Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಮುಜಾವರ ಅಸಿಫ ಅಲಿ – ಕಣಜ

ಮುಜಾವರ ಅಸಿಫ ಅಲಿ

Home/Birthday/ಮುಜಾವರ ಅಸಿಫ ಅಲಿ
Loading Events

೧೧-೪-೧೯೫೩ ೧೯೯೬ ಸಾಹಿತ್ಯ, ಛಾಯಾಗ್ರಹಣ ಕಲೆಯಲ್ಲಿ ಪರಿಣತರಾಗಿದ್ದ ಮುಜಾವರರು ಹುಟ್ಟಿದ್ದು ಬೈಲಹೊಂಗಲ ತಾಲ್ಲೂಕು ತುರಮುರಿಗ್ರಾಮ. ತಂದೆ ಹುಸೇನಸಾಬ, ತಾಯಿ ಇಮಾಮಬಿ. ಓದಿದ್ದು ಎಸ್.ಎಸ್.ಎಲ್.ಸಿ. ಪಾಸಾದ ನಂತರ ಆರ್ಥಿಕ ತೊಂದರೆಯಿಂದ ಮುಂದೆ ಓದಲಾರದೆ ಸೇರಿದ್ದು ಪೊಲೀಸ್ ಇಲಾಖೆಗೆ. ಬೆಳಗಾವಿ ಉಪನಗರದ ವಡಗಾವಿಯ ಪೊಲೀಸ್ ಠಾಣೆಯಲ್ಲಿ ಉದ್ಯೋಗ. ಅಪರಾಗಳಿಗೆ ಸಂಬಂಸಿದ ಕಡತಗಳನ್ನು ನ್ಯಾಯಾಲಯಕ್ಕೆ ಹೊತ್ತೊಯ್ಯುವ ಕೆಲಸ. ಪೊಲೀಸ್ ಠಾಣೆಯ ಎದುರಿಗಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಪುಂಡಲೀಕ ಪಾಟೀಲರ ಸ್ನೇಹದಿಂದ ಸಾಹಿತ್ಯ ರಚನೆಯ ಕಡೆ ಬೆಳೆದ ಒಲವು. ಕಥೆ, ಕವನ, ಕಾದಂಬರಿಗಳ ಬಗ್ಗೆ ಬಿಡುವಿನ ವೇಳೆಯಲ್ಲಿ ಚರ್ಚೆ, ಚಿಂತನ-ಮಂಥನ. ಬರೆದ ಕಥೆ, ಕವನಗಳನ್ನು ಮೊದಲ ಓದುಗರೆಂದರೆ ಪುಂಡಲೀಕ ಪಾಟೀಲರೇ ! ಸ್ಥಳೀಯ ಪತ್ರಿಕೆಗಳಾದ ಜನಜೀವನ, ಲೋಕದರ್ಶನ, ಕನ್ನಡಮ್ಮ ಪತ್ರಿಕೆಗಳಲ್ಲಿ ಪ್ರಕಟಿತ. ಪೊಲೀಸ್ ಇಲಾಖೆಗೆ ಸೇರಿದವರು ಕಠಿಣ ಹೃದಯದವರು ಎಂಬ ಅಪಖ್ಯಾತಿಯನ್ನು ತೊಡೆಯಲೆಂಬಂತೆ ಇವರು ಬರೆದುದೆಲ್ಲವೂ ಮಾನವೀಯತೆಯ ಮೂಲಸೆಲೆಯಿಂದ ಕೂಡಿದ ವಸ್ತುಗಳನ್ನೊಳಗೊಂಡ ಕಥೆಗಳೇ. ಮುಜಾವರರು ಹೆಚ್ಚಾಗಿ ನ್ಯಾಯಾಲಯದ ‘ಡ್ಯೂಟಿ’ಗಾಗಿಯೇ ಅಲೆದಾಡುತ್ತಿದ್ದುದರಿಂದ ವಕೀಲರ ಸಂಗ. ಆರೋಪಿಗಳ ಜೊತೆ ಓಡಾಟ, ನೊಂದವರ, ಹಿಂಸೆಗೊಳಗಾದವರ ಪರಿಚಯ…ಇವೇ ಸಾಹಿತ್ಯ ರಚನೆಯ ವಸ್ತುಗಳು. ಬರೆದುದು ಕಡಿಮೆ, ಸತ್ವಭರಿತ ಕೃತಿಗಳೇ. ಇಲಾಖೆಯಿಂದಲೂ ಪಡೆದ ಮನ್ನಣೆ. ಮೊದಲ ಕವನ ಸಂಕಲನ ‘ಮುಂಬೆಳಕು’ ಹುಟ್ಟಿದೂರಿನಲ್ಲಿ  ಮದುವೆಯ ಮನೆಯ ಸಡಗರದ ವಾತಾವರಣದಲ್ಲಿ  ಖ್ಯಾತ ಸಾಹಿತಿಗಳಾದ ಆರ್.ಸಿ. ಹಿರೇಮಠರವರಿಂದ ಬಿಡುಗಡೆ. ಮತ್ತೊಂದು ಕೃತಿ ‘ಪ್ರಕೃತಿ’ ಕಾದಂಬರಿಗೆ ಬಸವರಾಜ ಕಟ್ಟೀಮನಿಯವರು ಮುನ್ನುಡಿ ಬರೆದು ಹಾರೈಸಿದರೆ ಇಲಾಖೆಯ ಹಿರಿಯ ಅಕಾರಿಗಳಾದ ಎಸ್.ಪಿ. ಮಡಿಯಾಳ್‌ರವರು ಬೆನ್ನುಡಿ ಬರೆದು ಹಾರೈಸಿದ್ದಾರೆ. ಮತ್ತೊಂದು ಕಾದಂಬರಿ ‘ಮರಣದಂಡನೆ’ಗೆ ಅಂದಿನ ಜಿಲ್ಲಾ ಪೊಲೀಸ್ ಅಕಾರಿಗಳಾಗಿದ್ದ ಜ್ಯೋತಿ ಪ್ರಕಾಶ ಮಿರ್ಜಿಯವರು ಮುನ್ನುಡಿ ಬರೆದು ಹಾರೈಸಿದರೆ, ಐ.ಪಿ.ಎಸ್. ಅಕಾರಿಯಾಗಿದ್ದ ಡಾ.ಎಸ್. ಕೃಷ್ಣಮೂರ್ತಿಯವರು ಬೆನ್ನುಡಿಯಲ್ಲಿ ಶುಭಕೋರಿದ್ದಾರೆ. ಇವರ ಒಟ್ಟು ಪ್ರಕಟಿತ ಕೃತಿಗಳು ಒಂದು ನಾಟಕ, ಒಂದು ಕವನ ಸಂಕಲನ, ಹತ್ತು ಕಾದಂಬರಿಗಳು. ಸುಖೀಜೀವನ ಸಮಾಜವನ್ನಾಗಿ ಪರಿವರ್ತಿಸುವ ಆಶಯ, ದೇಶಕ್ಕೆಲ್ಲಾ ಒಂದೇ ರೀತಿಯ ಕಾನೂನು, ನಾಗರಿಕ ಸಂಹಿತೆ ಇರಬೇಕೆಂಬ ವಿಚಾರಧಾರೆ ಹೊತ್ತ ಮುಜಾವರರು ೧೯೯೬ರಲ್ಲಿ. ದುರ್ಘಟನೆಯೆಂದರೆ ಮಹಜರ್ ತಯಾರಿಸುವಲ್ಲಿ ಎದುರಿನಿಂದ ಬಂದ ಲಾರಿ ನಿಲ್ಲಿಸಲು ಆದೇಶಿಸಿದರೂ ನಿಲ್ಲದೆ ಇವರನ್ನೇ ಬಲಿ ತೆಗೆದುಕೊಂಡ ದುರ್ದೈವಿ ಘಟನೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಅರಳಬೇಕಾಗಿದ್ದ  ಮುಜಾವರರ ಬದುಕು ಮುರುಟಿ ಹೋಯಿತು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top