ಮತ್ತೂರು ಲಕ್ಷ್ಮೀ ಕೇಶವ

Home/Birthday/ಮತ್ತೂರು ಲಕ್ಷ್ಮೀ ಕೇಶವ
Loading Events
This event has passed.

೨೦.೦೬.೧೯೫೨ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಎರಡರಲ್ಲೂ ಪ್ರತಿಭಾನ್ವಿತ ಗಾಯಕರೆನಿಸಿರುವ ಲಕ್ಷ್ಮಿ ಕೇಶವ ರವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮದಲ್ಲಿ. ತಂದೆ ಕೆ. ಸೂರ್ಯನಾರಾಯಣ ಅವಧಾನಿಗಳು ತಾಯಿ ಸುಂದರಮ್ಮ. ಬಾಲ್ಯದಿಂದಲೂ ಸಂಗೀತದಲ್ಲಿ ಬೆಳೆದ ಅಭಿರುಚಿ. ಹಳ್ಳಿಯಲ್ಲಿ ನಡೆಯುತ್ತಿದ್ದ ಭಜನೆ, ಪುರಾಣ, ಗಮಕ, ಕಾರ್ಯಕ್ರಮಗಳ ಪ್ರಭಾವ. ಎಚ್.ಕೆ.ಸೂರ್ಯನಾರಾಯಣ ಅವಧಾನಿಗಳು, ಎಚ್.ಆರ್‌. ಕೇಶವಮೂರ್ತಿಯವರಲ್ಲಿ ಪ್ರಾರಂಭಿಕ ಶಿಕ್ಷಣ. ನಂತರ ವಿ. ಅನಂತ್‌, ವಿ. ಗೋಪಾಲ್, ಆರ್‌.ಆರ್‌.ಕೇಶವಮೂರ್ತಿಯವರಲ್ಲಿ ಉನ್ನತ ಸಂಗೀತ ಶಿಕ್ಷಣ. ಉದ್ಯೋಗಕ್ಕೆ ಸೇರಿದ್ದು ವಾಣಿ ವಿದ್ಯಾಕೇಂದ್ರ. ಆಕಾಶವಾಣಿಯ ಮೂಲಕ ಭಾರತದಾದ್ಯಂತ ನಡೆಸಿಕೊಟ್ಟ ಸಂಗೀತ, ಸಮೂಹ ಗಾಯನ ಕಾರ್ಯಕ್ರಮಗಳ ನಿರ್ದೇಶನ. ರಷ್ಯ ಉತ್ಸವ, ವಿಶ್ವಕನ್ನಡ ಸಮ್ಮೇಳನ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಮುಂತಾದೆಡೆಗಳಲ್ಲಿ ಸಮೂಹ ಗಾಯನ ನಿರ್ದೇಶನ. ರಾಷ್ಟ್ರೀಯ ಮಟ್ಟದಲ್ಲಿ ಆಕಾಶವಾಣಿ ಆಯೋಜಿಸಿದ ಸಮೂಹ ಗಾಯನ ಸ್ಪರ್ಧೆಯಲ್ಲಿ ಹಲವಾರು ಬಾರಿ ಪಡೆದ ಬಹುಮಾನಗಳು. ಹಂಪಿ ಉತ್ಸವ, ಬಿಜಾಪುರದ ನವರಸಪುರ ಉತ್ಸವ, ಮೈಸೂರು ಕಲಾ ಭವನ, ಕನ್ನಡ ರಾಜ್ಯೋತ್ಸವ, ವಿಧಾನಸೌಧದ ಮುಂದೆ ೮೦೦ ವಿದ್ಯಾರ್ಥಿಗಳನ್ನು ಕಲೆಹಾಕಿ ನಿರ್ದೇಶಿಸಿದ ಬೃಹತ್ ಸಮೂಹ ಗಾಯನ, ಇಂದಿರಾಗಾಂಧಿ, ನೀಲಂ ಸಂಜೀವರೆಡ್ಡಿ, ಜೈಲ್ ಸಿಂಗ್, ರಾಮಕೃಷ್ಣ ಹೆಗಡೆ, ಪಿ.ವಿ. ನರಸಿಂಹರಾವ್, ಐ.ಕೆ.ಗುಜ್ರಾಲ್, ರಾಜ್ಯಪಾಲರುಗಳಾದ ವೆಂಕಟಸುಬ್ಬಯ್ಯ, ರಮಾದೇವಿ, ಚತುರ್ವೇದಿ ಇವರ ಮುಂದೆ ನಿರ್ದೇಶಿಸಿದ ಸಮೂಹ ಗಾಯನ ಕಾರ್ಯಕ್ರಮ. ಅನನ್ಯ ಸಾಂಸ್ಕೃತಿಕ ಸಂಸ್ಥೆ, ಲಂಡನ್ನಿನ ಭಾರತೀಯ ವಿದ್ಯಾಭವನ, ಎನ್.ಸಿ.ಇ.ಆರ್‌.ಟಿ. ನವದೆಹಲಿ ಮುಂತಾದೆಡೆ ನಡೆಸಿಕೊಟ್ಟ ಸುಗಮ ಸಂಗೀತ ಕಾರ‍್ಯಾಗಾರಗಳು. ಆಕಾಶವಾಣಿಯ ಆಡಿಷನ್ ಬೋರ್ಡಿನ ಸದಸ್ಯರಾಗಿ ಸಲ್ಲಿಸಿದ ಸೇವೆ. ರಾಜ್ಯೋತ್ಸವ ಪ್ರಶಸ್ತಿಯಲ್ಲದೆ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರು.   ಇದೇ ದಿನ ಹುಟ್ಟಿದ ಕಲಾವಿದರು ಟಿ.ವಿ.ಗೋಪಿನಾಥ್‌ದಾಸರು – ೧೯೧೪ ಮಲ್ಪೆ ರಾಮದಾಸ ಸಾಮಗ – ೧೯೨೬ ನಂಜಪ್ಪ ಕೆ. – ೧೯೩೯ ಸತ್ಯನಾರಾಯಣ. ಎ. ವಿ. – ೧೯೪೮ ಕೃಷ್ಣಮೂರ್ತಿ ಎಚ್.ಆರ್‌. – ೧೯೬೨ ಪರಿಮಳಾ ಕಲಾವಂತ – ೧೯೬೨

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top