ಭಾರತೀಸುತ

Home/Birthday/ಭಾರತೀಸುತ
Loading Events
This event has passed.

೧೫-೫-೧೯೧೫ ೪-೪-೧೯೭೬ ಹಳ್ಳಿಯ ಪರಿಸರದ ಹಿನ್ನೆಲೆಯ ಕಾದಂಬರಿಕಾರ ಶಾನಭಾಗ ರಾಮಯ್ಯ ನಾರಾಯಣರಾವ್ (ಭಾರತೀಸುತ) ರವರು ಹುಟ್ಟಿದ್ದು ಮಡಿಕೇರಿಯ ಬಳಿಯ ಬಿಳಿಗೇರಿ ಗ್ರಾಮದಲ್ಲಿ. ತಂದೆ ರಾಮಯ್ಯ, ತಾಯಿ ಸುಬ್ಬಮ್ಮ. ಏಳನೆಯ ತರಗತಿ ಓದುತ್ತಿದ್ದಾಗಲೇ ತಂದೆಯ ಪ್ರೀತಿಯಿಂದ ವಂಚಿತರು. ಪ್ರೌಢಶಾಲೆ ವ್ಯಾಸಂಗ ಮಾಡುವಾಗ ಪಂಜೆಯವರ ಶಿಷ್ಯರಾಗಿ ಪಡೆದ ಸಾಹಿತ್ಯ ಸಂಸ್ಕಾರ. ಸ್ವಾತಂತ್ರ್ಯ ಚಳವಳಿ ಕಾವಿನಿಂದ ಓದಿಗೆ ತಿಲಾಂಜಲಿ. ಕಣ್ಣಾನೂರು ಹಾಗೂ ತಿರುಚನಾಪಳ್ಳಿ ಜೈಲಿನಲ್ಲಿದ್ದಾಗ ಗಾಂ ತತ್ತ್ವಗಳನ್ನು ಮೈಗೂಡಿಸಿಕೊಂಡರು. ಸತ್ಯಾಗ್ರಹಿಯಾದರೂ ರಾಜಕೀಯ ವ್ಯಕ್ತಿಯಾಗಲಿಲ್ಲ. ಬಿಡುಗಡೆಯ ನಂತರ ಕೆಲಕಾಲ ಕಾಫಿ ಎಸ್ಟೇಟಿನಲ್ಲಿ ಗುಮಾಸ್ತೆ ಕೆಲಸ. ೧೯೪೨ರಲ್ಲಿ ಶಾಲಾ ಶಿಕ್ಷಕರಾಗಿ ನೇಮಕ. ೧೯೪೫ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವಿ. ೧೯೭೩ರವರೆಗೂ ಪ್ರೌಢಶಾಲೆಯಲ್ಲಿ  ಕನ್ನಡ ಪಂಡಿತರಾಗಿ ಸೇವೆ. ಇವರ ಕಾದಂಬರಿಗಳಲ್ಲಿ ದಾಂಪತ್ಯ ಜೀವನದ ಸಮಸ್ಯೆಗಳ ಆಳವಾದ ವಿವೇಚನೆ, ಹೆಣ್ಣಿನ ಬಗೆಗೆ ಅನುಕಂಪೆಯ ದೃಷ್ಟಿ  ಪ್ರಮುಖ ಅಂಶಗಳು. ಎಡಕಲ್ಲು ಗುಡ್ಡದ ಮೇಲೆ ಮತ್ತು ಸಂತಾನ ಭಿಕ್ಷೆ ಮಾನವೀಯ ದೃಷ್ಟಿ ಕಾದಂಬರಿಗಳು. ೩೦ಕ್ಕೂ ಹೆಚ್ಚು ಕಾದಂಬರಿ ರಚಿತ. ಹುಲಿ ಹಾಲಿನ ಮೇವು, ಗಿರಿಕನ್ನಿಕೆ, ಬಯಲುದಾರಿ, ಇಳಿದು ಬಾ ತಾಯಿ, ವಕ್ರರೇಖೆ, ಬೆಳಕಿನೆಡೆಗೆ, ಬೆಂಕಿಯ ಮಳೆ, ಅಮಾತ್ಯ ನಂದಿನಿ, ಗಿಳಿಯು ಪಂಜರದೊಳಿಲ್ಲ, ಸಾಧನ ಕುಟೀರ, ಹಾವಿನ ಹುತ್ತ, ದೊರೆ ಮಗಳು ಮುಂತಾದುವು. ಹುಲಿಬೋನು, ಗಿರಿಕನ್ನಿಕೆ, ಗಿಳಿಯು ಪಂಜರದೊಳಿಲ್ಲ ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕೃತ ಕಾದಂಬರಿಗಳು. ಬಯಲು ದಾರಿ, ಹುಲಿ ಹಾಲಿನ ಮೇವು, ಎಡಕಲ್ಲು ಗುಡ್ಡದ ಮೇಲೆ ಚಲನಚಿತ್ರಗಳಾಗಿದೆ. ಇವರ ಮಿನಿಕಾದಂಬರಿ ವಲ್ಮಿಕ ಬಹಳಷ್ಟು  ಖ್ಯಾತಿ ತಂದ ಕೃತಿ. ೨೫ಕ್ಕೂ ಹೆಚ್ಚು ಶಿಶು ಸಾಹಿತ್ಯ ರಚಿಸಿ ಮಕ್ಕಳ ಮನಸ್ಸನ್ನು ಗೆದ್ದಿದ್ದಾರೆ. ವಯಸ್ಕರ ಶಿಕ್ಷಣ ಬೆಳವಣಿಗೆಗೂ ಹಲವಾರು ಕೃತಿ ರಚನೆ. ರಾಷ್ಟ್ರಬಂಧು, ಗುರುವಾಣಿ ಎಂಬ ಪತ್ರಿಕೆಗಳನ್ನು ಕೆಲಕಾಲ ನಡೆಸಿದ ಅನುಭವ, ಪ್ರಶಸ್ತಿಗಾಗಿ ಹಂಬಲಿಸದಿದ್ದರೂ ರಾಜ್ಯ ಸಾಹಿತ್ಯ ಅಕಾಡಮಿ ೧೯೭೬ರಲ್ಲಿ ಮರಣೋತ್ತರ ಪ್ರಶಸ್ತಿ ಘೋಷಣೆ. ೧೯೭೬ರಲ್ಲಿ ಇವರ ನಿಧನಾ ನಂತರ ಸಾಹಿತ್ಯಪ್ರಿಯರು, ೧೯೭೭ರಲ್ಲಿ ಅರ್ಪಿಸಿದ್ದು ಸಂಸ್ಕರಣ ಗ್ರಂಥ ‘ಬ್ರಹ್ಮಗಿರಿ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಅಮ್ಮೆಂಬಳ ಶಂಕರ ನಾರಾಯಣ ನಾವಡ – ೧೯೧೬ ಡಾ. ಸಿ. ಹೊಸಬೆಟ್ಟು – ೧೯೩೨-೨.೧೧.೨೦೦೬ ರಾಮಕೃಷ್ಣ ಹಂದೆ – ೧೯೨೫ ಅಹೋಬಲ ಶಂಕರ – ೧೯೧೩-೨.೯.೯೭ ಬಿ.ವಿ. ವೈಕುಂಠರಾಜು – ೧೯೩೭ ಡಿ.ಎ. ಶಂಕರ್ – ೧೯೩೭

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top