ಬಿ. ದೀಪಕ್‌ಕುಮಾರ್

Home/Birthday/ಬಿ. ದೀಪಕ್‌ಕುಮಾರ್
Loading Events

೧೩.೧೧.೧೯೭೮ ಪ್ರಖ್ಯಾತ ಭರತನಾಟ್ಯ ಕಲಾವಿದ ದೀಪಕ್‌ಕುಮಾರ್‌ರವರು ಹುಟ್ಟಿದ್ದು ಮಂಗಳೂರು. ತಂದೆ ಭವಾನಿ ಶಂಕರ್, ತಾಯಿ ಪ್ರಭಾ ಬಿ. ಶಂಕರ್. ಓದಿದ್ದು ಬಿಕಾಂ, ಭರತನಾಟ್ಯ ಕಲೆಯಲ್ಲಿ ರಾಜ್ಯಕ್ಕೆ ೩ನೇ ರ‍್ಯಾಂಕ್, ಚಿತ್ರಕಲೆ ಹಾಗೂ ಎಂಬೋಸಿಂಗ್ ಕಲೆಯಲ್ಲಿ ಪಡೆದ ಪರಿಣತಿ. ೯ನೇ ವಯಸ್ಸಿನಿಂದಲೇ ನೃತ್ಯದಲ್ಲಿ ಆಸಕ್ತಿ, ಮಡಿಕೇರಿಯ ಕೆ.ಎಸ್. ರಾಜೇಶ್ವರಿ ಮತ್ತು ಬೆಂಗಳೂರಿನ ನರ್ಮದಾ ರವರಿಂದ ಪಡೆದ ನೃತ್ಯ ಶಿಕ್ಷಣ. ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯಿಂದ ರಾಷ್ಟ್ರೀಯ ಶಿಷ್ಯವೇತನ ಪಡೆದ ಪ್ರತಿಭಾವಂತ ವಿದ್ಯಾರ್ಥಿ. ನಾಟ್ಯದ ಶಾಸ್ತ್ರೋಕ್ತ ೧೦೮ ಕರಣಗಳ ಲಾಲಿತ್ಯಪೂರ್ಣ ಪ್ರದರ್ಶನ. ಭರತನಾಟ್ಯದ ಕ್ಲಿಷ್ಟಕರವಾದ ಯೋಗಾಸನದ ವಿವಿಧ ಭಂಗಿಗಳ ವೈಶಿಷ್ಟ್ಯಪೂರ್ಣ ಪ್ರದರ್ಶನ. ಆಯುರ್ವೇದ ಅಧ್ಯಯನಕ್ಕಾಗಿ ಬಂದ ಜಪಾನಿ ನಿಯೋಗ, ಧರ್ಮಸ್ಥಳದ ಲಕ್ಷ ದೀಪೋತ್ಸವ, ಶೃಂಗೇರಿ, ಹೊರನಾಡು, ಸಿರಸಿ, ಬೆಂಗಳೂರು, ಮೈಸೂರಿನ ಜಗನ್ಮೋಹನ ಅರಮನೆ ಅಲ್ಲದೆ ಹೊರರಾಜ್ಯಗಳಾದ ಕೊಯಮತ್ತೂರು, ಪೂನಾ ಮುಂತಾದೆಡೆ ಯಶಸ್ವಿ ಪ್ರದರ್ಶನ. ಧರ್ಮಸ್ಥಳದ ವೀರೇಂದ್ರ ಹೆಗಡೆ ಯವರಿಂದ ಬೆಳ್ಳಿ ಪದಕ, ಕೊಯಮತ್ತೂರಿನ ವಿಶ್ವಕರ್ಮ ಸಭಾ ಸಂಸ್ಥೆಯಿಂದ ಸುವರ್ಣ ಪದಕ, ಪುತ್ತೂರಿನಲ್ಲಿ ಪ್ರತಿಭಾದೀಪ ಪುರಸ್ಕಾರ, ಬೆಂಗಳೂರಿನ ರಂಗ ಸುರಭಿ ನೃತ್ಯ ಪ್ರಶಸ್ತಿ, ಉಡುಪಿ ಮಠದಿಂದ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ, ಭಾರತೀಯ ಜ್ಯೂನಿಯರ್ ಛೇಂಬರಿನಿಂದ Outstanding Young Indian Award, ಆರ್ಯಭಟ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದರು ಎಚ್. ಲಕ್ಷ್ಮೀನಾರಾಯಣಶಾಸ್ತ್ರಿ – ೧೯೩೨ ಶಿವಲಿಂಗಯ್ಯ ಶಂಕರಯ್ಯ ಹಿರೇಮಠ – ೧೯೪೭

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top