ಮಾನ್ವಿ ನರಸಿಂಗರಾವ್

Home/Birthday/ಮಾನ್ವಿ ನರಸಿಂಗರಾವ್
Loading Events
This event has passed.

೨.೪.೧೯೧೧ ೯.೯.೧೯೬೯ ಹೈದರಾಬಾದ್ ಕರ್ನಾಟಕ ವಿಭಾಗದ ಕನ್ನಡ ಸಾಹಿತ್ಯ ನವ ನಿರ್ಮಾಣದಲ್ಲಿ ಪ್ರಮುಖರಾದ ನರಸಿಂಗರಾಯರು ಹುಟ್ಟಿದ್ದು ರಾಯಚೂರಿನಲ್ಲಿ. ತಂದೆ ರಾಘವೇಂದ್ರರಾವ್, ತಾಯಿ ಚಂದ್ರಮ್ಮ. ತಂದೆ ರಾಯಚೂರಿನ ತಹಸೀಲ್‌ದಾರರ ಕಚೇರಿಯಲ್ಲಿ ಗಿರ್ದಾವರ್ ಆಗಿದ್ದರು. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ಓದಿದ್ದು ರಾಯಚೂರಿನ ಹಮ್‌ದರ್ದ್ ಹೈಸ್ಕೂಲಿನಲ್ಲಿ. ಹೈಸ್ಕೂಲಿನಲ್ಲಿದ್ದಾಗಲೇ ಪ್ರತಿಭಾವಂತ ವಿದ್ಯಾರ್ಥಿ ಎಂಬ ಖ್ಯಾತಿ. ಮೆಟ್ರಿಕ್ ನಂತರ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ. ೧೯೩೬ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಮೊದಲ ದರ್ಜೆ-ಸ್ವರ್ಣಪದಕ. ಬಿ.ಎಂ.ಶ್ರೀ. ಟಿ.ಎಸ್. ವೆಂಕಣ್ಣಯ್ಯ, ತೀನಂಶ್ರೀ ಮೊದಲಾದವರ ಅಚ್ಚುಮೆಚ್ಚಿನ ಶಿಷ್ಯರು. ಇವರು ಬರೆದ ಹಲವಾರು ಕವನಗಳು ಹೈದರಾಬಾದಿನ ಸಾಹಿತ್ಯ ಮಂದಿರದಿಂದ ಪ್ರಕಟಿಸಿದ ‘ಶ್ರೀಕಾರ’ ಎಂಬ ಗ್ರಂಥದಲ್ಲಿ ‘ಮಾನ್ವಿ’ ಎಂಬ ಹೆಸರಿನಿಂದ ಪ್ರಕಟಗೊಂಡಿದೆ. ಇವರು ಪ್ರಕಟಿಸಿದ ಪ್ರಮುಖ ಕೃತಿಗಳೆಂದರೆ ವಿ.ಸೀ.ಯವರ ಪಂಪಯಾತ್ರೆಯಂತೆಯೇ ‘ಕನ್ನಡಯಾತ್ರೆ’. ‘ಕನ್ನಡದ ಪರಿಚಯ’ ಎಂಬ ಹಿಂದಿ ಭಾಷೆಯಲ್ಲಿ ಬರೆದ ಕೃತಿ. ಭಾಷಾಶಾಸ್ತ್ರಕ್ಕೆ ಸಂಬಂಸಿದ ಕೃತಿ ‘ನಡುಗನ್ನಡ.’ ಈ ನಡುಗನ್ನಡ ಚರಿತ್ರೆಯಲ್ಲಿ ಭಾಷಾಶಾಸ್ತ್ರದ ಬೆಳಕಿನಲ್ಲಿ ವಿವರವಾಗಿ ಬರೆದು “ಕನ್ನಡ ಸಾಹಿತ್ಯಕ್ಕಾಗಿ ಪರಿಪುಷ್ಟವಾಗಿಯೂ, ಶ್ಲಾಘನೀಯವಾಗಿಯೂ ಮಾನ್ವಿಯವರು ಮಾಡಿರುವರೆಂದು. ಎ.ಆರ್.ಕೃ.ರವರಿಂದ ಹೊಗಳಿಸಿಕೊಂಡ ಗ್ರಂಥ.” ‘ಸರಸ್ವತಿ ತತ್ತ್ವ’ ಎಂಬದು ೯ ಲೇಖನಗಳ ಸಂಗ್ರಹ. ಸಾಹಿತ್ಯದ ಉಗಮ, ರಸಸಿದ್ಧಾಂತ, ಕಲೆ ಮತ್ತು ನೀತಿ, ಕನ್ನಡ ಸಾಹಿತ್ಯ ಸಂಶೋಧನೆ, ಹೊಸಗನ್ನಡ ವಿಮರ್ಶೆ, ನಾಟಕ ಮೊದಲಾದುವುಗಳನ್ನೊಳಗೊಂಡಿದೆ. ಗುರುರಾಜ ಎಂಬ ಅಂಕಿತದಿಂದ ಹಲವಾರು ವಚನಗಳನ್ನು ರಚಿಸಿದ್ದಾರೆ. ಸಂದ ಗೌರವಗಳೆಂದರೆ-ಹೈದರಾಬಾದು ಕರ್ನಾಟಕ ವಿಭಾಗದ ತನ್ನದೇ ಆದ ಸಾಹಿತ್ಯ ಪರಿಷತ್ತನ್ನು ಹೊಂದಿದ್ದು ೧೯೫೬ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ೧೯೫೯ರಲ್ಲಿ ಬಿದರೆಯಲ್ಲಿ ನಡೆದ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದ ಸಂಶೋಧನೆ ಮತ್ತು ವಿಮರ್ಶಾಗೋಷ್ಠಿ ಅಧ್ಯಕ್ಷತೆ. ಆಂಧ್ರ ಪ್ರದೇಶದ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸಂಚಾಲಕರಾಗಿ, ಭಾರತ ಸರ್ಕಾರದ ಸಾಹಿತ್ಯ ಅಕಾಡಮಿಯ ಕಾರ‍್ಯಕಾರಿ ಸಮಿತಿಯ ಸದಸ್ಯರಾಗಿಯೂ ಸಂದ ಗೌರವ. ಈ ಎಲ್ಲ ಗೌರವಗಳಿಗೂ ಭಾಜನರಾಗಿ ಕನ್ನಡ ಕೈಂಕರ್ಯದಲ್ಲಿ ತೊಡಗಿದ್ದು ಪ್ರಾಧ್ಯಾಪಕರಾಗಿ ದುಡಿಯುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ೯.೯.೧೯೬೯ರಲ್ಲಿ ನಿಧನರಾದರು.   ಇದೇ ದಿನ ಹುಟ್ಟಿದ ಸಾಹಿತಿಗಳು : ಪ್ರೊ. ನರಸಿಂಗರಾವ್ – ೧೮೯೧ ನಟರಾಜ ಹುಳಿಯಾರ್ – ೧೯೬೨

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top