ಮುಂಡಾಜೆ ರಂಗನಾಥಭಟ್ಟರು

Home/Birthday/ಮುಂಡಾಜೆ ರಂಗನಾಥಭಟ್ಟರು
Loading Events

೧೮..೧೮೮೬ ೦೨..೧೯೭೩ ಕರ್ನಾಟಕ ರಂಗಭೂಮಿಯ ಭೀಷ್ಮರೆನಿಸಿದ್ದ ರಂಗನಾಥಭಟ್ಟರು ಹುಟ್ಟಿದ್ದು ದಕ್ಷಿಣಕನ್ನಡ ಜಿಲ್ಲೆಯ ಮುಂಡಾಜೆ ಗ್ರಾಮದಲ್ಲಿ. ತಂದೆ ನಾರಾಯಣಭಟ್ಟರು, ತಾಯಿ ಲಕ್ಷ್ಮೀದೇವಿ. ಹೈಸ್ಕೂಲು ಓದುತ್ತಿದ್ದಾಗಲೇ ಹತ್ತಿದ ನಾಟಕದ ಹುಚ್ಚು. ಪಿಟೀಲು ವಿದ್ವಾಂಸ ಶಿವಪ್ಪ ಶ್ಯಾನುಭೋಗರ ನೆರವಿನಿಂದ ‘ಕರ್ನಾಟಕ ಮಿತ್ರಮಂಡಲಿ’ ಯಲ್ಲಿ ದೊರೆತ ಚಿಕ್ಕಪಾತ್ರದಿಂದ ದೇವೇಂದ್ರನ ಪಾತ್ರದವರೆಗೆ ಸಿಕ್ಕ ಭಡ್ತಿ. ಸ್ವತಃ ಅಭ್ಯಾಸದಿಂದ ಕಲಿತ ಸಂಗೀತ, ನಟನೆ. ಕರ್ನಾಟಕ ಮಿತ್ರಮಂಡಲಿಯ ತೀರ್ಥಹಳ್ಳಿ ಕ್ಯಾಂಪಿನಲ್ಲಿ ವಹಿಸಿದ ಸತ್ಯ ಹರಿಶ್ಚಂದ್ರನ ಪಾತ್ರ. ಪ್ರೇಕ್ಷಕರಿಂದ ದೊರೆತ ಪ್ರಶಂಸೆ. ಧರ್ಮಸ್ಥಳದ ಚಂದ್ರಯ್ಯ ಹೆಗಡೆಯವರ ಅಪೇಕ್ಷೆಯ ಮೇರೆಗೆ ಶೂರಸೇನ, ಸತ್ಯವಿಜಯ, ಧ್ರುವ, ಬಕಾವಲಿ, ದ್ರೌಪದಿ ವಸ್ತ್ರಾಪಹರಣ ನಾಟಕಗಳ ನಿರ್ದೇಶನ. ಗೆಳೆಯರು ಸ್ಥಾಪಿಸಿದ್ದ ಚಿತ್ರಕಲಾ ಥಿಯೇಟರ್ ನಲ್ಲಿ ಪ್ರಮುಖನಟ. ಸಿನಿಮಾ ನಟಿ ಪಂಡರಿಬಾಯಿಯವರ ತಂದೆ ರಂಗರಾಯರ ಸ್ನೇಹ. ೧೯೧೬ ರಲ್ಲಿ ಸ್ವತಂತ್ರ ನಾಟಕ ಕಂಪನಿ “ಅಂಬಾ ಪ್ರಸಾದಿತ ನಾಟಕ ಕಂಪನಿ” ಪ್ರಾರಂಭ. ಶಿವರಾಮ ಕಾರಂತರ ಮೊದಲ ನಾಟಕ, ಪಿ. ಕಾಳಿಂಗರಾಯರು ಧ್ರುವನ ಪಾತ್ರ ಭಟ್ಟರ ಕಂಪನಿಯಲ್ಲೇ. ಒಥೆಲೊ ನಾಟಕದ ಶೂರಸೇನ , ಕೀಚಕ, ಕೌರವ, ಭೀಮ, ದುಶ್ಯಾಸನ, ಕಂಸ, ಹಿರಣ್ಯಕಶಿಪು, ಪೃಥ್ವಿರಾಜ ಪಾತ್ರಗಳಲ್ಲಿ ದುಃಖ, ಕರುಣ, ವೀರ, ಶೃಂಗಾರ, ರೌದ್ರ, ಹಾಸ್ಯ ರಸಗಳ ಪ್ರದರ್ಶನದಿಂದ ಜನಮೆಚ್ಚುಗೆ. ಮಹಾರಾಷ್ಟ್ರದಲ್ಲೂ ನಾಟಕಗಳ ಪ್ರದರ್ಶನ. ಕಂಪನಿ ಶೋಚನೀಯ ಸ್ಥಿತಿ ತಲುಪಿದಾಗ ಕಲಾಮಂದಿರದ ಅ.ನ. ಸುಬ್ಬರಾಯರು, ಸಂಗೀತನಾಟಕ ಅಕಾಡಮಿ, ಅಂದಿನ ಮು.ಮಂ. ನಿಜಲಿಂಗಪ್ಪನವರ ನೇತೃತ್ವದಲ್ಲಿ ಬ್ರಹ್ಮಾವರ ಕನ್ನಡ ಸಂಘ, ಮುಂತಾದ ಸಂಘ ಸಂಸ್ಥೆಗಳಿಂದ ಅಭಿನಯ ಭೂಷಣ, ನಾಟ್ಯಕಲಾ ವಿಶಾರದ, ಮುಂತಾದ ಬಿರುದು, ನಿಧಿಸಮರ್ಪಣೆ.   ಇದೇ ದಿನ ಹುಟ್ಟಿದ ಕಲಾವಿದರು ಶ್ರೀನಿವಾಸಮೂರ್ತಿ ಎ.ಎಚ್‌ – ೧೯೨೮ ಶ್ರೀರಂಗಮ್ಮ ಎಸ್‌.ಬಿ – ೧೯೩೧ ಮಲ್ಲಿಕಾರ್ಜುನ ಚೆಟ್ಟಿ – ೧೯೬೦

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top