ಬಿ.ಕೆ. ಸುಮಿತ್ರ

Home/Birthday/ಬಿ.ಕೆ. ಸುಮಿತ್ರ
Loading Events
This event has passed.

೦೧.೦೭.೧೯೪೬ ಸಂಗೀತದ ಎಲ್ಲ ಪ್ರಕಾರಗಳಲ್ಲಿಯೂ ಹಾಡಿ ವಿಶಿಷ್ಟ ಸಾಧನೆ ಮಾಡಿರುವ ಸುಮಿತ್ರರವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಬಿಳಿಲು ಕೊಪ್ಪಗ್ರಾಮದಲ್ಲಿ. ತಂದೆ ಪಟೇಲ್‌ಕೃಷ್ಣಯ್ಯ, ತಾಯಿ ಗಂಗಮ್ಮ, ಚಿಕ್ಕಂದಿನಿಂದಲೂ, ರಾತ್ರಿ ವೇಳೆ ಅಡಿಕೆ ಸುಲಿಯಲು ಬರುತ್ತಿದ್ದ ಕೆಲಸದವರ ಜಾನಪದಗೀತೆಗಳು, ಕಥೆಗಳು, ತಾಯಿ ಮತ್ತು ಸೋದರತ್ತೆಯವರು ಹಾಡುತ್ತಿದ್ದ ಸಂಪ್ರದಾಯದ ಹಾಡುಗಳಿಂದ ಪ್ರಭಾವಿತರು. ಮಂಜಪ್ಪ ಜೋಯಿಸ್‌ಮತ್ತು ಎಂ. ಪ್ರಭಾಕರ್ ರವರಲ್ಲಿ ಸಂಗೀತ , ಸೀನಿಯರ್ ಗ್ರೇಡ್‌ನಲ್ಲಿ ತೇರ್ಗಡೆ. ಕಾಲೇಜು ಕಲಿಯುತ್ತಿದ್ದಾಗ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಗೀತೆಗಳನ್ನು ಕೇಳಿ ಅಭ್ಯಾಸ, ಜಾನಪದಗೀತೆ, ಭಾವಗೀತೆ, ಭಕ್ತಿಗೀತೆಗಳ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿ, ಕುವೆಂಪು, ದ.ರಾ. ಬೇಂದ್ರೆ, ಕೆ.ಎಸ್‌.ನ, ಜಿ.ಎಸ್‌.ಎಸ್‌, ನಿಸಾರ್ ಅಹಮದ್‌, ಲಕ್ಷ್ಮೀನಾರಾಯಣಭಟ್ಟರು ಮುಂತಾದವರ ಕವಿತೆಗಳನ್ನು ಆಕಾಶವಾಣಿ, ದೂರದರ್ಶನ, ಕ್ಯಾಸೆಟ್‌, ಸಿ.ಡಿ ಗಳಿಗಾಗಿ ಹಾಡುಗಾರಿಕೆ. ೧೯೯೨,೯೭,  ೨೦೦೨ ರಲ್ಲಿ ಅಮೆರಿಕಾ ಪ್ರವಾಸ. ಹಲವಾರು ಪ್ರಮುಖ ನಗರಗಳ ಕನ್ನಡ ಕೂಟಗಳಲ್ಲಿ ನೀಡಿದ ಸುಗಮಸಂಗೀತ ಕಾರ್ಯಕ್ರಮ. ಜಿ.ಕೆ. ವೆಂಕಟೇಶ್‌ ರವರ ಸಂಗೀತ ನಿರ್ದೇಶನದ ಕವಲೆರಡು ಕುಲವೊಂದು ಚಿತ್ರದಲ್ಲಿ ಗಾಯಕಿಯಾಗಿ ಚಿತ್ರರಂಗ ಪ್ರವೇಶ, ವಿಜಯ ಭಾಸ್ಕರ್, ಎಂ. ರಂಗರಾವ್‌, ರಾಜನ್‌ ನಾಗೇಂದ್ರ, ಸತ್ಯಂ, ಉಪೇಂದ್ರಕುಮಾರ್ ಸಂಗೀತ ನಿರ್ದೇಶನದಲ್ಲಿ ಹಲವಾರು ಚಿತ್ರಗಳ ಗಾಯಕಿ. ಎಚ್‌.ಎಂ.ವಿ. ಸಿ.ಬಿ.ಎಸ್‌, ಸಂಗೀತ, ಲಹರಿ ಮುಂತಾದ ಧ್ವನಿಸುರುಳಿ ಸಂಸ್ಥೆಗಳಿಗೆ, ಉಡುಪಿ ಕೃಷ್ಣ, ಧರ್ಮಸ್ಥಳ ಮಂಜುನಾಥ, ಎಡೆಯೂರು ಸಿದ್ಧಲಿಂಗೇಶ್ವರ ಮುಂತಾದ ಭಕ್ತಿಗೀತೆಗಳಿಗೆ ಹಾಡುಗಾರಿಕೆ. ಲಾವಣ್ಯಲೇಖಕರ ಬಳಗದಿಂದ ಗಾನ ಕೋಗಿಲೆ, ಕೆಂಪೇಗೌಡ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.   ಇದೇ ದಿನ ಹುಟ್ಟಿದ ಕಲಾವಿದರು: ಭರಮ ಲಿಂಗಪ್ಪ – ೧೯೩೫ ಅಕ್ಕಸಾಲಿ ಕಾಳಪ್ಪ – ೧೯೩೫ ವೃಷಭೇಂದ್ರಾಚಾರ್ಯ – ೧೯೪೬ ಪೂಜಾರ.  ಎನ್‌.ಎಚ್‌ – ೧೯೬೫

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top