
- This event has passed.
ಮಡಿಕೇರಿ ನಾಗೇಂದ್ರ
September 16
೧೬.೦೯.೧೯೫೦ ೦೮.೦೮.೨೦೦೫ ಪ್ರಖ್ಯಾತ ಗಮಕ, ಸಂಗೀತಗಾರರ ಮನೆತನದಿಂದ ಬಂದ ನಾಗೇಂದ್ರರವರು ಹುಟ್ಟಿದ್ದು ಮಡಿಕೇರಿಯಲ್ಲಿ. ತಂದೆ ಹೆಸರಾಂತ ಗಮಕಿ ಮೈ.ಶೇ. ಅನಂತಪದ್ಮನಾಭರಾಯರು, ತಾಯಿ ಲಕ್ಮೀದೇವಿ. ಬಿ.ಕಾಂ. ಪದವಿಯ ನಂತರ ಕೆನರಾ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿ ಉನ್ನತ ಹುದ್ದೆಗೇರಿ ಪಡೆದ ಸ್ವಯಂನಿವೃತ್ತಿ. ತಂದೆಯಿಂದಲೇ ಗಮಕ ಹಾಗೂ ಸುಗಮ ಸಂಗೀತದ ಮೊದಲ ಪಾಠ. ಶಿವಮೊಗ್ಗದಲ್ಲಿದ್ದಾಗ ಪ್ರಖ್ಯಾತ ಸುಗಮ ಸಂಗೀತಗಾರರಾದ ಎಂ.ಪ್ರಭಾಕರ್ ಮತ್ತು ಶಿವಮೊಗ್ಗ ಸುಬ್ಬಣ್ಣ ಇವರ ಗಾಯನಕ್ಕೆ ಮರುಳಾಗಿ ಸುಗಮ ಸಂಗೀತದ ಕಡೆ ಬೆಳೆದ ಒಲವು. ಬೆಂಗಳೂರಿನಲ್ಲಿ ಕೆಲಕಾಲ ಬಳ್ಳಾರಿ ಎಂ.ಶೇಷಗಿರಿ ಆಚಾರ್ಯರವರಲ್ಲಿ ಸಂಗೀತ ಶಿಕ್ಷಣ. ಬೆಂಗಳೂರಿನ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಹಲವಾರು ಬಾರಿ ಭಕ್ತಿಗೀತೆಗಳ ಪ್ರಸಾರ. ೧೯೭೨ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ತಂಡದ ಸದಸ್ಯರಾಗಿ ದೆಹಲಿಯಲ್ಲಿ ನೀಡಿದ ಕಾರ್ಯಕ್ರಮ. ಭಿಲಾಯ್, ನಾಗಪುರ, ಕೋಲ್ಕತ್ತಗಳಲ್ಲೂ ನಡೆಸಿಕೊಟ್ಟ ಕಾರ್ಯಕ್ರಮ. ಕೆನರಾ ಬ್ಯಾಂಕಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಂಚೂಣಿಗಾಯಕರು. ಮೈಸೂರು, ಮಡಿಕೇರಿ, ಕುಶಲನಗರ ಮುಂತಾದೆಡೆ ಹಲವಾರು ಕಾರ್ಯಕ್ರಮಗಳು. ಮೈಸೂರಿನ ಗಾನ ಭಾರತಿ, ಬೆಂಗಳೂರಿನ ಕರ್ನಾಟಕ ಗಾನಕಲಾ ಪರಿಷತ್, ತ್ಯಾಗರಾಜ ಗಾನಸಭಾ ಮುಂತಾದೆಡೆ ಸಂಗೀತ ಕಚೇರಿಗಳು. ದಾಸ ಸಾಹಿತ್ಯ ಹಾಗೂ ಸುಗಮ ಸಂಗೀತದ ಪ್ರಾತ್ಯಕ್ಷಿಕೆ. ಭಕ್ತಿಗೀತೆಗಳು ಮತ್ತು ಡಿ.ವಿ.ಜಿ.ಯವರ ಅನ್ತ: ಪುರಗೀತೆಗಳ ಧ್ವನಿಸುರಳಿ ಬಿಡುಗಡೆ ಆಕಾಶವಾಣಿಯ ಬಿ ಹೈ ಶ್ರೇಣಿ ಕಲಾವಿದರು, ಮೈಸೂರಿನ ಸಾಂಸ್ಕೃತಿಕ ವೇದಿಕೆಯ ಸ್ಥಾಪಕ ಸದಸ್ಯರಲ್ಲೊಬ್ಬರು. ‘ಇಂಚರ’ ಸಂಗೀತ ಕಲಾಶಾಲೆ ಪ್ರಾರಂಭಿಸಿ ಅನೇಕ ಶಿಷ್ಯರಿಗೆ ನೀಡಿದ ಸಂಗೀತ ಶಿಕ್ಷಣ. ‘ದಾಸ ಸಂಮೋಹ’ ಧ್ವನಿಸುರಳಿ ಬಿಡುಗಡೆ ಸಂದರ್ಭದಲ್ಲಿ ಉತ್ತರಾದಿ ಮಠಾಧೀಶರಿಂದ ಸನ್ಮಾನ. ಇದೇ ದಿನ ಹುಟ್ಟಿದ ಕಲಾವಿದ ಕೃಷ್ಣಮೂರ್ತಿ ಎನ್. -೧೯೨೯
* * *