Loading Events

« All Events

  • This event has passed.

ಬಿ.ಎಸ್. ಕೇಶವರಾವ್

December 15, 2023

೧೫-೧೨-೧೯೩೫ ನಟ, ನಾಟಕಕಾರ, ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಾಧ್ಯಾಪಕ ಕೇಶವರಾವ್‌ರವರು ಹುಟ್ಟಿದ್ದು ಮೈಸೂರು. ತಂದೆ ಬಿ.ಕೆ. ಸುಬ್ಬರಾವ್, ತಾಯಿ ನಾಗಲಕ್ಷ್ಮಮ್ಮ. ಶಿಕ್ಷಣ ಮೈಸೂರಿನಲ್ಲೆ. ಸೇಂಟ್ ಫಿಲೋಮಿನ ಕಾಲೇಜಿನಿಂದ ಇಂಟರ್ ಮೀಡಿಯೆಟ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್‌ನಿಂದ ಡಿಪ್ಲೊಮ, ಮದರಾಸಿನ ಟೆಕ್ನಿಕಲ್ ಟೀಚಿಂಗ್ ಇನ್‌ಸ್ಟಿಟ್ಯೂಟಿನಿಂದ ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಮೇಲ್ವಿಚಾರಕರಾಗಿ. ನಂತರ ಕಡಕ್‌ವಾಸ್ಲಾ, ಪೂನ, ಧೂಂಡ್‌ನಲ್ಲಿ ಕೆಲಕಾಲ. ನಂತರ ಆಯ್ದುಕೊಂಡದ್ದು ಶಿಕ್ಷಣ ಇಲಾಖೆಯಲ್ಲಿ ಅಧ್ಯಾಪಕರ ವೃತ್ತಿ. ಚಿಂತಾಮಣಿ, ತುಮಕೂರು, ಹಾಸನ, ಕೆ.ಆರ್. ಪೇಟೆ, ಮೈಸೂರು, ಬೆಂಗಳೂರು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ. ಎಳವೆಯಿಂದಲೇ ಬೆಳೆದು ಬಂದ ಸಾಂಸ್ಕೃತಿಕ ಕಾರ‍್ಯಕ್ರಮಗಳತ್ತ ಒಲವು. ರಂಗ ಕಲಾವಿದರಾಗಿ, ಆಕಾಶವಾಣಿ ಕಲಾವಿದರಾಗಿ ಹಲವಾರು ನಾಟಕಗಳ ನಿರ್ದೇಶನ, ನಟನೆ. ೧೯೫೫ರಲ್ಲಿ ಶಿವರಾಮಕಾರಂತರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರಂತರ ನಾಟಕ ‘ಗರ್ಭಗುಡಿ’ಯ ನಿರ್ದೇಶನ-ಕಾರಂತರಿಂದ ಪ್ರಶಂಸೆ. ೧೯೫೭ರಲ್ಲಿ ತ್ರಿ-ರಂಗಭೂಮಿ ರಚಿಸಿ ಪರ್ವತ ವಾಣಿಯವರ ಸುಂದೋಪಸುಂದ್ರು ಯಶಸ್ವಿ ಪ್ರಯೋಗ. ೧೯೫೮ರಲ್ಲಿ ಬೇಂದ್ರೆಯವರ ಸಮ್ಮುಖದಲ್ಲಿ ನಾಟಕ ಪ್ರಯೋಗ. ಅ.ನ.ಕೃ.ರವರ ಕಿತ್ತೂರರಾಣಿ ಚೆನ್ನಮ್ಮ, ಕಣ್ಣೀರು ; ತರಾಸುರವರ ದುರ್ಗಾಸ್ತಮಾನ ಕಾದಂಬರಿಗಳ ರಂಗರೂಪ. ಪ್ರಖ್ಯಾತ ಪತ್ರಿಕೆಗಳಿಗೆ ಬರೆದ ಕಾಲಂ. ‘ಹಂಸ’ ಕಾವ್ಯನಾಮದಿಂದ ಕನ್ನಡಪ್ರಭ ಪತ್ರಿಕೆಯಲ್ಲಿ ನಿರ್ವಹಿಸಿದ ವಿಮರ್ಶೆ ಅಂಕಣ. ಕರ್ಮವೀರ ಪತ್ರಿಕೆಯಲ್ಲಿ ರಂಗಾಂತರಂಗ ಅಂಕಣ. ಹಲವಾರು ದೂರದರ್ಶನ ವಾಹಿನಿಗಳಲ್ಲಿ ನಟನೆ. ರಸಿಕರಂಜನಿ ಸಂಸ್ಥೆಯ ಚುಕ್ಕಾಣಿ. ರಚಿಸಿದ ಕೃತಿಗಳು. ಕನ್ನಡದ ಕೋಗಿಲೆ ಕಾಳಿಂಗರಾಯರು, ಅಪೂರ್ವರೊಡನೆ, ಕನ್ನಡಕ್ಕೊಬ್ಬನೇ ಕೈಲಾಸಂ, ಕನ್ನಡದ ಕಟ್ಟಾಳು ಅ.ನ.ಕೃ, ನಾ ಕಂಡ ಪುಂಡ ಪಾಂಡವರು, ಸೂತ್ರಧಾರ ಬಿ.ವಿ. ಕಾರಂತ, ಮರೆಯಲಾಗದವರು, ಕೈಲಾಸಂ ಜೋಕ್ಸು-ಸಾಂಗ್ಸು, ಬೀಚಿ-ಬುಲೆಟ್ಸು-ಬಾಂಬ್ಸು-ಭಗವದ್ಗೀತೆ. ಕಂದರ ಕಾರಂಜಿ, ಪ್ರಸಂಗ ಪ್ರವಾಹ, ಪ್ರಸಂಗ ತರಂಗ, ಕೈಲಾಸಂ ಸಮಗ್ರ ಕೃತಿಗಳು (ಸಂಪಾದಿತ). ಹಲವಾರು ಪ್ರಶಸ್ತಿಗಳು-ಕೈಲಾಸಂ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕುವೆಂಪು ಸಾಹಿತ್ಯಶ್ರೀ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಚಂಪಾಬಾಯಿ ದೇಶಪಾಂಡೆ – ೧೯೦೨ ಕೆ.ಎಚ್. ಶ್ರೀನಿವಾಸ್ – ೧೯೩೮

Details

Date:
December 15, 2023
Event Category: