Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಬೆಂಗಳೂರು ಎಸ್. ಮುಕುಂದ್ – ಕಣಜ

ಬೆಂಗಳೂರು ಎಸ್. ಮುಕುಂದ್

Home/Birthday/ಬೆಂಗಳೂರು ಎಸ್. ಮುಕುಂದ್
Loading Events
This event has passed.

೩೧.೦೧.೧೯೩೮ ರಾಗ ಸಂಯೋಜಕ, ಸಂಗೀತಜ್ಞರಾದ ಮುಕುಂದ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ರೆವಿನ್ಯೂ ಕಮೀಷನರಾಗಿದ್ದ ಶ್ರೀನಿವಾಸನ್, ತಾಯಿ ಕನ್ನಡ ಹಾಗೂ ತಮಿಳು ಲೇಖಕಿ ಜಯಲಕ್ಷ್ಮೀ ಶ್ರೀನಿವಾಸನ್. ಓದಿದ್ದು ಬಿ.ಎಸ್ಸಿ. ಆದರೆ ಸಂಗೀತದ ಮನೆತನದ ಬಳುವಳಿಯಿಂದಾಗಿ ನಾಲ್ಕನೆಯ ವಯಸ್ಸಿನಲ್ಲೇ ಹಲವು ರಾಗಗಳನ್ನು ಸುಲಭವಾಗಿ ಹಾಡಬಲ್ಲ ಪರಿಣತಿ. ಆರನೆಯ ವಯಸ್ಸಿನಲ್ಲಿ ಗಾಯನ ಸಮಾಜದ ವೇದಿಕೆ ಏರಿ ಪುರಂದರ ದಾಸರು, ತ್ಯಾಗರಾಜರ ಆರಾಧನೆ ಮಹೋತ್ಸವದಲ್ಲಿ ಆಲಾಪನೆ ಮಾಡಿ, ಕೀರ್ತನೆಗಳನ್ನು ಹಾಡಿ ಸಂಗೀತಗಾರರು, ಸಂಗೀತ ಪ್ರೇಮಿಗಳಿಂದ ಪಡೆದ ಮೆಚ್ಚುಗೆ. ತಮ್ಮ ೧೩ನೆ ವಯಸ್ಸಿನಲ್ಲಿ ರಾಗಮಾಲಾ ಚಿತ್ರ ಎಂಬ ೭೨ ರಾಗಗಳ ಮೇಳ ಕರ್ತರಾಗ ನಕ್ಷೆಯನ್ನು ರಚಿಸಿ, ಹಾಡುಗಾರರಿಗೆ ಹಾಡಲು ಮಾಡಿದ ಮಹದುಪಕಾರ. ಈ ನಕ್ಷೆಯ ಅನುಕೂಲವೆಂದರೆ ಯಾವುದೇ ರಾಗವನ್ನು ಕ್ರಮ ಪಲ್ಲಟ ಮಾಡಿ ಮತ್ತೊಂದು ರಾಗಕ್ಕೆ ಹಾಡಲು ಅನುವು ಮಾಡಿಕೊಡುವುದೇ ಇದರ ವೈಶಿಷ್ಟ (Permutation Combination). ಸಂಸ್ಕೃತ, ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಯ ಹಾಡುಗಳು ಸೇರಿ ಸುಮಾರು ಮೂರು ಸಾವಿರ ಹಾಡುಗಳಿಗೆ ಸ್ವರ ಸಂಯೋಜನೆ. ನೂರಾರು ಉಪನ್ಯಾಸಗಳು, ಹಲವಾರು ಕೀರ್ತನೆಗಳ ರಚನೆ. ಹಲವಾರು ನೃತ್ಯ ರೂಪಕಗಳ ರಚನೆ. ಬುದ್ಧ ಚರಿತವನ್ನು ಲೀಲಾ ರಾಮಚಂದ್ರನ್; ಶ್ರೀಕೃಷ್ಣ ಪಾರಿಜಾತವನ್ನು ಲಲಿತಾ ಶ್ರೀನಿವಾಸನ್ ಮತ್ತು ಶಾರದಾರುದ್ರ; ಆಂಡಾಳ್ ಕಲ್ಯಾಣ ಮತ್ತು ಹಿಮ ಶ್ವೇತವನ್ನು ಪದ್ಮಿನಿ ರಾಮಚಂದ್ರನ್; ರುಕ್ಮಿಣಿ ಪರಿಣಯವನ್ನು ಲಲಿತಾ ದೊರೈ; ಅಷ್ಟರಾಗಮಾಲಿಕೆ ವರ್ಣನೆಯನ್ನು ಯು.ಎಸ್. ಕೃಷ್ಣರಾವ್, ಚಂದ್ರಭಾಗಾದೇವಿ ಮುಂತಾದ ನಾಟ್ಯ ಭೂಷಣರು ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿ ಮುಕುಂದರ ರಚನೆಗಳಿಗೆ ಕೀರ್ತಿ ತಂದವರು. ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತವನ್ನು ತುಲನಾತ್ಮಕವಾಗಿ ವಿವೇಚಿಸಿ ಕೃತಿ ರಚನೆ. ಮದರಾಸಿನ ರಾಮಾನುಜ ಅಯ್ಯಂಗಾರ್, ಪ್ರೊ. ಸಾಂಬಶಿವಮೂರ್ತಿ ಮುಂತಾದ ಸಂಗೀತಜ್ಞರಿಂದ ಪ್ರಶಂಸೆ. ಪುರಂದರ, ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರು, ಶಾಮಶಾಸ್ತ್ರಿಗಳ ಕೀರ್ತನೆಗಳಿಗೆ ರಾಗ ಸಂಯೋಜನೆ, ಪುಣೆ ಮಾಕ್ಸ್‌ಮುಲ್ಲರ್ ಭವನ, ಸಿಮ್ಲಾ, ಬೆಂಗಳೂರಿನ ಗಾಯನ ಸಮಾಜ, ಗಾನಕಲಾ ಪರಿಷತ್ ಸಮ್ಮೇಳನಗಳಲ್ಲಿ ಭಾಗಿ.   ಇದೇ ದಿನ ಹುಟ್ಟಿದ ಕಲಾವಿದರು : ಎಚ್.ಕೆ. ಸೂರ್ಯನಾರಾಯಣ – ೧೯೩೪ ಪರಶುರಾಮ್ ಎನ್.ವಿ. – ೧೯೬೬

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top