ಬಿ.ಎಸ್. ಚಂದ್ರಶೇಖರ್

Home/Birthday/ಬಿ.ಎಸ್. ಚಂದ್ರಶೇಖರ್
Loading Events
This event has passed.

೭-೧-೧೯೫೧ ಕವಿ, ಚಿಂತಕ, ಸಂಘಟಕ ಬಿ.ಎಸ್. ಚಂದ್ರಶೇಖರ್ ಹುಟ್ಟಿದ್ದು ಕನಕಪುರ. ತಂದೆ ಸುಬ್ಬರಾವ್, ತಾಯಿ ಸತ್ಯಲಕ್ಷ್ಮಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಕುದೂರು, ಹೊಸಕೋಟೆ, ಮಾಲೂರು. ಕಾಲೇಜು ವಿದ್ಯಾಭ್ಯಾಸ ನ್ಯಾಷನಲ್ ಕಾಲೇಜು, ಎಂ.ಎಸ್‌ಸಿ. ಸೆಂಟ್ರಲ್ ಕಾಲೇಜು, ಗಣಿತ ಎಂ.ಎಸ್‌ಸಿ. ಕನ್ನಡ ಜಾಣ ಪ್ರಥಮ ರ‍್ಯಾಂಕ್, ಬಿ.ಎಸ್‌ಸಿ. (ಆನರ್ಸ್) ಎಂ.ಎಸ್‌ಸಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆ. ಎಂ.ಎ. ಕನ್ನಡ. ಬೆಂಗಳೂರು ವಿಶ್ವವಿದ್ಯಾಲಯ. ಮೊದಲ ತಂಡ-ಪ್ರಥಮ ದರ್ಜೆ. ಬಾಹ್ಯ ವಿದ್ಯಾರ್ಥಿಗಳ ಪೈಕಿ ಮೊದಲ ರ‍್ಯಾಂಕ್. ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಉದ್ಯೋಗ. ಬೆಂಗಳೂರು ನಗರದ ವಸೂಲಾತಿ ಶಾಖೆ. ಬೆಂಗಳೂರು ವಲಯ ಕಚೇರಿ, ಚಿಂತಾಮಣಿ-ಶಾಖಾ ವ್ಯವಸ್ಥಾಪಕ, ಮಂಗಳೂರು ಸಿಬ್ಬಂದಿ ತರಬೇತಿ ಕೇಂದ್ರದಲ್ಲಿ ಬೋಧಕ ವೃತ್ತಿ. ಜೊತೆಗೆ ಅಂಟಿದ ಸಾಹಿತ್ಯದ ಗೀಳು. ಸಂಘಟನೆಯಲ್ಲಿ ಕಾರ್ಯ ಪ್ರವೃತ್ತ. ಕನ್ನಡ ಸಂಘದ ಅಧ್ಯಕ್ಷ. ಬ್ಯಾಂಕಿನ ಕನ್ನಡ ಸಂಘದ ಪತ್ರಿಕೆ ‘ಮಂದಾರ’ದ ಸಂಪಾದಕ. ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘಗಳ ಸಮನ್ವಯ ಸಮಿತಿ ಕಾರ‍್ಯಾಧ್ಯಕ್ಷ. ಆಕಾಶವಾಣಿ, ಕವಿಗೋಷ್ಠಿಗಳಲ್ಲಿ  ಕಾವ್ಯಧಾರೆ. ಚಿಂತನ ಕಾರ‍್ಯಕ್ರಮದಲ್ಲಿ ವಿಚಾರಧಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಲೇಖನ, ಕವಿತೆ, ನಗೆಬರಹ, ವಿಮರ್ಶೆ, ಹಲವಾರು ವಿಚಾರ ಗೋಷ್ಠಿಗಳಲ್ಲಿ ಬ್ಯಾಂಕಿಂಗ್ ವಿಚಾರ ಕುರಿತು ಪ್ರಬಂಧ ಮಂಡನೆ. ಜೊತೆಗೆ ತತ್ತ್ವಜ್ಞಾನ, ಮನೋವಿಜ್ಞಾನ, ಜೋತಿಷ್ಯ, ಚದುರಂಗ ಆಸಕ್ತ ವಿಷಯಗಳು. ಕವನ ಬರೆವೆಯಾ ಕಂಪ್ಯೂಟರ್, ಕಾಣುತಿಹುದೀಗಿಷ್ಟೆ-ಕವನ ಸಂಕಲನ. ಪುಟ್ಟಿಯ ಕನಸು-ಮಕ್ಕಳ ಪದ್ಯಗಳು. ಭಾರತದಲ್ಲಿ ಬ್ಯಾಂಕಿಂಗ್ ಕೆಲವು ಚಿಂತನೆಗಳು. ಇಚ್ಛಾಶಕ್ತಿ-ತಾತ್ವಿಕ ಚಿಂತನೆಗಳು. ‘ವಿಶಿಷ್ಟ’ – ಕಾರ್ಮಿಕ ಮುಖಂಡರೊಬ್ಬರ ಸಂಭಾವನ ಗ್ರಂಥದ ಸಂಪಾದಕ-ಇವು ಪ್ರಮುಖ ಕೃತಿಗಳು. ಕಾಣುತಿಹುದೀಗಿಷ್ಟೆ  ಕೃತಿಗೆ ತ.ರಾ.ಸು. ಪ್ರಶಸ್ತಿ ; ಪುಟ್ಟಿಯ ಕನಸು ಕೃತಿಗೆ-ಆರ್ಯಭಟ ಪ್ರಶಸ್ತಿ ದೊರೆತಿದೆ. ಏಷ್ಯಾ ಪೆಸಿಫಿಕ್ ‘ಹೂ ಯಿಸ್ ಹೂ’ ಗ್ರಂಥದಲ್ಲಿ ಪರಿಚಯ ಸೇರ‍್ಪಡೆ. ಪ್ರಸ್ತುತ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕಾರ‍್ಯ ನಿರ್ವಹಣೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಈಶ್ವರಿ ಭಟ್ – ೧೯೪೮ ಜಿ.ಎಸ್. ಅನ್ನದಾನಿ – ೧೯೩೬ ಬಿ.ಎಸ್. ಗದ್ದಗಿಮಠ – ೧೯೧೭-೩೦.೧೦.೧೯೬೦

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top