Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಮಾಸ್ತಿ ವೆಂಕಟೇಶ ಅಯ್ಯಂಗಾರ್ – ಕಣಜ

ಮಾಸ್ತಿ ವೆಂಕಟೇಶ ಅಯ್ಯಂಗಾರ್

Home/Birthday/ಮಾಸ್ತಿ ವೆಂಕಟೇಶ ಅಯ್ಯಂಗಾರ್
Loading Events

೬-೬-೧೮೯೧ ೬-೬-೧೯೮೬ ಸಣ್ಣ ಕಥೆಗಳ ಜನಕರೆಂದೇ ಪ್ರಸಿದ್ಧರಾಗಿದ್ದ ಮಾಸ್ತಿಯವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಮಾಸ್ತಿ ಎಂಬಲ್ಲಿ. ತಂದೆ ರಾಮಸ್ವಾಮಿ ಅಯ್ಯಂಗಾರ್, ತಾಯಿ ತಿರುಮಲಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಯಳಂದೂರು, ಶಿವಾರಪಟ್ಟಣ, ಮಳವಳ್ಳಿ, ಕೃಷ್ಣರಾಜಪೇಟೆ. ಪ್ರೌಢಶಾಲೆ-ವೆಸ್ಲಿಯನ್ ಹೈಸ್ಕೂಲ್ ಮೈಸೂರು. ಮೈಸೂರಿನ ಮಹಾರಾಜ ಕಾಲೇಜಿನಿಂದ ಪ್ರಥಮ ದರ್ಜೆಯಲ್ಲಿ ಎಫ್.ಎ. ಪದವಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ೧೯೧೨ರಲ್ಲಿ ಬಿ.ಎ. ಮತ್ತು ೧೯೧೩ರಲ್ಲಿ ಎಂ.ಸಿ.ಎಸ್. ಪ್ರಥಮ ದರ್ಜೆಯಲ್ಲಿ ತೇರ್ಗಡೆ. ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಎಂ.ಎ. (ಇಂಗ್ಲಿಷ್) ಪದವಿ. ಸೆನ್ಸಸ್ ಕಮೀಷನರ್, ಡೆಪ್ಯೂಟಿ ಕಮಿಷನರ್, ಕಂಟ್ರೋಲರ್, ಎಕ್ಸೈಸ್ ಕಮೀಷನರ್ ಮುಂತಾದ ಉನ್ನತ ಹುದ್ದೆಗಳಲ್ಲಿ ತೃಪ್ತಿಕರವಾಗಿ ಕಾರ‍್ಯನಿರ್ವಹಿಸಿ ೧೯೪೪ರಲ್ಲಿ ಎಕ್ಸೈಸ್ ಕಮೀಷನರ್ ಹುದ್ದೆಯಿಂದ ಸ್ವಯಂ ನಿವೃತ್ತಿ. ಇಂಗ್ಲಿಷ್ ಸಾಹಿತ್ಯ ಅಭ್ಯಾಸ ಮಾಡಿದ್ದರೂ ಬರೆದದ್ದು ಕನ್ನಡದಲ್ಲಿ ವಿಪುಲ ಸಾಹಿತ್ಯ. ಸುಮಾರು ೧೫ ಕಥಾಸಂಕಲನಗಳು, ೧೮ ಕಾವ್ಯ ಕೃತಿಗಳು, ೧೬ ನಾಟಕಗಳು, ೬೬ ವಿಮರ್ಶಾ ಗ್ರಂಥಗಳು ಸೇರಿ ೧೨೫ಕ್ಕೂ ಹೆಚ್ಚು ಕೃತಿ ಪ್ರಕಟಿತ. ಮಾಸ್ತಿಯವರಿಗೆ ದೊರೆತ ಗೌರವ, ಸನ್ಮಾನಗಳ ಪಟ್ಟಿ ದೊಡ್ಡದೇ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮದರಾಸಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮುಂಬಯಿಯ ಅಖಿಲ ಭಾರತ ಸಾಹಿತಿಗಳ ಸಮ್ಮೇಳನದ ಅಧ್ಯಕ್ಷತೆ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಫೆಲೋಶಿಪ್, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಮುಂತಾದುವು. ೧೯೭೨ರಲ್ಲಿ ಅರ್ಪಿಸಿದ ಗೌರವಗ್ರಂಥ ‘ಶ್ರೀನಿವಾಸ.’ ಸ್ಮರಣ ಸಂಚಿಕೆಗಳು ಮಾಸ್ತಿ ನಮನ, ಮಾಸ್ತಿ ಸ್ಮರಣೆ. ಇವರನ್ನು ಕುರಿತು ಹಲವಾರು ವಿಮರ್ಶಾ ಕೃತಿಗಳು ಪ್ರಕಟಗೊಂಡಿವೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಅಮೃತ ಮಹದೇವ ಅಣ್ಣಿಗೇರಿ – ೧೯೧೪-೨೭.೬.೮೭ ಆರ್.ಡಿ. ಕಾಮತ್ – ೧೯೨೩ ಡಾ. ಖಡಬಡಿ ಬಿ.ಕೆ. – ೧೯೨೪ ಎಚ್. ನರಸಿಂಹಯ್ಯ – ೧೯೨೦-೩೧.೧.೦೫ ನಾ. ಡಿಸೋಜ – ೧೯೩೭ ಕು.ಗೋ – ೧೯೩೮ ಚಂದ್ರಶೇಖರ ಹೆರ್ಳೆ – ೧೯೪೫ ಎಚ್. ದೇವಿರಪ್ಪ – ೧೯೧೩ ಖಾದ್ರಿ ಶಾಮಣ್ಣ  – ೧೯೨೫-೪.೫.೯೦ ಎಂ.ಎಸ್. ನಾಗರಾಜ್ – ೧೯೪೫

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top