Loading Events

« All Events

  • This event has passed.

ಮುಖ್ಯಮಂತ್ರಿ ಚಂದ್ರು

August 28, 2023

೨೮.೦೮.೧೯೫೩ ರಂಗಭೂಮಿ, ಕಿರುತೆರೆ, ಚಲನಚಿತ್ರಗಳ ಪ್ರತಿಭಾನ್ವಿತ ನಟರಾದ ಚಂದ್ರಶೇಖರ್ ರವರು ಹುಟ್ಟಿದ್ದು ನೆಲಮಂಗಲ ತಾಲ್ಲೂಕಿನ ಹೊನ್ನಸಂದ್ರ. ತಂದೆ ಎನ್‌. ನರಸಿಂಹಯ್ಯ, ತಾಯಿ ತಿಮ್ಮಮ್ಮ. ಓದಿದ್ದು ಕಾನೂನು ಪದವಿಯಾದರೂ ರಂಗಭೂಮಿಯ ಕಡೆಗೆ ಆಕರ್ಷಿತರಾಗಿ ಪಡೆದ ನಾಟಕದ ಡಿಪ್ಲೋಮಾ. ಬೆಂಗಳೂರು ವಿಶ್ವವಿದ್ಯಾಲಯಲದಲ್ಲಿ ಕೆಲಕಾಲ ಉದ್ಯೋಗ. ರಂಗಭೂಮಿಯ ಸ್ನೇಹಿತರಿಂದ ಉತ್ತೇಜಿತರಾಗಿ ೧೯೭೫ ರಲ್ಲಿ ‘ತಾಯಿ’ ನಾಟಕದಲ್ಲಿ ಸಮುದಾಯದ ಪ್ರಸನ್ನರು ನೀಡಿದ ಪಾತ್ರದಿಂದ ಪಡೆದ ಯಶಸ್ಸು. ಮುಖ್ಯಮಂತ್ರಿ ನಾಟಕದಲ್ಲಿ ಅಭಿನಯದಿಂದ ಬಂದ ಪ್ರಸಿದ್ಧಿ ಜೊತೆಗೆ ಅಂಟಿಕೊಂಡದ್ದು ಮುಖ್ಯಮಂತ್ರಿ ಚಂದ್ರು ಎಂಬ ಖಾಯಂ ಹೆಸರು. ಬಿ.ವಿ. ರಾಜಾರಾಂ ಜೊತೆ ಸೇರಿ ನಿರ್ದೇಶಿಸಿದ ನಾಟಕ ಅಚಲಾಯತನ. ನಂತರ ಹಲವಾರು ನಾಟಕಗಳ ನಿರ್ದೇಶನ. ಮೋಡಗಳು, ಮೂಕಿ, ಟಾಕಿ, ಎಲ್ಲಾರು ಮಾಡುವುದು. ಗರ್ಭಗುಡಿ, ಕತ್ತಲೆ ದಾರಿದೂರ, ಕಾಲಿಗುಲ, ಭರತಪ್ಪನ ಸೊಂಟಕ್ಕೆ ಗಂಟೆ, ಕೇಳು ಜನಮೇಜಯ ಕಂಬಳಿಸೇವೆ (ಹಾಸ್ಯನಾಟಕ) ಹೋಂ ರೂಲು ಮುಂತಾದುವು. ಮುಖ್ಯಮಂತ್ರಿ, ತಾಯಿ, ಕತ್ತಲೆ ದಾರಿದೂರ, ಘಾಸಿರಾಂ ಕೊತ್ವಾಲ್‌, ಕಾಲಿಗುಲ, ನಮ್ಮೊಳಗೊಬ್ಬ ನಾಜೂಕಯ್ಯ, ಆಸ್ಫೋಟ ಮುಂತಾದ ನಾಟಕಗಳ ಪ್ರಮುಖ ಪಾತ್ರಧಾರಿ ಹಾಗೂ ನೂರಾರು ಚಲನಚಿತ್ರಗಳಲ್ಲಿ ಪಾತ್ರವಹಿಸಿದ್ದಾರೆ. ಮೂಕಾಭಿನಯದಲ್ಲಿ ಪಡೆದ ಪರಿಣತಿ. ಕೋಲ್ಕತ್ತಾದ ಮೈಮ್‌ ಇನ್‌ಸ್ಟಿಟ್ಯೂಟ್‌ನ ಜೋಗೇಶ್‌ ದತ್ತಾ, ಅಮೆರಿಕದ ಅಡಂ ಅಬ್ರಹಾಂ, ವಿ. ರಾಮಮೂರ್ತಿಯವರುಗಳ ಮಾರ್ಗದರ್ಶನ. ಲಂಡನ್‌, ಪ್ಯಾರಿಸ್‌, ರೋಂ, ಸ್ವಿಜರ್‌ಲ್ಯಾಂಡ್‌, ಆಮ್‌ಸ್ಟರ್‌ಡಾಂ, ಬೆಲ್ಜಿಯಂ, ಸಿಂಗಪೂರ್, ಹಾಂಗಾಕಾಂಗ್‌ ದೇಶಗಳಲ್ಲಿ ನೀಡಿದ ಮೂಕಾಭಿನಯ ಕಾರ್ಯಕ್ರಮ. ರಾಜ್ಯ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಿರ್ದೇಶನಕ್ಕಾಗಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಹಲವಾರು ಸಂಘ ಸಂಸ್ಥೆಗಳಿಂದ ಪುರಸ್ಕಾರ, ಸಾಮಾಜಿಕ ಕಾರ್ಯಕರ್ತರಾಗಿ ಹಲವಾರು ಕಾರ್ಯಕ್ರಮಗಳು. ಎರಡನೆಯ ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿರುವ ಮುಖ್ಯಮಂತ್ರಿ ಚಂದ್ರುರವರು ಇದೀಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು.   ಇದೇ ದಿನ ಹುಟ್ಟಿದ ಕಲಾವಿದರು ಎಂ.ಎನ್‌. ರತ್ನ – ೧೯೨೮ ನ. ಕೃಷ್ಣಯ್ಯ – ೧೯೪೮ ಪಂಚಾಕ್ಷರಯ್ಯ ಹಿರೇಮಠ – ೧೯೬೮ ಶಿವಮಲ್ಲಯ್ಯ – ೧೯೫೨

* * *

Details

Date:
August 28, 2023
Event Category: