ರತಿ ಸಂಗ್ರಹಣೆಯಲ್ಲಿ ತೊಡಗಿದ್ದು ಹಲವಾರು ಹಸ್ತಪ್ರತಿಗಳ ಮೈಕ್ರೊ ಫಿಲಂ ತಯಾರಿಸಿದ್ದಲ್ಲದೆ ಚಂಪೂ, ವಚನ, ಷಟ್ಪದಿ, ಸಾಂಗತ್ಯ ಮತ್ತು ಗದ್ಯ ಸಾಹಿತ್ಯಗಳನ್ನೊಳಗೊಂಡಂತೆ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದಾರೆ. ನೇಮಿನಾಥಪುರಾಣ, ಹರಿವಂಶಾಭ್ಯುದಯಂ ಮೋಹನತರಂಗಿಣಿ, ರಾಜಾವಳಿ ಕಥಾಸಾರ, ವರ್ಧಮಾನ ಪುರಾಣ, ತೊರವೆರಾಮಾಯಣ, ಕಾವ್ಯಾವಲೋಕನ, ಸಾಹಸಭೀಮ ವಿಜಯ, ಅಜಿತ ಪುರಾಣ, ಖಗೇಂದ್ರಮಣಿದರ್ಪಣಂ ಮುಂತಾದವುಗಳನ್ನೂ ಸಂಪಾದಿಸಿದ್ದಾರೆ. ಆಗಾಗ್ಗೆ ಪತ್ರಿಕೆಗಳಿಗೆ ಸಂಶೋಧನಾ ಲೇಖನಗಳನ್ನೂ ಬರೆದಿದ್ದು, ಕನ್ನಡ ಹಸ್ತಪ್ರತಿ ವರ್ಣನಾತ್ಮಕ ಸೂಚಿಯನ್ನು ಸಹೋದ್ಯೋಗಿಗಳೊಡನೆ ಸೇರಿ ೧೦ ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ‘ಗ್ರಂಥ ಸಂರಕ್ಷಣೆ’, ‘ಹಸ್ತಪ್ರತಿಶಾಸ್ತ್ರ ಪರಿಚಯ’ ಗ್ರಂಥಗಳ ಜೊತೆಗೆ ಇವರು ಸಂಪಾದಿಸಿರುವ ಅತಿ ಮಹತ್ವದ ಕೃತಿ ಎಂದರೆ ‘ಪ್ರಾಚೀನ ಗ್ರಂಥ ಸಂಪಾದನೆ’, ಕನ್ನಡ ಸಾಹಿತ್ಯಕ್ಕೊಂದು ವಿಶಿಷ್ಟ ಕೊಡುಗೆ. ಇವರ ಬಹುಮುಖ ಪ್ರತಿಭೆಯನ್ನೂ ಗುರುತಿಸಿ ಮೈಸೂರು ವಿ.ವಿ.ದ ತೀ.ನಂ.ಶ್ರೀಗಳ ಬಹುಮಾನ, ದೇವರಾಜ ಬಹದ್ದೂರ್ ಬಹುಮಾನ, ಶ್ರೀದೇವೇಂದ್ರ ಕೀರ್ತಿಭಟ್ಟಾರಕ ಸ್ವಾಮೀಜಿಯವರ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಐದು ಬಾರಿ ಬಹುಮಾನ (೧೯೬೧, ೭೪, ೮೫, ೮೮, ೯೨), ಶ್ರವಣಬೆಳಗೊಳದ ಶ್ರೀಗೋಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ (೧೯೯೮), ಕನ್ನಡ ಸಾಹಿತ್ಯ ಪರಿಷತ್ತಿನ ಚಾವುಂಡರಾಯ ಪ್ರಶಸ್ತಿ (೧೯೯೯), ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ (೨೦೦೫) ಮತ್ತು ಅಖಿಲ ಕರ್ನಾಟಕ ನಾಲ್ಕನೆಯ ಹಸ್ತಪ್ರತಿ ಶಾಸ್ತ್ರದ ಸಮ್ಮೇಳನಾಧ್ಯಕ್ಷರಾಗಿ ಸಂದ ಗೌರವ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top