Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಬಿ. ಪುರಂದರಭಟ್ – ಕಣಜ

ಬಿ. ಪುರಂದರಭಟ್

Home/Birthday/ಬಿ. ಪುರಂದರಭಟ್
Loading Events
This event has passed.

೭-೩-೧೯೩೬ ನಟ, ನಿರ್ದೇಶಕ, ಕಥೆಗಾರರಾದ ಪುರಂದರಭಟ್ಟರು ಹುಟ್ಟಿದ್ದು ಕುದುಮೂರು ಗ್ರಾಮ. ತಂದೆ ಬರೆಪ್ಪಾಡಿ ಸೀತಾರಾಮ ಭಟ್ ಮತ್ತು ತಾಯಿ ಕಾವೇರಿ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ವಿಟ್ಲದಲ್ಲಿ. ಹೈಸ್ಕೂಲು ಓದಿದ್ದು ಪುತ್ತೂರು ಬೋರ್ಡ್ ಹೈಸ್ಕೂಲು. ಮಂಗಳೂರಿನ ಸರಕಾರಿ ಕಾಲೇಜಿನಿಂದ ಬಿ.ಎ. ಪದವಿ. ಉಡುಪಿಯ ವೈಕುಂಠ ಬಾಳಿಗ ಕಾಲೇಜಿನಲ್ಲಿ ಎಲ್.ಎಲ್.ಬಿ. ನಂತರ ಮಣಿಪಾಲ ಕಾಲೇಜಿನಿಂದ ಬಿ.ಎಡ್. ಪದವಿ. ಬಿ.ಎ. ಪದವಿಯ ನಂತರ ಕೆಲಕಾಲ ಅಂಚೆ ಕಚೇರಿಯ ಕೆಲಸ. ಜೀವವಿಮಾ ನಿಗಮದಲ್ಲಿ ಕೆಲಕಾಲ. ಕಾನೂನು ಪದವಿಯ ನಂತರ ಕೆಲಕಾಲ ವಕೀಲಿ ವೃತ್ತಿ. ನಂತರ ಅಧ್ಯಾಪಕ ವೃತ್ತಿಯ ಕಡೆಗೆ ವಾಲಿದ್ದು. ಉಡುಪಿಯ ಪರ್ಕಳ ಹೈಸ್ಕೂಲು, ಪೂರ್ಣಪ್ರಜ್ಞ ಕಾಲೇಜು, ಪುತ್ತೂರಿನ ವಿವೇಕಾನಂದ ಕಾಲೇಜು-ಹಲವಾರು ಕಡೆ ಅಧ್ಯಾಪಕರಾಗಿ ದುಡಿದು ೧೯೯೪ರಲ್ಲಿ ನಿವೃತ್ತಿ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ, ನಾಟಕ, ಲಲಿತ ಕಲೆಗಳ ಕಡೆ ವಿಶೇಷ ಒಲವು. ಸಾಹಿತ್ಯದಷ್ಟೇ ಕ್ರೀಡಾವಿಭಾಗದಲ್ಲೂ ಪರಿಣತಿ. ಕ್ರಿಕೆಟ್, ವಾಲಿಬಾಲ್, ಬ್ಯಾಡ್‌ಮಿಂಟನ್ ಎಂದರೆ ಪ್ರಾಣ. ಹರಪನಹಳ್ಳಿ ಆನಂದರಾವ್, ಎಲ್.ಎಸ್. ಶೇಷಗಿರಿರಾವ್, ವೈ.ಬಿ. ಭಗವಾನ್, ಎಂ.ಆರ್.ಶಾಸ್ತ್ರೀ, ವಿ.ಎಂ. ಇನಾಂದಾರ್ ಮುಂತಾದವರಿಂದ ಸಾಹಿತ್ಯ ರಚನೆಗೆ ಇಂಬು. ಚಿಕ್ಕಂದಿನಿಂದಲೇ ಅ.ನ.ಕೃ., ತ.ರಾ.ಸು., ಶಿವರಾಮ ಕಾರಂತರ ಪುಸ್ತಕಗಳನ್ನೋದಿ ಅರಗಿಸಿಕೊಂಡ ಅನುಭವದಿಂದ ಹಲವಾರು ಕೃತಿ ರಚನೆ. ಹೈಸ್ಕೂಲಿನಲ್ಲಿದ್ದಾಗಲೇ ಕೈ ಬರಹದ ಪತ್ರಿಕೆಯ ಉಪಸಂಪಾದಕರು. ಮೊದಲ ಕವಿತೆ ಉಡುಪಿಯ ನವಯುಗ ಪತ್ರಿಕೆ, ಮೊದಲ ಕಥೆ ನವಭಾರತ ಪತ್ರಿಕೆಗಳಲ್ಲಿ ಪ್ರಕಟ. ಕೇಮ ದ್ರುಮ, ಸಾಗರ್, ಕಲ್ಪದ್ರುಮ, ಪುರಂದರ ಇವರ ಗುಪ್ತನಾಮ. ಪ್ರಜಾಮತ, ಗೋಕುಲ, ಹೊಸದಿಗಂತ, ಜನಾಂತರಂಗ, ಯುಗಪುರುಷ, ಸುಧಾ, ಕನ್ನಡ ಪ್ರಭ, ಜಯಂತಿ, ತರಂಗ, ಕಸ್ತೂರಿ ಮುಂತಾದ ಪತ್ರಿಕೆಗಳಿಗೆ ಬರೆದ ಲೇಖನಗಳು. ಪ್ರಕಟಿತ ಕೃತಿಗಳು-ಅನಾದಿಯ ಮಗು, ಸಾಂಪ್ರತ (ಕವನ ಸಂಕಲನ). ಹರಾಮರಾಜ್ಯ, ಧರ್ಮ ಹಾಳಾಯ್ತು (ಹರಟೆಗಳ ಸಂಕಲನ). ಹೀಗೊಬ್ಬ ಚಾರ್ವಾಕ (ವೈಚಾರಿಕ ನಾಟಕ). ತುಣುಕು (ಕಿರುಗವನಗಳು). ಗೂಳಿ-ಗತಿ (ಕಥಾಸಂಕಲನ). ಇವಲ್ಲದೆ ಕಥೆ, ಕವಿತೆ, ವಿಡಂಬನೆ, ಶೃಂಗಾರ ಗೀತೆಗಳು ಪ್ರಕಟಣೆಗೆ ಸಿದ್ಧ. ನಾಟಕ ರಚನೆ, ನಿರ್ದೇಶನ ಮತ್ತೊಂದು ಆತ್ಮೀಯ ಕ್ಷೇತ್ರ. ನೂರಾರು ನಾಟಕಗಳಲ್ಲಿ ಪಾತ್ರಧಾರಿ. ೩೦ಕ್ಕೂ ಹೆಚ್ಚು ನಾಟಕಗಳ ನಿರ್ದೇಶನದ ಹೊಣೆ. ಸ್ತ್ರೀವೇಷ ತೊಟ್ಟು ಸಭಿಕರನ್ನು ಮರುಳುಗೊಳಿಸಿದ್ದೂ ಉಂಟು. ಸಾಹಿತ್ಯ ವಿವೇಚನೆ, ವಿಮರ್ಶೆ, ವ್ಯಾಖ್ಯಾನ, ಭಾಗವತ ಪ್ರವಚನಗಳಿಗೆ ತಮ್ಮ ಮನೆಯನ್ನೇ ‘ಅನುರಾಗ ವಠಾರ’ ಎಂದು ಪರಿವರ್ತಿಸಿದ ಸಾಹಿತ್ಯಾಭಿಮಾನಿ. ಹಲವಾರು ಸಂಘ ಸಂಸ್ಥೆಗಳೊಡನೆ ನಿರಂತರ ಒಡನಾಟ. ಸಂದ ಸನ್ಮಾನಗಳು-ಪುತ್ತೂರಿನ ಆರನೇ ಸಾಹಿತ್ಯ ಸಮ್ಮೇಳನದಲ್ಲಿ  ಸಾಹಿತ್ಯ ಮತ್ತು ರಂಗಭೂಮಿ ಸೇವೆಗಾಗಿ, ಪುತ್ತೂರಿನ ರೋಟರಿ ಕ್ಲಬ್, ಪತ್ರಕರ್ತರ ಸಂಘದಿಂದ ಸನ್ಮಾನ.   ಇದೇ ದಿನ ಹುಟ್ಟಿದ ಸಾಹಿತಿಗಳು : ಸಾವಿತ್ರಿ ತನಯ – ೧೯೩೦ ಎಚ್.ವಿ. ನರಸಿಂಹಮೂರ್ತಿ – ೧೯೪೭

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top