Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056
ಮನು (ಪಿ. ನರಸಿಂಹರಂಗನ್) – ಕಣಜ
Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಮನು (ಪಿ. ನರಸಿಂಹರಂಗನ್)

Home/Birthday/ಮನು (ಪಿ. ನರಸಿಂಹರಂಗನ್)
Loading Events

೨೭..೧೯೪೬ ೦೮.೧೧.೨೦೧೧ ಓದಿದ ವಿಜ್ಞಾನದ ವಿಷಯಗಳ ಹಿನ್ನೆಲೆಯನ್ನೇ ಮೂಲದ್ರವ್ಯವಾಗಿ ಬಳಸಿಕೊಂಡು ಹಲವಾರು ವೈಜ್ಞಾನಿಕ ಕತೆ, ಕಾದಂಬರಿಗಳನ್ನು ರಚಿಸಿದ ಮನು (ಪೆನುಗೊಂಡೆ ನರಸಿಂಹರಂಗನ್‌) ರವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ ೧೯೪೬ರ ಜುಲೈ೨೭ ರಂದು. ತಂದೆ ಪೆನುಗೊಂಡೆ ದೇಶಿಕಾಚಾರ್ಯರು, ತಾಯಿ ರಂಗನಾಯಕಮ್ಮ. ಪ್ರಾರಂಭಿಕ ಶಿಕ್ಷಣ ಮೇಲುಕೋಟೆಯಲ್ಲಿ. ನಂತರ ಶಾರದಾ ವಿಲಾಸ್‌ ಹೈಸ್ಕೂಲು, ಶಾರದಾವಿಲಾಸ್‌ ಕಾಲೇಜು ಹಾಗೂ ಜಯಚಾಮ ರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜಿನಿಂದ ಪಡದ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಬಿ.ಇ. ಪದವಿ. ಬಾಹ್ಯ ವಿದ್ಯಾರ್ಥಿಯಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ (ಕನ್ನಡ), ಮೈಸೂರು ವಿಶ್ವವಿದ್ಯಾಲಯದಿಂದ ಎಪಿಗ್ರಫಿ ಡಿಪ್ಲೊಮ ಮತ್ತು ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. (ಮನಃಶಾಸ್ತ್ರ) ಪದವಿಗಳು. ಹೀಗೆ ಹಲವಾರು ಕ್ಷೇತ್ರಗಳಲ್ಲಿ ಜ್ಞಾನಾರ್ಜನೆ. ಉದ್ಯೋಗಕ್ಕಾಗಿ ಸೇರಿದ್ದು ಮೈಸೂರಿನ ಪ್ಲಾಸ್ಟಿಕ್‌ ಕಾರ್ಖಾನೆಯಲ್ಲಿ. ನಂತರ ಕೆ.ಜಿ.ಎಫ್‌.ನ ಭಾರತ್‌ ಅರ್ಥ್‌‌ಮೂವರ್ಸ್‌ನಲ್ಲಿ ಸಂಶೋಧನಾ ಎಂಜಿನಿಯರಾಗಿ, ಚೆನ್ನೈನ ಬ್ರೇಕ್ಸ್‌ ಇಂಡಿಯಾ ಲಿಮಿಟೆಡ್‌ನಲ್ಲಿ ಪ್ರೊಡಕ್ಷನ್‌ ಎಂಜನಿಯರಾಗಿ,  ಪುಣೆಯ ಆಟೋಮೊಬೈಲ್‌ ರಿಸರ್ಚ್ ಅಸೋಸಿಯೇಷನ್‌ ಆಫ್‌ ಇಂಡಿಯಾದಲ್ಲಿ ಡೆಪ್ಯುಟಿ ಡೈರೆಕ್ಟರ್ , ಸೀನಿಯರ್ ಡೆಪ್ಯುಟಿ ಡೈರೆಕ್ಟರಾಗಿ, ವೊಲ್ವೊ ಕಂಪನಿಯ ಸಮಾಲೋಚಕರಾಗಿ ಕೆಲಸ ನಿರ್ವಹಿಸಿ ‘ಮಹಾಸಂಪರ್ಕ’ ಕಾದಂಬರಿಯನ್ನು ಬರೆಯಲೆಂದೇ ಸ್ವಯಂ ನಿವೃತ್ತಿ ಪಡೆದ ನಂತರ ಮೈಸೂರಿನಲ್ಲಿ ವಾಸ್ತವ್ಯ. ಮಹಾಸಂಪರ್ಕ ಪ್ರಕಟಣೆಯ ನಂತರ (೨೦೦೨) ಕೆಲವರ್ಷ ಎಚ್‌.ಸಿ.ಎಲ್‌. ಕಂಪನಿಯ ಸಮಾಲೋಚಕರಾಗಿಯೂ ಕಾರ್ಯನಿರ್ವಹಿಸಿದರು. ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ಸಾಹಿತ್ಯದತ್ತ ಒಲವು ಬೆಳೆದು ಪ್ರಜಾವಾಣಿಯ ಬಾಲವಿಹಾರ ಅಂಕಣಕ್ಕೆ ಪದ್ಯಗಳನ್ನೂ ಬರೆಯತೊಡಗಿದರು. ಇದಲ್ಲದೆ ಗೋಕುಲ ಪತ್ರಿಕೆಗೂ ವಿದ್ಯಾರ್ಥಿ ವಿಭಾಗಕ್ಕೆ ಬರೆಯುತ್ತಿದ್ದ ಖಾಯಂ ಲೇಖಕರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬರೆದ ‘ಆನಂದಿ’ ಕತೆಯು ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ ಪಡೆಯಿತು. ಹೀಗೆ ಇವರು ಬರೆದ ಕತೆ, ಕಾದಂಬರಿಗಳು ನಾಡಿನ ಪ್ರಖ್ಯಾತ ವಾರಪತ್ರಿಕೆ, ಮಾಸಪತ್ರಿಕೆಗಳಾದ ಸುಧಾ, ತರಂಗ, ಕರ್ಮವೀರ, ಮಂಗಳ, ಮಲ್ಲಿಗೆ ಗೋಕುಲ, ತುಷಾರ, ಮಯೂರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಾಹಿತ್ಯಕೂಡಾ ಸಾಮಾಜಿಕವಾಗಿ ಹಾಗೂ ವ್ಯಕ್ತಿಗೆ ಹೇಗೆ ಪರಿವರ್ತನೆಗೆ ದಾರಿಮಾಡಬಲ್ಲದೆಂಬುದಕ್ಕೆ ಉದಾಹರಣೆ ಎಂದರೆ ‘ದ್ವಂದ್ವ’ ಕಾದಂಬರಿಯು ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡನಂತರ. ಕಾದಂಬರಿಯು ಅಮೆರಿಕಾದಲ್ಲಿ ಭಾರತೀಯರು ಅನುಭವಿಸುತ್ತಿರುವ ಕಷ್ಟಕೋಟಲೆಗಳು, ತೊಡಕು-ತೊಂದರೆಗಳು ಎಷ್ಟೆಂಬುದರ ವರ್ಣನೆಯಿಂದ ಕೂಡಿದ್ದು, ಉದ್ಯೋಗಕ್ಕಾಗಿ ಅಮೆರಿಕಾಗೆ ತೆರಳಲು ಸರ್ವ ಸಿದ್ಧತೆಮಾಡಿಕೊಂಡಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಇದನ್ನು ಓದಿ, ಮನಃ ಪರಿವರ್ತನೆಯಾಗಿ ತನ್ನ ಅಮೆರಿಕ ಪ್ರವಾಸವನ್ನೇ ರದ್ದುಪಡಿಸಿದ್ದ. ಇವರು ಬರೆದ ೧೭ ಕಾದಂಬರಿಗಳು, ೩ ರೂಪಾಂತರ, ೮ ಮಿನಿ ಕಾದಂಬರಿಗಳು, ಪ್ರತಿಯೊಂದೂ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿಯೇ ಪ್ರಕಟಗೊಂಡಿರುವುದೇ ವಿಶೇಷ. ಬಹುಶಃ ಬರೆದ ಕಾದಂಬರಿಗಳೆಲ್ಲವೂ ಪತ್ರಿಕೆಯ ಮುಖಾಂತರವೇ ಓದುಗರಿಗೆ ಮೊದಲು ತಲುಪಿಸಿರುವ ಏಕೈಕ ಕಾದಂಬರಿಕಾರರೆಂದರೆ ಮನು. ೧೯೮೩ರಿಂದ ಪ್ರಾರಂಭವಾಗಿ ೨೦೦೦ದ ವರೆಗೆ ಬರೆದ ಕಾದಂಬರಿಗಳೆಲ್ಲವು ಪತ್ರಿಕೆಗಳ ಕೋರಿಕೆಯ ಮೇಲೆ ಬರೆದ ಕಾದಂಬರಿಗಳೇ ಆಗಿದ್ದು ಬಹುಬೇಡಿಕೆಯ ಕಾದಂಬರಿಕಾರರೆನಿಸಿದ್ದರು. ಯಾವುದೇ ಕಾದಂಬರಿ ಬರೆಯುವಾಗಲೂ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದು ಅದರಲ್ಲೂ ವೈಜ್ಞಾನಿಕ ಕಾದಂಬರಿಗಳನ್ನು ಬರೆಯುವಾಗ ಸಾಕಷ್ಟು ಸಿದ್ಧತೆ ನಡೆಸಿ ವಿಪುಲ ಮಾಹಿತಿ ಸಂಗ್ರಹಿಸಿ, ವಸ್ತುನಿಷ್ಠವಾಗಿ ಸನ್ನಿವೇಶಗಳಿಗೆ ತಕ್ಕಂತೆ ಪಾತ್ರಗಳನ್ನು ರಚಿಸಿ, ವೈಜ್ಞಾನಿಕ ರೋಚಕತೆಯನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತಿದ್ದರು. ಹೀಗೆ ಬರೆದ ಕಾದಂಬರಿಗಳಲ್ಲಿ ಪರ್ವತಾರೋಹಿ ಅನುಭವದ ‘ಹಿಮಜ್ವಾಲೆ’, ಕಾರ್ಪೊರೇಟ್‌ ಪ್ರಪಂಚದ ಹೋರಾಟದ ‘ಚಕ್ರ’, ಏಯ್ಡ್ಸ್ ಹಿನ್ನೆಲೆಯ ‘ಐರಾವತ’, ಅಣ್ವಸ್ತ್ರ ನಿಶ್ಶಸ್ತ್ರೀಕರಣದ ವಸ್ತುವನ್ನೊಳಗೊಂಡ ‘ಮಹಾಪ್ರಸ್ಥಾನ; ಸ್ಟೀಫನ್ ಹಾಕಿನ್ಸ್‌ ಜೀವನವನ್ನಾಧರಿಸಿದ ‘ಮುಸುಕಿದೀಮಬ್ಬಿನಲಿ’, ಆಕಾಶಯಾನದ ‘ಸುದರ್ಶನಚಕ್ರ’, ಇವೆಲ್ಲವೂ ಸೊಗಸಾದ ಕಥಾನಿರೂಪಣೆ, ಕುತೂಹಲ ಹುಟ್ಟಿಸಿ ತಕ್ಷಣ ಪಡೆಯುವ ತಿರುವುಗಳು ಓದುಗರನ್ನು ರೋಮಾಂಚನಗೊಳಿಸುತ್ತಿದ್ದುವು. ಇವಲ್ಲದೆ ಅಯನ, ನೇಪಥ್ಯ, ಖೆಡ್ಡ, ಗ್ರಸ್ತ, ಸಂಚು ಮುಂತಾದ ಒಟ್ಟು ೧೭ ಕಾದಂಬರಿಗಳು; ಕನಕಾಂಬರ, ಕಾರಸ್ಥಾನ, ಜೀವಚ್ಛವ ಮೊದಲಾದ ರೂಪಾಂತರ ಕಾದಂಬರಿಗಳು; ಆಷಾಢದ ಮೋಡಗಳು, ಅಂಕುಶ, ಕಾಳಗ, ಸಂಧಿಕಾಲ ಮೊದಲಾದ ೮ ಮಿನಿಕಾದಂಬರಿಗಳು ಪ್ರಕಟಗೊಂಡಿವೆ. ಇವುಗಳಲ್ಲಿ ೧೯೮೧ರಲ್ಲಿ, ನಿರ್ದೇಶಕರಾದ ಜೋಸೈಮನ್‌ರವರು ಚಕ್ರವ್ಯೂಹ ಕಾದಂಬರಿ ಆಧರಿಸಿ ‘ಸಾಹಸಸಿಂಹ’ ಎಂಬ ಚಲನಚಿತ್ರವನ್ನೂ ನಿರ್ದೇಶಿಸಿದ್ದರೆ, ೧೯೮೮ ರಲ್ಲಿ ನಾಗಾಭರಣರವರು ಅಯನ ಕಾದಂಬರಿಯನ್ನಾಧರಿಸಿ ಆಸ್ಫೋಟ ಎಂಬ ಚಲನಚಿತ್ರವನ್ನು ನಿರ್ದೇಶಿಸಿದ್ದರು. ಇದಕ್ಕೆ ಮನುರವರಿಗೆ ರಾಜ್ಯ ಸರಕಾರದ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿಯೂ ದೊರೆತಿದೆ. ಕನ್ನಡ ಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭ ವಿಭಾಗಕ್ಕಾಗಿ ‘ದೃಷ್ಟಿ’ ಮತ್ತು ಸುಧಾ ವಾರಪತ್ರಿಕೆಗಾಗಿ ‘ವಿಚಾರ ಕಿರಣ’ ಎಂಬ ಅಂಕಣಗಳನ್ನು ನಿರ್ವಹಿಸಿದ್ದಾರೆ. ಪ್ರಜಾವಾಣಿಯ ವಿಶೇಷಾಂಕಕ್ಕಾಗಿ ಗಾಂಧೀಜಿಯವರ ಬಗ್ಗೆ ಬರೆದ ಕವನ ಅಜ್ಞಾತಪಿತ. ಹಂಬಲ್‌ ಬುಕ್ಸ್‌, ಲಂಡನ್‌ರವರು ಪ್ರಕಟಿಸಿರುವ ಶ್ರೀನಿವಾಸ ಆರ್ಕ್ ರವರ ಗ್ರಂಥವನ್ನು ‘ಆತ್ಮಾನ್ವೇಷಣೆಯ ಸಾಧನೆಗಳು’ ಎಂದು ಭಾಷಾಂತರಿಸಿದ್ದಾರೆ. ಇವರು ಬರೆದ ಜಿ.ವಿ. ದಾಮೋದರನಾಯುಡುರವರ ಜೀವನ ಚರಿತ್ರೆ ‘ಕಸದಿಂದ ರಸ’ ಹಾಗೂ ಇವರದೇ ಸಾಹಿತ್ಯಿಕ ಆತ್ಮಕಥನರೂಪ ‘ಕಥೆಯೊಳಗಿನ ಕಥೆ’ ಯನ್ನು ಭಾರತೀ ಪ್ರಕಾಶನವು ಹೊರತಂದಿದೆ. ಎರಡುನಾಟಕಗಳಾದ ‘೨೦ನೇ ಶತಮಾನದ ಸ್ವರ್ಗ’ ಮತ್ತು ‘ಹೊಟ್ಟೆ ಹೊಕ್ಕ ವಿಧಿ’ ನಾಟಕಗಳು ಗೋಕುಲ ವಿಶೇಷಾಂಕ ಮತ್ತು ಸುಧಾ ಯುಗಾದಿ ವಿಶೇಷಾಂಕಗಳಲ್ಲಿ ಪ್ರಕಟಗೊಂಡಿವೆ. ಇವರು ರಚಿಸಿರುವ ಸುಮಾರು ೫೦ಕ್ಕೂ ಹೆಚ್ಚು ಸಣ್ಣ ಕತೆಗಳು ಆಗಾಗ್ಗೆ ಪ್ರಸ್ತುತ ಸಂದರ್ಭಕ್ಕಾಗಿ ಬರೆದ ಸುಮಾರು ೩೦ ಕ್ಕೂ ಹೆಚ್ಚು ಲೇಖನಗಳು, ಹಾಸ್ಯಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಕ್ಕಳಿಗಾಗಿ ಬರೆದ ಕೃತಿಗಳು – ‘ಮಕ್ಕಳಿಗಾಗಿ ಸಣ್ಣಕಥೆಗಳು’, ‘ಮಹಾಭಾರತದ ನೀತಿ ಕಥೆಗಳು’, ‘ಈಜಿಪ್ತಿನ ಕಥೆಗಳು’ ಮುಂತಾದ ಮೂರು ಸಂಕಲನ’ ಗಳನ್ನು ಹೊರತಂದಿದ್ದಾರೆ. ಗ್ರೀಸ್‌, ಈಜಿಪ್ತ್‌, ಇಟಲಿ, ಸ್ವೀಡನ್‌,ಜರ್ಮನಿ, ಅಮೆರಿಕ, ಆಸ್ಟ್ರೇಲಿಯಾ ದೇಶಗಳನ್ನು ಸುತ್ತಿ ಬಂದು ರಚಿಸಿದ ಪ್ರವಾಸ ಕೃತಿಗಳು ‘ಈಜಿಪ್ತ್ ಪ್ರವಾಸ’ ಹಾಗೂ ‘ಸಮುದ್ರಮಂಥನ’(ಕಾಂಬೋಡಿಯಾ ಪ್ರವಾಸ ಕಥನ). ‘ಸೂರ್ಯಪಾನ’ದ ಬಗ್ಗೆ ಇದ್ದ ಆಸಕ್ತಿಯಿಂದ ವಿಶೇಷ ಅಧ್ಯಯನ ನಡೆಸಿ ಮೈಸೂರು, ಬೆಂಗಳೂರು, ಮಂಗಳೂರು ಮುಂತಾದೆಡೆಗಳಲ್ಲಿ ಉಪನ್ಯಾಸ ನೀಡಿದ್ದಲ್ಲದೆ ಕಿರು ಹೊತ್ತಗೆಯನ್ನೂ ಹೊರ ತಂದಿದ್ದಾರೆ. ಅಳಸಿಂಗಾಚಾರ್ಯರ ವ್ಯಾಸಮಹಾಭಾರತದ ಎಲ್ಲ ಸಂಪುಟಗಳನ್ನೂ ಓದಿ ಗದ್ಯ ರೂಪದಲ್ಲಿ ಸಂಕ್ಷಿಪ್ತವಾಗಿ ಬರೆದ ‘ವ್ಯಾಸ ಮಹಾಭಾರತ’ ಗ್ರಂಥವೂ ಪ್ರಕಟಗೊಂಡಿದೆ. ಹಿಂದಿ, ಸಂಸ್ಕೃತ, ತಮಿಳು, ಕನ್ನಡ, ಇಂಗ್ಲಿಷ್‌ ಭಾಷೆಗಳ ಮೇಲೆ ಹಿಡಿತ ಸಾಧಿಸಿದ್ದು ಸದಾ ಯಾವುದಾದರೊಂದು ಭಾಷೆಯ ಕೃತಿಯನ್ನು ಓದುತ್ತಲೇ ಇದ್ದ ಮನು ರವರು ‘ಮಹಾ ಸಂಪರ್ಕ’ ಕೃತಿ ರಚಿಸಲು ಉತ್ತರ ಭಾರತದ ಹಲವಾರು ರಾಜ್ಯಗಳನ್ನೂ ಸುತ್ತಿ ಬಂದು, ಮಹಾಭಾರತವನ್ನೂ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿರುವುದಲ್ಲದೆ ಅನ್ಯತಾರಾಲೋಕದವರೊಂದಿಗೆ ಭಾರತೀಯರು ಸಾಧಿಸಿದ್ದ ಸಂಪರ್ಕವೇ ಇಲ್ಲಿನ ವಿಚಾರ, ವಸ್ತುವಾಗಿದ್ದು ೯೦೦ ಪುಟಗಳ ಬೃಹತ್‌ ಕಾದಂಬರಿಯು ಎರಡು ಸಂಪುಟಗಳಲ್ಲಿ ಪ್ರಕಟವಾಗಿದೆ. ವೈಜ್ಞಾನಿಕ ಕಾದಂಬರಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ ರಾಜಶೇಖರ ಭೂಸನೂರಮಠ, ಟಿ.ಕೆ. ರಾಮರಾವ್ ರವರಂತೆ ರೋಮಾಂಚನಕಾರಿಯಾದ ವೈಜ್ಞಾನಿಕ ಕಾದಂಬರಿಗಳನ್ನು ನೀಡಿದ ಮನು ರವರು ಓದುಗರನ್ನಗಲಿದ್ದು ೨೦೧೧ ರ ನವಂಬರ್ ೮ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top