೦೯.೦೬.೧೯೫೦ ವೃತ್ತಿ ರಂಗ ಭೂಮಿಯಿಂದ ಟಿ.ವಿ. ಧಾರಾವಾಹಿಯವರೆಗೆ ಅಭಿನಯದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಜಯಶ್ರೀಯವರು ಹುಟ್ಟಿದ್ದು ಬೆಂಗಳೂರು. ತಂದೆ ಬಸವರಾಜ್, ತಾಯಿ ಜಿ.ವಿ. ಮಾಲತಮ್ಮ. ಸಾಂಪ್ರದಾಯಿಕ ಶಿಕ್ಷಣಕ್ಕಿಂತ ರಂಗಭೂಮಿಯಲ್ಲಿ ದೊರೆತ ಶಿಕ್ಷಣವೇ ಜಾಸ್ತಿ, ತಾಯಿ ಮಾಲತಮ್ಮನವರು ಗರ್ಭಿಣಿಯಾಗಿ ರಂಗದ ಮೇಲೆ ಅಭಿನಯಿಸುತ್ತಿದ್ದಾಗ, ಗರ್ಭದಲ್ಲಿದ್ದುಕೊಂಡೆ ರಂಗವೇರಿದವರು. ಬಾಲಕಲಾವಿದೆಯಾಗಿ ನಾಲ್ಕರ ವಯಸ್ಸಿನಲ್ಲೇ ದಶಾವತಾರ ನಾಟಕದಲ್ಲಿ ವೇದ ಶಿಶುವಾಗಿ ಅಭಿನಯ. ಬಾಲಕೃಷ್ಣ, ಪ್ರಹ್ಲಾದನ ಪಾತ್ರಗಳಲ್ಲಿ ಗಳಿಸಿದ ಜನಪ್ರಿಯತೆ. ಓದಿದ್ದು ಪಿ.ಯು.ವರೆಗೆ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಪಡೆದ ಪದವಿ. ಇಬ್ರಾಹಿಂ ಅಲ್ಕಾಜಿಯವರಿಂದ ಪಡೆದ ರಂಗಭೂಮಿ ಶಿಕ್ಷಣ. ರಂಗಭೂಮಿಗೆ ಹೊಸ ಕಾಯಕಲ್ಪ ನೀಡಲು ಆಯ್ದುಕೊಂಡಿದ್ದು ಆದರ್ಶ ಫಿಲಂ ಇನ್ಸ್ಟಿಟ್ಯೂಟಿನ ಉಪನ್ಯಾಸಕಿಯ ಹುದ್ದೆ, ಬಾಲಭವನದಲ್ಲಿ ಕೆಲಕಾಲ, ಹವ್ಯಾಸಿ ರಂಗಭೂಮಿಗೆ ನೀಡಿದ ಕ್ರಾಂತಿಕಾರಿಕ ಬದಲಾವಣೆ. ಜನಪದ ರಂಗಭೂಮಿಯ ಬಗ್ಗೆ ಸಂಶೋಧನೆ ನಡೆಸಿ ಅದೇ ಹಿನ್ನೆಲೆಯಲ್ಲಿ ನಾಟಕ ನಿರ್ಮಿಸುವುದಕ್ಕಾಗಿ ವಿದೇಶಿ ಸಂಸ್ಥೆಯ ಅನುದಾನದಿಂದ ನಿರ್ಮಿಸಿದ ನಾಟಕ ಲಕ್ಷಾಪತಿ ರಾಜನ ಕಥೆ. ಭಾರತದಲ್ಲಷ್ಟೇ ಅಲ್ಲದೆ ವಿದೇಶದಲ್ಲೂ ಪ್ರದರ್ಶನಗೊಂಡು ಜನಮೆಚ್ಚುಗೆ ಗಳಿಸಿದ ನಾಟಕ. ಮತ್ತೊಂದು ನಾಟಕ ಕಿನ್ನರಿ ಜೋಗೆರಾಟ. ರಂಗಶ್ರೀ ಎಂಬ ರಂಗ ನಾಟಕ ಸಂಸ್ಥೆಯನ್ನು ಹುಟ್ಟು ಹಾಕಿದವರು ರಾಣಿರಾವ್, ಡಿ.ಆರ್.ಶಶಿಧರ್, ಹರ್ಷ, ಸತ್ಯಸಂಧ, ಕೆ. ಆನಂದರಾಜು ಮುಂತಾದವರು. ಮೊದಲ ಪ್ರಯೋಗ ಡೆತ್ ಆಫ್ ಎ ಸೇಲ್ಸ್ಮನ್. ನಂತರ ರಂಗಶ್ರೀ ಗಾಗಿ ಜಯಶ್ರೀಯವರ ನಿರ್ದೇಶನದಲ್ಲಿ ಕರಿಮಾಯಿ, ಬ್ಯಾರಿಸ್ಟರ್, ಲಕ್ಷಾಪತಿ ರಾಜನ ಕಥೆ, ಉರಿಯ ಉಯ್ಯಾಲೆ, ವೈಶಾಖ, ಯಕ್ಷ ನಗರಿ, ನಹಿನಹಿ ರಕ್ಷತಿ, ನೀಲಿ ಕುದುರೆ, ನಾಗಮಂಡಲ, ಜಸ್ಮಾಓಡನ್, ಅಗ್ನಿಪಥ ಚಿತ್ರಪಟ, ಸಿರಿಸಂಪಿಗೆ ಮುಂತಾದ ಯಶಸ್ವಿ ನಾಟಕಗಳು. ಹಲವಾರು ನಾಟಕಗಳಲ್ಲಿ ಅಭಿನಯ. ನಾಗಮಂಡಲದ ಕುರುಡವ್ವ, ಪ್ರಸನ್ನರ ನಿರ್ದೇಶನದ ತಾಯಿ, ಮೂಕಜ್ಜಿಯಾಗಿ ಗಳಿಸಿದ ಜನ ಪ್ರಿಯತೆ, ಏನಾ ಏನಿದು ಎಂಥಾ ಬೆರಗಾ, ರಂಗ ಗಣಪ ಕ್ಯಾಸೆಟ್ ಬಿಡುಗಡೆ. ಎಂ.ಎಸ್. ಸತ್ಯುರವರಗಳಿಗೆ, ಭಾವಭಾಮೈದ, ನನ್ನ ಪ್ರೀತಿಯ ಹುಡುಗಿ ಸಿನಿಮಾದ ಕಾರ್ ಕಾರ್… ಯಾರೇ ನೀನು ಅಭಿಮಾನಿಯ ಚಕ್ಕೋತ…. ಕೇಳುಗರ ಹುಚ್ಚೆಬ್ಬಿಸಿದ ಹಾಡುಗಳು. ಸ್ವೀಡನ್, ಕೈರೊ, ಸ್ಕಾಟ್ಲೆಂಡ್ ರಂಗೋತ್ಸವಗಳಲ್ಲಿ ಭಾಗಿ. ಅಮೆರಿಕಾದಲ್ಲಿ ’ಹೂವಿ’ ನಾಟಕ ನಿರ್ದೇಶನ. ಸಫ್ವಾರ್ ಹಷ್ಮಿ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ, ಬಿ. ವಿ.ಕಾರಂತ ಪುರಸ್ಕಾರ, ಸಂದೇಶ ಕಲಾ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು. ಇದೇದಿನಹುಟ್ಟಿದಕಲಾವಿದರು: ದತ್ತಾತ್ರೇಯ ಬಿ. ಹರೀಂದ್ರ – ೧೯೨೪ ವತ್ಸಲಾ – ೧೯೬೦.
* * *