ಬಿ.ಪುಟ್ಟಯ್ಯ

Home/Birthday/ಬಿ.ಪುಟ್ಟಯ್ಯ
Loading Events
This event has passed.

೧-೬-೧೮೭೯ ೩೧-೧೨-೧೯೪೪ ಕನ್ನಡಕ್ಕಾಗಿ ದುಡಿದ ಮಹನೀಯರಲ್ಲಿ ಪ್ರಮುಖರಾದ ಪುಟ್ಟಯ್ಯನವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಮರಿಚೆನ್ನಪ್ಪ, ತಾಯಿ ತಿಮ್ಮಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಲಂಡನ್ ಮಿಷನ್ ಹೈಸ್ಕೂಲಿನಲ್ಲಿ. ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಪದವಿ. ಪದವಿ ಗಳಿಸಿದರೂ ನೌಕರಿ ಸಿಗದ ಕಾಲ. ಬಡತನದ ಜೀವನ. ಕಡೆಗೆ ದೊರೆತದ್ದು ಪೊಲೀಸ್ ಇಲಾಖೆಯಲ್ಲಿ ಏಳನೆಯ ದರ್ಜೆ ಗುಮಾಸ್ತೆ ಕೆಲಸ. ೧೯೦೩ರಲ್ಲಿ ದೊರೆತ ಬಡ್ತಿ. ಪೊಲೀಸ್ ಹೆಡ್‌ಮುನ್ಷಿಯಾಗಿ ಚಿತ್ರದುರ್ಗಕ್ಕೆ ವರ್ಗ. ಹನ್ನೆರಡು ವರ್ಷದ ಲೆಕ್ಕಪತ್ರಗಳನ್ನು ಸರಿಪಡಿಸಿ ಡೆಪ್ಯುಟಿ ಕಮೀಷನರಿಂದ ಪಡೆದ ಮೆಚ್ಚುಗೆ. ೧೯೦೬ರಲ್ಲಿ ಒಕ್ಕಲಿಗರ ಸಂಘ ಸ್ಥಾಪನೆ. ಒಕ್ಕಲಿಗರ ಸಂಘದ ಸೇವೆಗಾಗಿ ದೀಕ್ಷೆ. ದಿವಾನರ ಅಪ್ಪಣೆಯ ಮೇರೆಗೆ ಸಂಬಳವಿಲ್ಲದೆ ರಜೆ ದೊರಕಿಸಿಕೊಂಡು ಸಂಘದ ಕಾರ‍್ಯದರ್ಶಿಯಾಗಿ, ಒಕ್ಕಲಿಗರ ಪತ್ರಿಕೆಯ ಸಂಪಾದಕರಾಗಿ, ಮುದ್ರಣಾಲಯದ ಮೇಲ್ವಿಚಾರಕರಾಗಿ ಕಾರ‍್ಯ ನಿರ್ವಹಣೆ. ಸರಕಾರದ ಮುದ್ರಣ ಶಾಖೆಗೆ ಅಭ್ಯರ್ಥಿಗಳ ಆಯ್ಕೆ. ಪುಟ್ಟಯ್ಯನವರ ಜೊತೆಯಲ್ಲಿ ಆಯ್ಕೆಯಾದವರು ಶ್ರೀನಿವಾಸ ಅಯ್ಯಂಗಾರ‍್ಯರು. ಮುದ್ರಣ ಕಲೆಯಲ್ಲಿ ಉಚ್ಚ ರೀತಿಯ ಶಿಕ್ಷಣ ಪಡೆಯಲು ಇಬ್ಬರೂ ಇಂಗ್ಲೆಂಡಿಗೆ ಪ್ರಯಾಣ. ಮುದ್ರಣ ಕಲೆಯಲ್ಲಿ ಪರಿಣತರಾಗಿ ಪ್ರಶಸ್ತಿ ಪಡೆದು ೧೯೧೫ರಲ್ಲಿ ಸ್ವದೇಶಕ್ಕೆ. ವಿದೇಶದಲ್ಲಿದ್ದಾಗ ತಮ್ಮ ಅನುಭವಗಳನ್ನು ಒಕ್ಕಲಿಗರ ಪತ್ರಿಕೆಗಾಗಿ PUTTAIAH’S WEEKLY ಎಂಬ ಕಾಲಂನಿಂದ ಪ್ರಕಟಿತ. ಅಭಿವೃದ್ಧಿ ಸಂದೇಶ ಎಂಬ ಹೆಸರಿನಿಂದ ೧೯೨೧ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಣೆ. ಪ್ರವಾಸ ಸಾಹಿತ್ಯದ ಕನ್ನಡದ ಮೊಟ್ಟಮೊದಲ ಗ್ರಂಥವೆಂಬ ಹೆಗ್ಗಳಿಕೆ. ಸರಕಾರಿ ಮುದ್ರಣಾಲಯದ ಅಸಿಸ್ಟೆಂಟ್ ಸೂಪರಿಂಟೆಂಡೆಂಟರಾಗಿ, ಸೂಪರಿಂಟೆಂಡೆಂಟರಾಗಿ ಕಾರ್ಯ ನಿರ್ವಹಿಸಿ ೧೯೩೪ರಲ್ಲಿ  ನಿವೃತ್ತಿ. ಮುದ್ರಣ ಕಲೆಯ ಬಗ್ಗೆ  ಬರೆದ ಪುಸ್ತಕ ಮುದ್ರಣ ಕಸುಬು (೧೯೧೫). ೧೯೪೪ರ ಡಿಸೆಂಬರ್ ತಿಂಗಳಿನಲ್ಲಿ ರಬಕವಿಯಲ್ಲಿ ನಡೆದ ೨೮ನೇ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಹೋದ ಪುಟ್ಟಯ್ಯನವರ ಹಠಾತ್ ಮರಣ. ಪುಟ್ಟಯ್ಯನವರ ಜೀವನ ವೃತ್ತಾಂತವನ್ನು ಅವರ ಮಗ ಬಿ.ಪಿ. ರಾಧಾಕೃಷ್ಣರವರು ಬರೆದ ‘ನನ್ನ ತಂದೆ’ ಕೃತಿ ೧೯೪೯ರಲ್ಲಿ ಪ್ರಕಟಿತ.   ಇದೇ ದಿನ ಹುಟ್ಟಿದ ಸಾಹಿತಿಗಳು : ಪ್ರೊ. ವೆಂಕಟೇಶ ಹುಣಸೀಕಟ್ಟಿ – ೧೯೪೧ ಡಾ. ಅಶೋಕ ಆಳ್ವ – ೧೯೬೦ ಎಸ್.ವಿ. ಪಾಟೀಲ – ೧೯೬೦ ಕೆ.ಕೆ. ಅಮ್ಮಣ್ಣಾಯ – ೧೯೪೬ ಶಿವಲಿಂಗಪ್ಪ ಅಪ್ಪಣ್ಣ ಬಾವಿಕಟ್ಟಿ – ೧೯೪೧ ಎಚ್.ಜಿ. ಸಣ್ಣಗುಡ್ಡಯ್ಯ – ೧೯೩೫ ಡಿ.ಸಿ. ಅನಂತಸ್ವಾಮಿ – ೧೯೩೬ ಈಶ್ವರ ಕಾಪಸೆ – ೧೯೩೯ ಶಾ.ಮಂ. ಕೃಷ್ಣರಾವ್ – ೧೯೪೨ ವಸಂತ ಕುಲಕರ್ಣಿ – ೧೯೪೩

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top