ಮಮತಾ. ಜಿ. ಸಾಗರ

Home/Birthday/ಮಮತಾ. ಜಿ. ಸಾಗರ
Loading Events
This event has passed.

೧೯-೧-೧೯೬೬ ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಎನ್. ಗಿರಿರಾಜ್, ತಾಯಿ ಎಸ್. ಶೇಖರಿಬಾಯಿ. ಪಿ.ಯು.ವರೆಗೆ ಓದಿದ್ದು ಸಾಗರದಲ್ಲಿ. ಡಿಗ್ರಿ ಪಡೆದದ್ದು ಬೆಂಗಳೂರಿನಲ್ಲಿ. ಓದಿದ್ದು ಪತ್ರಿಕೋದ್ಯಮ. ಸ್ತ್ರೀವಾದಿ ಸಾಹಿತ್ಯ, ದಲಿತ ಸಾಹಿತ್ಯದಲ್ಲಿ ಆಳವಾದ  ಅಧ್ಯಯನ. ದಿಟ್ಟತನದ ಮಹಿಳಾ ಬರಹಗಾರ್ತಿ. ಡಿಗ್ರಿ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಭಾರತೀಯ ಸಾಹಿತ್ಯ ಅಧ್ಯಾಪನ ಮತ್ತು ಅಧ್ಯಯನ. ಕೆಲಕಾಲ ಹೈದರಾಬಾದ್ ಯೂನಿವರ್ಸಿಟಿಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೂ ಬೋಧನೆ. ಹೈದರಾಬಾದ್ ಯೂನಿವರ್ಸಿಟಿಯಿಂದ ಡಾಕ್ಟರೇಟ್. GENDER PATRIARCHY AND RESISTANCE : CONTEMPORARY WOMEN’S POETRY IN KANNADA AND HINDI (1980-2000) ಮಹಾಪ್ರಬಂಧ ಮಂಡನೆ. NATIONALISM, THE NATION OF FREEDOM AND CONTEMPORARY WOMENS POETRY ಮುಂತಾದ ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸ. ಸದ್ಯದಲ್ಲೇ ಪುಸ್ತಕರೂಪದಲ್ಲಿ ಪ್ರಕಟಣೆ. ಹಲವಾರು ಕನ್ನಡ ಕೃತಿಗಳ ರಚನೆ. ‘ಕಾದ ನವಿಲಿನ ಹೆಜ್ಜೆ’ ಮತ್ತು ‘ನದಿಯ ನೀರಿನ ತೇವ’ ಕೃತಿ ಪ್ರಕಟಣೆ. ಹಲವಾರು ಪದ್ಯಗಳು ದೇಶ ವಿದೇಶದ ಕಾವ್ಯ ಸಂಪುಟಗಳಲ್ಲಿ ಸೇರ‍್ಪಡೆ. ಲೀಡ್ಸ್ ಯೂನಿವರ್ಸಿಟಿಯಿಂದ MOVING WORLDS, A JOURNAL OF TRANSCULTURAL WRITINGS ಕೃತಿಗಳು ಪ್ರಕಟಿತ. ಸ್ವಾನುಭವದ ನೆಲೆಯಿಂದ ಹೊಮ್ಮುವುದು ಇವರ ಕಾವ್ಯದ ಗುಣ. ನವಿರಾದ ಲಾಲಿತ್ಯ, ಛಂದೋಬದ್ಧತೆಯ ಮೆರುಗು, ಆಳವಾದ ಪಾಂಡಿತ್ಯದ ಗಾಢಪ್ರಜ್ಞೆಯ ಅಭಿಜ್ಞತೆ. ಹೃದಯಸ್ಪರ್ಶಿ ಆರ್ದ್ರತೆ-ಇವು ಕಾವ್ಯದ ಪ್ರಮುಖ ಗುಣಗಳು. ಮಹಿಳಾ ಜಾಗೃತಿಗಾಗಿ ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ, ಸದಾ ಮಹಿಳೆಯರ ಏಳಿಗೆಗಾಗಿ ಚಿಂತನೆ. ಉತ್ತಮ ಪತ್ರಕರ್ತೆ. ‘ದಿ ಹಿಂದೂ’, ‘ಬಿಸಿನೆಸ್ ಲೈನ್’, ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗೆ ಬರೆದ ಹಲವಾರು ಲೇಖನಗಳು. ರಂಗಭೂಮಿ ಮತ್ತು ಕಲೆಯ ಬಗ್ಗೆ ವಿಮರ್ಶಾತ್ಮಕ ಲೇಖನಗಳು ಪ್ರಕಟಿತ. ಉತ್ತಮ ನಾಟಕಕಾರ್ತಿ, ನಿರ್ದೇಶಕಿ. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನಿಂದ SWING OF DESIRE ಕೃತಿ ಸದ್ಯದಲ್ಲಿ ಪ್ರಕಟ. ಸಂದ ಪ್ರಶಸ್ತಿಗಳು : ಗುಡಿಬಂಡೆ ಪೂರ್ಣಿಮ ಪ್ರಶಸ್ತಿ, ಕೇಂದ್ರ ಸರಕಾರದ ನ್ಯಾಷನಲ್ ಫೆಲೋಶಿಪ್ ಫಾರ್ ಲಿಟರೇಚರ್. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ.   ಇದೇ ದಿನ ಹುಟ್ಟಿದ ಸಾಹಿತಿ : ಕಲ್ಯಾಣ ಮೂರ್ತಿ – ೧೯೫೨

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top