ಮುದ್ದಣ

Home/Birthday/ಮುದ್ದಣ
Loading Events
This event has passed.

೨೪-೧-೧೮೭೦ ಈತನ ಪೂರ್ವನಾಮ ನಂದಳಿಕೆ ಲಕ್ಷ್ಮೀ ನಾರಣಪ್ಪ. ಹುಟ್ಟಿದ್ದು ನಂದಳಿಕೆ ಗ್ರಾಮ. ಉಡುಪಿ ಮತ್ತು ಕಾರ್ಕಳದ ಮಧ್ಯದ ಗ್ರಾಮ. ತಂದೆ ಪಾಠಾಳಿ ತಿಮ್ಮಪ್ಪಯ್ಯ, ತಾಯಿ ಮಹಾ ಲಕ್ಷ್ಮಮ್ಮ. ಪ್ರಾಥಮಿಕ ಶಿಕ್ಷಣ ನಂದಳಿಕೆ. ಮುಂದಿನ ವ್ಯಾಸಂಗಕ್ಕೆ ಉಡುಪಿಯ ಮಠದ ಆಶ್ರಯ. ಇಂಗ್ಲಿಷ್ ಶಾಲೆಗೆ ಸೇರಲು ಫೀಸು ಕೊಡಲಾರದೆ ಸೇರಿದ್ದು ಕನ್ನಡ ಶಾಲೆ. ಪ್ರೌಢ ಶಿಕ್ಷಣ ಮುಗಿಸಿ ಉಪಾಧ್ಯಾಯರ ತರಬೇತು. ಇದರಿಂದ ಕನ್ನಡಕ್ಕೆ ಸಂದ ಅದೃಷ್ಟ ಇಂಗ್ಲಿಷ್ ಓದಿದ್ದರೆ ಮುದ್ದಣ ಕನ್ನಡಕ್ಕೆ ದಕ್ಕುತ್ತಿರಲಿಲ್ಲವೇನೋ ! ಇವರ ದೇಹದಾರ್ಢ್ಯ ನೋಡಿ ವ್ಯಾಯಾಮ ಶಿಕ್ಷಕ ತರಬೇತಿಗೆ ಮದರಾಸಿಗೆ ರವಾನೆ. ತರಬೇತಿ ಮುಗಿಸಿ ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ವ್ಯಾಯಾಮ ಶಿಕ್ಷಕ. ಇದೇ ಶಾಲೆಯಲ್ಲಿದ್ದ ಮಳಲಿ ಸುಬ್ಬರಾಯರ ಸಾಹಿತ್ಯ ಮಾರ್ಗದರ್ಶನ. ಬಾಲ್ಯದ ಆಸಕ್ತಿಗನುಗುಣವಾಗಿ ಯಕ್ಷಗಾನ ನಾಟಕಗಳ ರಚನೆ. ಪ್ರಥಮಕೃತಿ-‘ರತ್ನಾವತೀ ಕಲ್ಯಾಣ’ ನಂತರ ಕುಮಾರ ವಿಜಯ. ಸುಬ್ಬರಾಯರಿಗೆ ಕುಂದಾಪುರಕ್ಕೆ ವರ್ಗಾವಣೆ. ಅವರ ಸಾನಿಧ್ಯ ಬಯಸಿದ ತಾವೂ ವರ್ಗ ಮಾಡಿಸಿಕೊಂಡರು. ಸಂಸ್ಕೃತ ಕಲಿಯಲು ಪ್ರಾರಂಭ. ಅದ್ಭುತ ರಾಮಾಯಣವನ್ನು ಹೇಳಿಸಿಕೊಂಡು ಹಳಗನ್ನಡದಲ್ಲಿ ರಚನೆ. ಮೈಸೂರಿನ ಕಾವ್ಯಮಂಜರಿ ಪತ್ರಿಕೆಯ ಸಂಪಾದಕರಲ್ಲಿ ಕೋರಿಕೆ. ಕರ್ತೃ ಗೊತ್ತಿಲ್ಲವೆಂದು ತಿಳಿಸಿದರು. ೧೮೯೫ರಲ್ಲಿ ಪತ್ರಿಕೆಯಲ್ಲಿ ಪ್ರಕಟಗೊಂಡ ಸಂತಸ. ಶ್ರೀರಾಮ ಪಟ್ಟಾಭಿಷೇಕಂ ಷಟ್ಪದಿಯಲ್ಲಿ ರಚನೆ. ಮಹಾಲಕ್ಷ್ಮಿ ಎಂಬ ಕವಯಿತ್ರಿ ಹೆಸರಿನಲ್ಲಿ ಕೃತಿ ಪ್ರಕಟಣೆ. ಎರಡೂ ಪುಸ್ತಕಗಳೂ ಮದರಾಸು ವಿಶ್ವವಿದ್ಯಾಲಯದ ಪರೀಕ್ಷೆಗಳಿಗೆ ಆದ ಪಠ್ಯಪುಸ್ತಕ. ಕೃತಿಕಾರನ ಹೆಸರು ತಿಳಿಸದಿದ್ದುದರಿಂದ ಮುದ್ದಣನಿಗೆ ಆದ ಹಣದ ನಷ್ಟ  . ಓರ್ವ ಕನ್ನಡಿಗ, ಚಕ್ರಧಾರಿ, ರಂಗಭಟ್ಟನಾತ್ಮಜೆ, ಲಕ್ಷ್ಮೀನಾರಾಯಣ ಎಂಬ ಹೆಸರಿನಿಂದ ರಚನೆಗಳು. ರಾಮಾಶ್ವಮೇಧವನ್ನು ರಚಿಸುವಾಗ ಯಾವ ರೀತಿಯಲ್ಲಿ ಕಾವ್ಯವನ್ನು ರಚಿಸಲಿ ಪದ್ಯದಲ್ಲೋ ಗದ್ಯದಲ್ಲೋ ಎಂದಾಗ ‘ಪದ್ಯವದ್ಯಂ, ಗದ್ಯ ಹೃದ್ಯಂ. ಹೃದ್ಯಮಪ ಗದ್ಯದೊಳೆ ಪೇಳ್ವುದು’ ಎಂದಾಗ ಮುದ್ದಣ-ಮನೋರಮ ಎಂಬ ನಲ್ಲ ನಲ್ಲೆಯರ ಸರಸ ಸಂಭಾಷಣೆಯ ಮೂಲಕ ರಚನೆ. ‘ಕನ್ನಡ ನವೋದಯದ ಮುಂಜಾನೆ ಕೋಳಿ’ ಎಂದು ದೊರೆತ ಕೀರ್ತಿ. ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟು ಎಂದು ಎಸ್.ವಿ. ರಂಗಣ್ಣನವರಿಂದ ಪ್ರಶಂಸೆ. ಬೆನಗಲ್ ರಾಮರಾಯರ ಶಿಫಾರಸ್ಸಿನ ಮೇರೆಗೆ  ಮದರಾಸಿನ ಕ್ರಿಶ್ಚಿಯನ್ ಕಾಲೇಜಿಗೆ ಕನ್ನಡ ಪಂಡಿತರಾಗಿ ಆಯ್ಕೆ. ಕ್ಷಯರೋಗ ತಗುಲಿ ೩೨ನೇ ವಯಸ್ಸಿನಲ್ಲಿ (೧೬-೨-೧೯೦೧) ನಿಧನ. ೭೫ ವರ್ಷಗಳ ನಂತರ ನೆನಪಿಗಾಗಿ ೧೯೭೬ರಲ್ಲಿ ‘ಮುದ್ದಣ ಪ್ರಶಸ್ತಿ’ ಗ್ರಂಥ ಪ್ರಕಟಣೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಅಜ್ಜಂಪುರ ಕೃಷ್ಣಸ್ವಾಮಿ – ೧೯೨೪ ಜೋತ್ಸ್ನಾಕಾಮತ್ – ೧೯೩೭ ಜಯಂತ ಕಾಯ್ಕಿಣಿ – ೧೯೫೫

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top