ಮಾ.ಭ. ಪೆರ್ಲ (ಎಸ್.ಮಾಧವಭಟ್)

Home/Birthday/ಮಾ.ಭ. ಪೆರ್ಲ (ಎಸ್.ಮಾಧವಭಟ್)
Loading Events
This event has passed.

೪-೨-೧೯೩೧ ಹುಟ್ಟಿದ್ದು ಕಾಸರಗೋಡು ಜಿಲ್ಲೆಯ ಸೆಟ್ಟ ಬೈಲುಗ್ರಾಮ. ಪೌರೋಹಿತ್ಯ ವೃತ್ತಿ. ಯಕ್ಷಗಾನ ಪ್ರವೃತ್ತಿಯ ಗುರುಮನೆತನದಿಂದ ಬಂದವರು. ತಂದೆ ಗುರು ವೆಂಕಟೇಶ ಭಟ್ಟರು, ತಾಯಿ ಲಕ್ಷ್ಮಿ. ಪ್ರಾಥಮಿಕ, ಮಾಧ್ಯಮಿಕ, ಹೈಸ್ಕೂಲು ವಿದ್ಯಾಭ್ಯಾಸವೆಲ್ಲ ಪೆರ್ಲದಲ್ಲೆ. ಹಿಂದಿ ರಾಷ್ಟ್ರಭಾಷೆ ಪಾಸು ಮಾಡಿ ಮಡಕೇರಿಯ ಸೇಂಟ್ ಮೈಕಲ್ ಹೈಸ್ಕೂಲಿನಲ್ಲಿ ಅಧ್ಯಾಪಕ ವೃತ್ತಿ ಆರಂಭ. ಹಲವಾರು ಕಡೆ ಹಿಂದಿ ಅಧ್ಯಾಪಕರಾಗಿ ಸೇವೆ. ನಂತರ ೧೯೬೦-೭೨ರವರೆಗೆ ರಾಯಚೂರಿನ ಸೇಂಟ್‌ಮೇರೀಸ್ ಹೈಸ್ಕೂಲಿನಲ್ಲಿ ಅಧ್ಯಾಪಕ ವೃತ್ತಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಹಿಂದಿ ಮತ್ತು ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿ. ರಾಯಚೂರಿನ ಹಲವಾರು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ-ಹಮ್‌ದರ್ದ್ ಜ್ಯೂನಿಯರ್ ಕಾಲೇಜು, ಬಿ.ಆರ್.ಬಿ. ಕಾಮರ್ಸ್ ಕಾಲೇಜು, ಎಸ್.ಎಸ್.ಆರ್.ಜಿ. ಮಹಿಳಾ ಮಹಾವಿದ್ಯಾಲಯ ಮುಂತಾದ ಕಡೆಗಳಲ್ಲಿ. ರಾಯಚೂರಿನಲ್ಲಿರುವಾಗಲೇ ಹಲವಾರು ಸಮಾಜ ಸೇವಾ ಕಾರ‍್ಯಕ್ರಮಗಳು. ವಿದ್ಯಾಭಾರತಿ ಹೈಸ್ಕೂಲು ಸ್ಥಾಪನೆಗೆ ಕಾರಣಕರ್ತರು. ‘ಸೇವಾ ಭಾರತಿ’ ಟ್ರಸ್ಟ್‌ನಿಂದ ಪ್ರೇರಣ ಬುದ್ಧಿಮಾಂದ್ಯ ಮಕ್ಕಳ ಶಾಲೆಯನ್ನು ಸ್ಥಾಪಿಸಿ, ಪ್ರಮುಖ ಕಾರ್ಯ ನಿರ್ವಹಣೆ. ರಾಯಚೂರಿನಿಂದ ಪೆರ್ಲಕ್ಕೆ ಹಿಂದಿರುಗಿದ ನಂತರ ಪ್ರಾರಂಭಿಸಿದ ಬಾಲಮಂದಿರ (ಶಿಶುವಿಹಾರ) ಇದೀಗ ಬಾಲಭಾರತಿ ವಿದ್ಯಾಕೇಂದ್ರ ಎಂಬ ಪ್ರಾಥಮಿಕ ಶಾಲೆಯಾಗಿ, ಯಕ್ಷಗಾನ ಪಿತಾಮಹ ಬಲಿಪನಾರಾಯಣ ಭಾಗವತರ ಸ್ಮೃತಿ ಭವನದಲ್ಲಿ ಕಾರ‍್ಯ ನಿರ್ವಹಿಸುತ್ತಿದೆ. ಇದಲ್ಲದೆ ಸಮುದಾಯ ಪತ್ರಿಕೆ ‘ಕರಾಡ’ ಎಂಬ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರು. ೫ ವರ್ಷಕಾಲ ಪ್ರತಿತಿಂಗಳೂ ಮನೆಯಲ್ಲೇ ಸಾಹಿತ್ಯ ಕಾರ‍್ಯಕ್ರಮ ನಡೆಸಿ ನಿರ್ಮಿಸಿದ ದಾಖಲೆ. ಸಾಹಿತ್ಯದ ಗೀಳು ಹತ್ತಿದ್ದು  ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ. ಕೈಬರಹದ ಪತ್ರಿಕೆ ತಯಾರಿಸಿ ಗೋಡೆಯ ಮೇಲೆ ಅಂಟಿಸಿ ಗೋಡೆಪತ್ರಿಕೆಗೆ ಹಾಡಿದ ನಾಂದಿ. ಕಥೆ, ಲೇಖನಗಳ ರಚನೆ. ಅಪೂರ್ವ ಸ್ವಪ್ನ ಎಂಬ ಹಿಂದಿ ಕಾದಂಬರಿ ಅನುವಾದ. ವ್ಯಕ್ತಿಚಿತ್ರ, ನಾಟಕ ಮುಂತಾದ ೨೫ಕ್ಕೂ ಮಿಕ್ಕು ಕೃತಿರಚನೆ. ಮರಳಿದಾಗ, ಸುದರ್ಶನ, ಡಾ. ಸುಧಾ, ಮಂಗಳಸೂತ್ರ, ಅನುಭೂತಿ (ಸಾಮಾಜಿಕ ಕಾದಂಬರಿಗಳು) ದುರಂತ (ಪ್ರಾದೇಶಿಕ) ಹೊಸ ಹೊನಲು (ಏಕಾಂಕ ನಾಟಕ), ಕಥಾಮಿಥುನ (ಕಥಾಸಂಕಲನ) ಭಾವಸುರಭಿ-ಕಾಸರಗೋಡಿನ ಮುವತ್ತಾರು ಜನ ಲೇಖಕರ ಪ್ರಾತಿನಿಕ ಕವಿತಾ ಸಂಕಲನ-ಮುಂತಾದವು ಪ್ರಕಟಿತ. ಸಂದ ಪ್ರಶಸ್ತಿಗಳು-ಅಗೇಕಾರಾಸ್ತಾ ಹಿಂದಿ ಕೃತಿಗೆ ಕೇಂದ್ರ ಸರಕಾರದ ಪುರಸ್ಕಾರ. ಕಾಸರಗೋಡಿನ ಕಕ್ಕಿಲಾಯ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ವನಮಾಲಾ ಆಚಾರ – ೧೯೩೭ ಹೊಸಮನಿ ಚೆನ್ನಬಸಪ್ಪ – ೧೯೩೮ ದೇವಯ್ಯ ಹರವೆ – ೧೯೫೧

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top