ಬೀchi

Home/Birthday/ಬೀchi
Loading Events
This event has passed.

೨೩-೪-೧೯೧೩ ೭-೧೨-೧೯೮೦ ಹಾಸ್ಯಬ್ರಹ್ಮ ಎಂದೇ ಪ್ರಖ್ಯಾತರಾಗಿದ್ದ ರಾಯಸದ ಭೀಮಸೇನರಾವ್‌ರವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ಶ್ರೀನಿವಾಸರಾಯರು, ತಾಯಿ ಭಾರತಮ್ಮ. ಪ್ರಾಥಮಿಕದಿಂದ ಎಸ್.ಎಸ್.ಎಲ್.ಸಿ.ವರೆಗೆ ಓದಿದ್ದು ಹರಪನ ಹಳ್ಳಿಯಲ್ಲಿ. ಉದ್ಯೋಗಕ್ಕಾಗಿ ಪೊಲೀಸ್ ಇಲಾಖೆಯಲ್ಲಿ ಸೇರಿ ಸಿ.ಐ.ಡಿ. ಸ್ಪೆಷಲ್ ಬ್ರ್ಯಾಂಚ್‌ನ ಸೆಕ್ಷನ್ ಸೂಪರಿಂಟೆಂಡೆಂಟ್‌ರಾಗಿ ನಿವೃತ್ತಿ. ಹೊತ್ತು ಕಳೆಯಲು ಹೆಂಡತಿಗೆ ಕನ್ನಡದ ಕಾದಂಬರಿಯನ್ನು ತಂದುಕೊಟ್ಟು, ಅವರ ಬಲವಂತಕ್ಕೆ ರೈಲಿನಲ್ಲಿ ಪ್ರಯಾಣಿಸುವಾಗ ತಾವು ಓದಿ ಕಣ್ಣು ತೇವ ಮಾಡಿಕೊಂಡು, ಹೃದಯ ಮಿಡಿಸಿಕೊಂಡು ಓದಿದ ಪುಸ್ತಕವೇ ಅ.ನ.ಕೃ.ರವರ ‘ಸಂಧ್ಯಾರಾಗ’ ಶುಭ ಮುಹೂರ್ತದಲ್ಲಿ ಕನ್ನಡದ ದೀಕ್ಷೆ ಸ್ವೀಕರಿಸಿದರು ಕನ್ನಡದಲ್ಲಿ  ಬರೆಯಲು ತೊಡಗಿದರು. ಚಿಕ್ಕ ಕಥೆ, ಪ್ರಹಸನ, ಏಕಾಂಕ ನಾಟಕಗಳನ್ನು  ಪ್ರಕಟಿಸುವುದರ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಬೀchiಯವರು ಪುಸ್ತಕ ರೂಪದಲ್ಲಿ ಪ್ರಕಟಿಸಿದ ಮೊದಲ ಕೃತಿ ರೇಡಿಯೋ ನಾಟಕಗಳು (೧೯೪೬). ಮಾತ್ರೆಗಳು ಇವರ ಎರಡನೇ ಕೃತಿ. ಈ ಕೃತಿಗೆ ಮುನ್ನುಡಿ ಬರೆದು ಬೆನ್ನು ತಟ್ಟಿದವರು ಶಂಬಾ ಜೋಶಿಯವರು. ಹಾಸ್ಯ, ವಿಡಂಬನೆಗಳಿಗೆ ಹೆಸರಾದ ಬೀchiಯವರು ತಮ್ಮ ಬರಹಗಳಲ್ಲಿ ವೈಚಾರಿಕತೆಗೆ ಒತ್ತು ನೀಡಿದರು. ಅ.ನ.ಕೃ.ರವರು ಮುನ್ನುಡಿಯ ಮೊಟ್ಟಮೊದಲ ಕಾದಂಬರಿ ‘ದಾಸಕೂಟ’ ೧೯೫೦ರಲ್ಲಿ ಪ್ರಕಟ. ಇವರು ರಚಿಸಿದ ಕೃತಿಗಳು-ಸತೀಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ದೇವನ ಹೆಂಡ, ಹುಲಿಯ ಬೆನ್ನ ಮೇಲಿಂದ, ಬಂಗಾರದ ಕತ್ತೆ, ಆರಿದ ಚಹಾ, ಲೇವಡಿ ಟೈಪಿಸ್ಟ್, ನಂಬರ್ ಐವತ್ತೈದು, ಲಕ್ಷ್ಮೀಪೂಜೆ, ಬಿತ್ತಿದ್ದೇ ಬೇವು ಮುಂತಾದ ೩೫ಕ್ಕೂ ಹೆಚ್ಚು ಕಾದಂಬರಿಗಳು ; ತಿಂಮನ ತಲೆ, ಬೆಳ್ಳಿ ತಿಂಮ ನೂರೆಂಟು ಹೇಳಿದ, ಹುಚ್ಚು ಹುರುಳು, ಚಿನ್ನದ ಕಸ, ಕನ್ನಡ ಎಮ್ಮೆ, ಆಗಿಷ್ಟು-ಈಗಿಷ್ಟು, ಮಹಾಯುದ್ಧ, ಸಾಹುಕಾರ ಸುಬ್ಬಮ್ಮ, ಮಾತನಾಡುವ ದೇವರುಗಳು ಮೊದಲಾದ ನಗೆಬರಹಗಳು, ಏಕಾಂಕ ನಾಟಕಗಳು, ರೇಡಿಯೋ ನಾಟಕಗಳು ಸೇರಿ ೬೦ಕ್ಕೂ ಹೆಚ್ಚು ಕೃತಿ ಪ್ರಕಟಿತ. ಸುಧಾ ಪತ್ರಿಕೆ ಆರಂಭಗೊಂಡಾಗ ‘ಉತ್ತರ ಭೂಪ’ ಗುಪ್ತ ನಾಮದಲ್ಲಿ  ಪ್ರಶ್ನೋತ್ತರ ನಡೆಸಿ ‘ಉತ್ತರ ಭೂಪ’ ಕೃತಿ ಪ್ರಕಟಿತ. ‘ನನ್ನ ಭಯಾಗ್ರಫಿ’ ಇವರ ಆತ್ಮಕಥೆ. ಇವರ ಹಲವಾರು ಕೃತಿಗಳು ಇತರ ಭಾರತೀಯ ಭಾಷೆಗಳಿಗೂ ಇಂಗ್ಲಿಷಿಗೂ ಅನುವಾದಗೊಂಡಿವೆ. ತಿಂಮನ ತಲೆ ಕೃತಿಗೆ ಮದರಾಸು ಸರಕಾರದ ಪ್ರಶಸ್ತಿ ಮತ್ತು ಚಿನ್ನದ ಕಸ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು ದೊರೆತಿವೆ.   ಇದೇ ದಿನ ಹುಟ್ಟಿದ ಸಾಹಿತಿ : ಕೈವಾರ ಗೋಪಿನಾಥ್ – ೧೯೪೩ ಸಿ.ವಿ. ರಾಜಗೋಪಾಲ್ – ೧೯೨೨-೫.೪.೦೫

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top