ಬಿ. ಶಿವಮೂರ್ತಿಶಾಸ್ತ್ರಿ

Home/Birthday/ಬಿ. ಶಿವಮೂರ್ತಿಶಾಸ್ತ್ರಿ
Loading Events
This event has passed.

೨೩.೨.೧೯೦೩ ೧೫.೧.೧೯೭೬ ಶಿವಮೂರ್ತಿಶಾಸ್ತ್ರಿಗಳು ಹುಟ್ಟಿದ್ದು ತುಮಕೂರಿನಲ್ಲಿ. ತಂದೆ ಬಸವಯ್ಯಸ್ವಾಮಿ, ತಾಯಿ ನೀಲಮ್ಮ. ವಿದ್ಯಾಭ್ಯಾಸ  ಅಪ್ಪರ್ ಸೆಕೆಂಡರಿಯವರೆಗೆ ತುಮಕೂರು. ಮುಂದೆ ಕರಿಬಸವ ಶಾಸ್ತ್ರಿಗಳಲ್ಲಿ ಸಂಸ್ಕೃತ, ಕನ್ನಡ ಅಭ್ಯಾಸ. ಸ್ವಪ್ರಯತ್ನದಿಂದ ಕಲಿತದ್ದು ಹಿಂದಿ, ತೆಲುಗು ಭಾಷೆಗಳು. ೧೯೨೪ರಲ್ಲಿ ಗುಬ್ಬಿಯ ವೆಸ್ಲಿಯನ್ ಮಿಷನ್ ಶಾಲೆಯಲ್ಲಿ ಅಧ್ಯಾಪಕ ವೃತ್ತಿ ಆರಂಭ. ೧೯೩೬ರಲ್ಲಿ ಮೈಸೂರು ಸಂಸ್ಥಾನದಲ್ಲಿ  ಆಸ್ಥಾನ ವಿದ್ವಾಂಸರಾಗಿ ನೇಮಕ. ೧೯೪೮ರಲ್ಲಿ  ಮೈಸೂರು ಮಹಾರಾಜರಿಂದ ‘ಪಂಡಿತರತ್ನ’ ಪ್ರಶಸ್ತಿ. ‘ಶರಣ ಸಾಹಿತ್ಯ’ ಎಂಬ ಮಾಸ ಪತ್ರಿಕೆ ಆರಂಭ. ವೀರಶೈವ ಸಾಹಿತ್ಯ-ಧರ್ಮಗಳ ಪ್ರಸಾರವೇ ಪ್ರಮುಖವಾಗಿದ್ದರೂ ಇತರ ಧರ್ಮಗಳ ಕುರಿತ ಲೇಖನಗಳಿಗೂ ದೊರೆತ ಪ್ರಾಶಸ್ತ್ಯ. ‘ಶೂಲಪಾಣಿ’ ಎಂಬ ಕಾವ್ಯನಾಮದಿಂದಲೂ ಲೇಖನಗಳನ್ನು ಬರೆದರು. ಉಪಾಧ್ಯಾಯ ವೃತ್ತಿಗೆ ಶರಣು ಹೊಡೆದು ಕೀರ್ತನಕಾರರಾದರು. ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಲ್ಲಿ ‘ಕರ್ನಾಟಕ ವಿಜಯ’ದ ಮೇಲೆ ಕೀರ್ತನೆ ಮಾಡಿ ಖ್ಯಾತರಾದರು. ಆಸ್ಥಾನವಿದ್ವಾನ್, ಕೀರ್ತನಾಚಾರ್ಯ, ಕರ್ನಾಟಕ ವಿಭೂಷಣ, ವಿದ್ಯಾವಾರಿ, ಸಮಾಜ ಭಾಸ್ಕರ, ಪಂಡಿತರತ್ನಂ, ಪದ್ಮಶ್ರೀ ಮುಂತಾದ ಬಿರುದಾಂಕಿತರು. ಶರಣ ಸಾಹಿತ್ಯದ ಜೊತೆಗೆ ಕರ್ನಾಟಕದ ಏಕೀಕರಣಕ್ಕೆ ಮೀಸಲಾದ ‘ಸ್ವತಂತ್ರ ಕರ್ನಾಟಕ’ ವಾರಪತ್ರಿಕೆಯನ್ನು ೧೯೩೮ರಲ್ಲಿ ಆರಂಭಿಸಿದರು. ಹಲವಾರು ಗ್ರಂಥಗಳನ್ನು  ಸಂಶೋಸಿ ಪ್ರಕಟಿಸಿದರು. ರಾಘವಾಂಕನ ವೀರೇಶಚರಿತ್ರೆ, ನಿಜಗುಣ ಶಿವಯೋಗಿಯ ಪುರಾತನರ ತ್ರಿವಿ, ಪಾಲ್ಕುರಿಕೆ ಸೋಮನಾಥನ ‘ಬಸವೋದಾಹರಣಮ್’, ಗಣಸಹಸ್ರನಾಮ, ಘನಲಿಂಗಿ ದೇವರ ವಚನಗಳು, ಸಂಕ್ಷಿಪ್ತ ಪೂಜಾವಿ, ಮುಂತಾದವು. ಸರ್ವಜ್ಞಮೂರ್ತಿ, ಹಿಂದೂಧರ್ಮ ಇವರ ಸ್ವತಂತ್ರ ಕೃತಿಗಳು. ವೀರಶೈವ ಸಾಹಿತ್ಯ ಮತ್ತು ಇತಿಹಾಸ (ಭಾಗ ೧, ೨, ೩) ; ವೀರಶೈವ ಮಹಾಪುರುಷರು, ಕರ್ನಾಟಕ ದರ್ಶನ, ನಾಲ್ವಡಿ ಕೃಷ್ಣರಾಜ ವಿಲಾಸ, ಗಾಂಗೀತೆಗಳು…..ಪ್ರಮುಖ ಕೃತಿಗಳು. ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ‘ಕನ್ನಡ ನುಡಿ’ಯ ಸಂಪಾದಕ ಮಂಡಲಿಯಲ್ಲಿ  ಮತ್ತು ಪರಿಷತ್ತಿನ ಅಧ್ಯಕ್ಷರಾಗಿಯೂ ದುಡಿದರು. ಇವರದು ವಿಸ್ತಾರವಾದ ಕಾರ್ಯಚಟುವಟಿಕೆ. ಸರ್ಕಾರದ ಪಠ್ಯಪುಸ್ತಕ ಸಮಿತಿ, ದಿ ರೀಜನಲ್ ಹಿಸ್ಟಾರಿಕಲ್ ಕಮಿಟಿ, ಜಯಚಾಮರಾಜೇಂದ್ರ ಸಂಸ್ಕೃತ ಕಾಲೇಜ್ ಕಮಿಟಿ ಮುಂತಾದುವುಗಳಲ್ಲಿದ್ದರು. ಸಂದ ಗೌರವ-೧೯೬೬ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ, ೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಲೂಯಿಸ್ ಯೋಹಾನ ಶ್ರೀಮಂತ – ೧೯೨೧ ಎಚ್.ಎಂ. ಚನ್ನಯ್ಯ – ೧೯೩೫-೨೨.೯.೦೪ ರಾಜಲಕ್ಷ್ಮೀ ತಿರುನಾರಾಯಣನ್ – ೧೯೩೭

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top