Loading Events

« All Events

ಬಿ. ಕೃಷ್ಣ

July 16

೧೬..೧೯೦೭ ೧೯೨೦-೩೦ ರ ಸುಮಾರಿನಲ್ಲಿ ಸ್ತ್ರೀಪಾತ್ರಗಳನ್ನು ನಿರ್ವಹಿಸಿ ಅತ್ಯಂತ ಜನಪ್ರಿಯ ನಟರೆನಿಸಿಕೊಂಡಿದ್ದ ಕೃಷ್ಣರವರು ಹುಟ್ಟಿದ್ದು ಮೈಸೂರು. ಕಾಲೇಜು ಕಲಿಯುತ್ತಿದ್ದಾಗಲೇ ಲಲಿತಕಲಾ ಸಂಘದ ಕಾರ್ಯದರ್ಶಿಯಾಗಿ ಹಲವಾರು ನಾಟಕಗಳಲ್ಲಿ ಪ್ರಮುಖವಾಗಿ ಸ್ತ್ರೀ ಪಾತ್ರಗಳನ್ನು ವಹಿಸಿ ಬೆಂಗಳೂರು, ತುಮಕೂರು, ಚನ್ನಪಟ್ಟಣ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ನಾಟಕಗಳನ್ನಾಡಿ ಗಳಿಸಿದ ಜನ ಪ್ರಿಯತೆ. ಬಿಎಂಶ್ರೀಯವರ ಗದಾಯುದ್ಧ, ಮೂರ್ತಿರಾಯರ ಆಷಾಢಭೂತಿ, ವೆಂಕಟಾಚಾರ್ಯರ ಸಾವಿನ ಸಮಸ್ಯೆ ಮುಂತಾದ ನಾಟಕಗಳಲ್ಲಿ ವಹಿಸುತ್ತಿದ್ದ ಸ್ತ್ರೀ ಪಾತ್ರಗಳು. ಇವಲ್ಲದೆ ಪ್ರೊ ರಾಲೋ, ಮೆಕೆಂಟಿಷ್‌ರವರು ನಿರ್ದೇಶಿಸುತ್ತಿದ್ದ ಇಂಗ್ಲಿಷ್‌ ನಾಟಕಗಳಲ್ಲೂ ಪ್ರಧಾನ ಸ್ತ್ರೀಪಾತ್ರಧಾರಿ. ಜೂಲಿಯಸ್‌ ಸೀಸರ್ ಮತ್ತು ಮರ್ಚೆಂಟ್‌ ಆಫ್‌ ವೆನಿಸ್‌ ನಾಟಕದ ಪೋರ್ಷಿಯಾ, ಟ್ವೆಲ್ಫ್ರನೈಟ್‌ನಲ್ಲಿ ವಯೋಲ, ಮ್ಯಾಕ್‌ಬೆತ್‌ನಲ್ಲಿ ಲೇಡಿಮ್ಯಾಕ್‌ಜಿತ್‌, ಹ್ಯಾಮ್ಲೆಟ್‌ನಲ್ಲಿ, ಒಫೀಲಿಯಾ ಸ್ತ್ರೀಪಾತ್ರಗಳನ್ನು ವಹಿಸಿದರೆಂದರೆ ವಿದೇಶಿಯರೂ ಆಶ್ಚರ್ಯಪಡುವಂತಹ ನಟನೆ. ಗದಾಯುದ್ಧದ ದ್ರೌಪದಿ, ಆಷಾಢಭೂತಿಯ ಸರಸು, ಟೊಳ್ಳುಗಟ್ಟಿಯ ಪಾತು, ಹೋರೂಲ್‌ನ ವೆಂಕಮ್ಮ, ಪಾತುತವರುಮನೆಯ ಲಕ್ಷ್ಮೀದೇವಮ್ಮ, ನೆರೆಹೊರ್ಕೆಯ ಸೀತಮ್ಮ, ಹುತ್ತದಲ್ಲಿ ಹುತ್ತದ ಸರೋಜ, ಗಂಡುಗೊಡಲಿಯ ಭಾರ್ಗವಿ ಪಾತ್ರಗಳನ್ನು ನೋಡಿದ ಅಂದಿನ ಜನತೆಗೆ ಮರೆಯಲಾಗದ ಅನುಭವ. ಉದ್ಯೋಗಿಯಾಗಿ ೧೯೩೨ ರಲ್ಲಿ ವಿದ್ಯಾಇಲಾಖೆಗೆ ಸೇರಿ ಪ್ರಚಾರ ನಾಟಕಗಳಲ್ಲಿ ಭಾಗಿ, ೧೯೪೯-೫೨ ರ ಅವಧಿಯಲ್ಲಿ ರಾಷ್ಟ್ರೀಯ ನಾಟಕ ರಂಗ ಮೈಸೂರು ರಾಜ್ಯ ಶಾಖೆ ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ. ಕುವೆಂಪು ರವರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ಕುವೆಂಪುರವರ ೧೨ ನಾಟಕಗಳು ನಂತರ ಕೈಲಾಸಂ ನಾಟಕೋತ್ಸವಗಳ ರೂವಾರಿ. ಸ್ವತಃ ರಂಗಮಂಟಪ ಸಂಸ್ಥೆ ಸ್ಥಾಪಿಸಿ ಹಲವಾರು ನಾಟಕಗಳ ನಿರ್ದೇಶನ. ಮೂಕಿ ಚಿತ್ರದ ವಸಂತಸೇನೆ ನಂತರ ಕಂಕಣ, ಘಟಶ್ರಾದ್ಧ, ಕುದುರೆಮೊಟ್ಟೆ ಚಲನಚಿತ್ರಗಳ ಪ್ರಮುಖ ಪಾತ್ರಧಾರಿಯ, ಇಂದು ಶತಮಾನೋತ್ಸವದ ಹುಟ್ಟುಹಬ್ಬ.   ಇದೇ ದಿನ ಹುಟ್ಟಿದ ಕಲಾವಿದರು ಸುಗಣಾಚಂದಾವರಕರ್‌ – ೧೯೨೬ ಯಶವಂತ ಪಾಂಡುರಂಗ ಬೋಂದ್ರೆ – ೧೯೫೨ ಕಿಕ್ಕೇರಿ ವೀರನಾರಾಯಣ – ೧೯೫೪

* * *

Details

Date:
July 16
Event Category: