Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಬಿ.ಎಸ್. ಚಂದ್ರಕಲಾ – ಕಣಜ

ಬಿ.ಎಸ್. ಚಂದ್ರಕಲಾ

Home/Birthday/ಬಿ.ಎಸ್. ಚಂದ್ರಕಲಾ
Loading Events

೨೧.೩.೧೯೩೧ ೪.೩.೨೦೦೫ ಸಾಹಿತಿ, ಸಂಗೀತರತ್ನ ಬಿರುದಾಂಕಿತೆ ಚಂದ್ರಕಲಾರವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಜಿ.ಆರ್. ಸಿದ್ದಪ್ಪ, ತಾಯಿ ಭದ್ರಮ್ಮ. ಪ್ರಾಥಮಿಕ ವಿದ್ಯಾಭ್ಯಾಸದಿಂದ ಹಿಡಿದು ಇಂಟರ್ ಮೀಡಿಯೇಟ್‌ವರೆಗೆ ಓದಿದ್ದು ಬೆಂಗಳೂರಿನಲ್ಲಿ . ಬಾಲ್ಯದಿಂದಲೇ ಹತ್ತಿದ ಸಂಗೀತದ ಗೀಳು, ಬಾಲಕಿಗೆ ಶ್ರೀಮತಿ ಪದ್ಮಾವತಮ್ಮನವರಲ್ಲಿ ಸಂಗೀತ ಪಾಠ. ಶಂಭುಲಿಂಗಪ್ಪನವರಿಂದ ರೇಣುಕ ಗೀತೆ ಪಾಠ. ಏಳನೇ ವರ್ಷದಲ್ಲೇ ರೇಣುಕ ಗೀತೆಗಳ ಕಛೇರಿ ನಡೆಸಿದ್ದರು. ಹಾರ‍್ಮೋನಿಯಂ ನುಡಿಸಿ ಸಂಗೀತ ಕಲಿಯುತ್ತಿದ್ದವಳಿಗೆ ಸಂಬಂಯೊಬ್ಬರು ಪಿಟೀಲು ಕೈಲಿ ಹಾಕಿದರು. ಹತ್ತೊಂಬತ್ತನೇ ವಯಸ್ಸಿಗೆ ವೈಧವ್ಯ. ದುಃಖ ಮರೆಯಲು ಮೊರೆ ಹೋದದ್ದು  ಸಂಗೀತಕ್ಕೆ. ಸಂಗೀತದ ಗುರು ಆರ್.ಆರ್. ಕೇಶವ ಮೂರ್ತಿಯವರ ಬಳಿ ಪಿಟೀಲು ಕಲಿಕೆ. ಸಂಗೀತದ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ೨ನೇ ರ‍್ಯಾಂಕಿನಿಂದ ವಿಜೇತಳಾಗಿ ಪಡೆದ ಚಿನ್ನದ ಪದಕ. ೧೯೬೧ರಲ್ಲಿ ಬೆಂಗಳೂರು ನಗರಸಭಾ ಪ್ರೌಢಶಾಲೆಯಲ್ಲಿ  ಸಂಗೀತ ಶಿಕ್ಷಕಿ ಹುದ್ದೆ. ಶಾಲೆಯಲ್ಲಿ ಸಂಗೀತ ತರಗತಿ ನಿಂತು ಜನಪದ ಗೀತೆಗಳ ಬೋಧನೆ. ಜಾನಪದ ಗೀತೆಗಳಿಗೆ ಸ್ವರಪ್ರಸ್ತಾರ ಹಾಕಿ ‘ಜಾನಪದ ಸ್ವರ ಸಂಪದ’ ಕೃತಿ ಪ್ರಕಟಣೆ. ಕಬ್ಬಿಣದಕಡಲೆಯಂತಿದ್ದ ನಿಜಗುಣರ ೪೨ ಪದಗಳಿಗೆ ಅರ್ಥ ಬರೆದು ರಾಗ ಸಂಯೋಜಿಸಿ, ಸ್ವರಪ್ರಸ್ತಾರ ಹಾಕಿ ರಚಿಸಿದ ಕೃತಿ ‘ನಿಜಗುಣ ಸ್ವರಸರಿತಾ.’ ಸ್ವಂತ ಕವನಗಳಿಗೆ ಸ್ವರಪ್ರಸ್ತಾರ ಹಾಕಿ ರಾಗ ಸಂಯೋಜನೆ ಮಾಡಿ ಪ್ರಕಟಿಸಿದ್ದು ‘ಝೇಂಕಾರ’ ಎಂಬ ಕೃತಿ. ರಾಮೋತ್ಸವ, ಸಂಘ, ಸಮಾಜಗಳಲ್ಲಿ ನಡೆಸಿಕೊಟ್ಟ ಸಂಗೀತ ಕಚೇರಿಗಳು. ರಚಿಸಿದ ಗ್ರಂಥಗಳು ಹಲವಾರು. ಸಂಗೀತ ಬಾಲಪಾಠ, ಝೇಂಕಾರ, ನಿಜಗುಣ ಸ್ವರಸರಿತಾ, ಜಾನಪದ ಸ್ವರಸಂಪದ-ಸಂಗೀತದ ಹೊತ್ತಗೆಗಳು. ಸಂಗೀತದ ಸುಳಿಯಲ್ಲಿ, ಬಿಸಿಲು-ನೆರಳು- ಕಾದಂಬರಿ. ಕಾಂಚನದ ಕಮರು-ನಾಟಕ. ಕವಿತಾ ಕಿರಣ, ರಸರಾಗರಸಿಕೆ, ಪ್ರಕೃತಿಯಾರಾಧನೆ ಮುಂತಾದ ಕವನ ಸಂಕಲನಗಳೂ ಸೇರಿ ೨೦ಕ್ಕೂ ಹೆಚ್ಚು ಕೃತಿ ಪ್ರಕಟಿತ. ಉತ್ತಮ ಶಿಕ್ಷಕಿ ಪ್ರಶಸ್ತಿ, ಸಂಗೀತರತ್ನ ಬಿರುದು ಪಡೆದುದಕ್ಕಿಂತ ನಿವೃತ್ತಿಯಿಂದ ಬಂದ ಹಣದಲ್ಲಿ ಸ್ವರ-ಲಿಪಿ-ಪ್ರತಿಷ್ಠಾನ ರಚಿಸಿ ಪ್ರತಿವರ್ಷ ಹಿರಿಯ ವಿದುಷಿ ಹಾಗೂ ಹಿರಿಯ ಸಾಹಿತಿ (ಮಹಿಳಾ)ಗಳಿಗೆ ಸ್ವರಭೂಷಿಣಿ, ಲಿಪಿಪ್ರಾಜ್ಞೆ ಪ್ರಶಸ್ತಿ ಕೊಟ್ಟು, ಸಂಗೀತ-ಸಾಹಿತ್ಯದ ಬಗ್ಗೆ ಇದ್ದ ಕಾಳಜಿ ತೋರಿಸಿದ್ದಾರೆ. ಸದಾ ಸಂಗೀತ ಸಾಹಿತ್ಯದಲ್ಲಿ ತೊಡಗಿದ್ದು ನಿಧನರಾದದ್ದು ೪.೩.೨೦೦೫ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಎಂ.ಜಿ. ದೇಶಪಾಂಡೆ – ೧೯೫೨ ರಾಮದಾಸ ಪ್ರಭು – ೧೯೭೪

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top