ಬಿ. ಗಣೇಶ ಸೋಮಯಾಜಿ

Home/Birthday/ಬಿ. ಗಣೇಶ ಸೋಮಯಾಜಿ
Loading Events
This event has passed.

೧೨.೦೩.೧೯೪೯ ಕಲಾ ಸಂಘಟಕ, ಕಲಾ ಶಿಕ್ಷಕ, ಕಲಾವಿದರಾದ ಗಣೇಶ ಸೋಮಯಾಜಿ ಯವರು ಹುಟ್ಟಿದ್ದು ಬಂಟ್ವಾಳ. ತಂದೆ ಬಿ. ಸುಬ್ರಾಯ ಸೋಮಯಾಜಿ, ತಾಯಿ ಶಾರದಮ್ಮ. ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ. ಕಲಿತದ್ದು ಡಿಪ್ಲೊಮ ಇನ್ ಆರ್ಟ್ ಪರೀಕ್ಷೆಯಲ್ಲಿ ಪಡೆದ ಪ್ರಥಮ ಸ್ಥಾನ. ಮಂಗಳೂರಿನ ಕಲಾವಿದರಾದ ಬಿ.ಜಿ. ಮೊಹಮದ್ ರವರಲ್ಲಿ ಕಲಿತ ಚಿತ್ರಗಾರಿಕೆ. ಜಲವರ್ಣ, ತೈಲವರ್ಣದಲ್ಲಿ ಸಿದ್ಧಹಸ್ತರು, ರೊಜಾರಿಯೋ ಹೈಸ್ಕೂಲಿನಲ್ಲಿ ಕಲಾ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮಾರ್ಗದರ್ಶನ. ಕಲಾ ಸಂಘಟಕರಾಗಿ ಮೂರು ದಶಕಗಳಿಂದಲೂ ಕಲಾ ಶಿಕ್ಷಕರ ಸಂಘಟನೆಯ ಮೂಲಕ, ಕಲೆಯ ಬೆಳವಣಿಗೆಗೆ ಸ್ಥಾಪಿಸಿದ್ದು ಆರ್ಟಿಸ್ಟ್ ಕಂಬೈನ್ಸ್ ಸಂಸ್ಥೆ. ಸಂಸ್ಥೆಯ ಕಾರ್ಯದರ್ಶಿಯಾಗಿ ಕಲಾಬಳಗಕ್ಕೆ ನೀಡುತ್ತಿರುವ ಮಾರ್ಗದರ್ಶನ. ದಕ್ಷಿಣ ಕನ್ನಡ ಜಿಲ್ಲಾ ಚಿತ್ರಗಾರಿಕೆ, ಶಿಕ್ಷಕರ ಸಂಘದ ಸ್ಥಾಪಕ ಸದಸ್ಯರು, ಕಲೆಯ ಬಗ್ಗೆ ಹಲವಾರು ಕೃತಿಗಳ ಪ್ರಕಟಣೆ. ಹಲವಾರು ರಾಜ್ಯ ಮಟ್ಟದ, ರಾಷ್ಟ್ರಮಟ್ಟದ ಕಲಾಪ್ರದರ್ಶನದಲ್ಲಿ ಭಾಗಿ. ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಕಲಾಪ್ರದರ್ಶನ. ರಾಜ್ಯ ಲಲಿತಕಲಾ ಅಕಾಡಮಿ ಐಹೊಳೆಯಲ್ಲಿ ನಡೆಸಿದ ಕಲಾವಿದರ ಶಿಬಿರ, ವಿಶ್ವ ಕನ್ನಡ ಸಮ್ಮೇಳನದ ಕಲಾ ಶಿಬಿರ, ಮಣಿಪಾಲದಲ್ಲಿ ನಡೆದ ಕಲಾಗಾರರ ಹಸ್ತಶಿಲ್ಪ, ದಕ್ಷಿಣ ಕನ್ನಡ ಚಿತ್ರಕಲಾ ಶಿಕ್ಷಕರ ಸಂಘದ ಪ್ರಪ್ರಥಮ ಚಿತ್ರಕಲಾ ಸಮಾವೇಶ, ಸೀ ಸ್ಕೇಪ್ ರಾಜ್ಯಮಟ್ಟದ ಕಲಾ ಶಿಬಿರ, ಜಲವರ್ಣ-ತೈಲವರ್ಣ ಹಾಗೂ ವಿವಿಧ ಮಾಧ್ಯಮಗಳಲ್ಲಿ ಸಮುದ್ರದ ಆಶು ಚಿತ್ರರಚನಾ ಶಿಬಿರ, ವರ್ಷವೈಭವ, ಚಿತ್ರಕಲಾವಿದರ ಕಲಾಸೃಷ್ಟಿ-ಕವಿಗಳಿಂದ ಕಾವ್ಯ ಸೃಷ್ಟಿ ಉತ್ಸವ ಮುಂತಾದುವುಗಳ ಸಂಪನ್ಮೂಲ ವ್ಯಕ್ತಿಯಾಗಿ ಹೊತ್ತ ಜವಾಬ್ದಾರಿ. ಆರ್ಟಿಸ್ಟ್ ಕಂಬೈನ್ಸ್, ದ.ಕ. ಜಿಲ್ಲಾ ಕಲಾ ಶಿಕ್ಷಕರ ಸಂಘ, ರಾಜ್ಯಕಲಾ ಶಿಕ್ಷಕರ ಸಂಘ, ಪ್ರಸಾದ ಆರ್ಟ್ ಗ್ಯಾಲರಿ ಮುಂತಾದುವುಗಳ ಸ್ಥಾಪಕರಾಗಿ ಮಾರ್ಗದರ್ಶನ. ಸಂದ ಪ್ರಶಸ್ತಿಗಳು-ರಾಜ್ಯ ಸರಕಾರದ ಅತ್ಯುತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿ, ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ಮಂಗಳೂರಿನ ಪ್ರತಿಷ್ಠಿತ ಸಂದೇಶ ಪ್ರತಿಷ್ಠಾನದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಮೂಡಬಿದ್ರೆಯ ಕಾ.ವಾ. ಆಚಾರ್ಯ ವಿದ್ಯಾರ್ಥಿ ಟ್ರಸ್ಟ್‌ನಿಂದ ಕಲಾನಿಧಿ, ದಸರಾ ವಸ್ತುಪ್ರದರ್ಶನದ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಕಲಾವಿದರು : ರಂಗಪ್ಪನಾಯಕ್ ಕೆ. – ೧೯೩೯ ಎಸ್ಕಾರ್ಟ್ ಶಾಂತಕುಮಾರ್ – ೧೯೫೭ ಮಲ್ಲಿಕಾರ್ಜುನ ತರ್ಲಘಟ್ಟಿ – ೧೯೬೦

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top