Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಬಿ.ಎಸ್.ಎಸ್. ಕೌಶಿಕ್ – ಕಣಜ

ಬಿ.ಎಸ್.ಎಸ್. ಕೌಶಿಕ್

Home/Birthday/ಬಿ.ಎಸ್.ಎಸ್. ಕೌಶಿಕ್
Loading Events

೨೫.೦೪.೧೯೧೬ ಗಮಕ ಗಂಧರ್ವರೆನಿಸಿದ್ದ ಬಿ.ಎಸ್.ಎಸ್. ಕೌಶಿಕ್ ರವರು ಹುಟ್ಟಿದ್ದು ಕೃಷ್ಣರಾಜ ಪೇಟೆ ತಾಲ್ಲೂಕು ಹೇಮಗಿರಿ ಕುಪ್ಪಹಳ್ಳಿಯಲ್ಲಿ. ತಂದೆ ಸುಬ್ಬಯ್ಯ, ತಾಯಿ ಸುಬ್ಬಮ್ಮ, ತಾಯಿಗೆ ಅಕ್ಷರ ಜ್ಞಾನವಿಲ್ಲವಿದ್ದರೂ ಶ್ರೀನಿವಾಸ ಕಲ್ಯಾಣ, ರಾಮಾಯಣ, ಪ್ರಹ್ಲಾದ ಚರಿತ್ರೆಯಂತಹ ದೊಡ್ಡ ದೊಡ್ಡ ಹಾಡುಗಳ ಸುಶ್ರಾವ್ಯ ಹಾಡುಗಾರ್ತಿ. ಸಾಮಾನ್ಯ ಶಿಕ್ಷಣ ಪಡೆದದ್ದು ಮೈಸೂರಿನಲ್ಲಿ. ಉದ್ಯೋಗಕ್ಕೆ ಸೇರಿದ್ದು ಬೆಳಗೊಳದ ಎಂ.ಸಿ.ಎಂ. ಕಾರ್ಖಾನೆಯಲ್ಲಿ ಕೆಲಕಾಲ. ನಂತರ ಸೇರಿದ್ದು ಶಾರದಾ ವಿಲಾಸ ಕಾಲೇಜಿನ ಗ್ರಂಥಾಲಯದಲ್ಲಿ ಗ್ರಂಥ ಪಾಲಕರಾಗಿ. ರೂಢಿಸಿಕೊಂಡ ಹಾಡುಗಾರಿಕೆ. ರಾಮೋತ್ಸವ, ಗಣೇಶೋತ್ಸವ ಸಂದರ್ಭಗಳಲ್ಲಿ ಭಜನೆ ಕಾರ್ಯಕ್ರಮ. ಕೆಲಕಾಲ ಖ್ಯಾತನಟರಾಗಿದ್ದ ಡಿಕ್ಕಿ ಮಾಧವರಾವ್, ಸಿ.ಎಸ್.ಅಶ್ವತ್ಥ್‌, ಪಂಢರೀಬಾಯಿ, ಹುಣಸೂರು ಕೃಷ್ಣಮೂರ್ತಿ ಇವರುಗಳೊಡನೆ ಆದರ್ಶ ನಾಟಕ ಮಂಡಲಿ ಸೇರಿ ಚಲನಚಿತ್ರ, ನಾಟಕಗಳಲ್ಲಿ ಅಭಿನಯ. ಮೈಸೂರು ದಸರಾ ವಸ್ತುಪ್ರದರ್ಶನ ಸಮಿತಿಯವರು ಏರ್ಪಡಿಸುತ್ತಿದ್ದ ಭಾವಗೀತೆ, ದೇವರನಾಮ, ಗಮಕ ಗಾಯನ ಸ್ಪರ್ಧೆಯಲ್ಲಿ ಪಡೆದ ಬಹುಮಾನ. ಗಮಕ ಭಗೀರತರೆನಿಸಿದ್ದ ಕೃಷ್ಣಗಿರಿ ಕೃಷ್ಣರಾಯರ ಬಳಿ ಗಮಕ ವಾಚನ ಶಿಕ್ಷಣ. ಗಮಕ ವ್ಯಾಖ್ಯಾನ ಕಾರರೆನಿಸಿದ್ದ ವೆಂಕಟ ಸುಬ್ಬಯ್ಯರೊಡನೆ ಭಾರತ ವಾಚನ ಪ್ರಾರಂಭ. ನಾರಣಪ್ಪನ ಭಾರತವನ್ನು ಆಧರಿಸಿ ಕೃಷ್ಣಸಾರಥ್ಯ, ಕೃಷ್ಣ ಸಂಧಾನ, ಕುಂತಿಕರ್ಣ, ವಿಶ್ವೇಶ್ವರ ಸಾಕ್ಷಾತ್ಕಾರ, ಭಕ್ತಸುಧನ್ವ ಮುಂತಾದ ಗಮಕ ರೂಪಕ ಪಂಚಕ ಪ್ರಕಟಣೆ. ಮಹಾರಾಜ ಜಯಚಾಮರಾಜೇಂದ್ರ ಒಡೆಯರ ಪತ್ನಿ ತ್ರಿಪುರ ಸುಂದರಮ್ಮಣ್ಣಿ ಸಮ್ಮುಖದಲ್ಲಿ ನಡೆಸಿಕೊಟ್ಟ ಭಾರತ ವಾಚನ. ಕೆ.ವಿ. ಪುಟ್ಟಪ್ಪನವರ ಬಳಿ ರಾಮಾಯಣ ದರ್ಶನಂ ವಾಚನಗಳು ಸೇರಿ ಸುಮಾರು ೧೫೦೦೦ ಕ್ಕೂ ಹೆಚ್ಚು ಗಮಕ ವಾಚನ ಕಾರ್ಯಕ್ರಮಗಳು. ರಾಜ್ಯದ ಹೊರಗೆ ಜಮಷಡ್ ಪುರ, ಕೋಲ್ಕತ್ತಾ, ಕಾಶಿ, ಮುಂಬಯಿ ಯಲ್ಲೂ ಕಾರ್ಯಕ್ರಮಗಳು. ೧೯೯೯ ರಲ್ಲಿ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ‍್ಪಡಿಸಿದ ಜಿಲ್ಲಾ ಕಲಾವಿದರ ಸನ್ಮಾನದಲ್ಲಿ ತಂದೆ, ಮಗಳು ವಸಂತ ಲಕ್ಷ್ಮಿ ಇಬ್ಬರಿಗೂ ಒಟ್ಟಿಗೆ ಸನ್ಮಾನ. ೧೯೭೬ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಬೆಂಗಳೂರಿನಲ್ಲಿ ನಡೆದ ೨ನೇ ಕರ್ನಾಟಕ ಗಮಕ ಸಮ್ಮೇಳನದ ಅಧ್ಯಕ್ಷತೆ – ಗಮಕ ರತ್ನಾಕರ ಪ್ರಶಸ್ತಿ, ಆಸೂರಿ ರಾಮಸ್ವಾಮಿ ಅಯ್ಯಂಗಾರ್ಯರಿಂದ ಗಮಕ ಕವಿತಾ ವನಜ ಭಾಸ್ಕರ, ಮೈಸೂರಿನ ರೇಣುಕೇಶ್ವರ ಸನ್ನಿಧಿಯಲ್ಲಿ ಗಮಕ ಕೋಕಿಲ ಬಿರುದು ಮುಂತಾದುವು.   ಇದೇದಿನಹುಟ್ಟಿದಕಲಾವಿದರು: ಎಂ.ಆರ್‌.ದೊರೆಸ್ವಾಮಿ – ೧೯೨೨ ಎಸ್.ರಾಘವೇಂದ್ರರಾವ್ ಕದಿರೆ – ೧೯೨೪ ಅಂಬಳೆ ಸುಬ್ಬರಾವ್ – ೧೯೨೬ ರಮೇಶ ಕುಲಕರ್ಣಿ – ೧೯೭೩.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top